ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ಆಟಗಾರ ಈಗ ಕಾರ್ಪೆಂಟರ್!

Inspirational Story: Former Australian World Cup winner Xavier Doherty turns carpenter
ಅಂದು ವರ್ಲ್ಡ್ ಕಪ್ ಗೆದ್ದ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಇಂದು ಕಾರ್ಪೆಂಟರ್ | Oneindia Kannada

ಸಿಡ್ನಿ: ಆಸ್ಟ್ರೇಲಿಯಾದ ವಿಶ್ವಕಪ್‌ ವಿಜೇತ ತಂಡದಲ್ಲಿದ್ದ ಕ್ಸೇವಿಯರ್ ಡೊಹೆರ್ಟಿ ಈಗ ಬಡಗಿ (ಕಾರ್ಪೆಂಟರ್) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ಕ್ಸೇವಿಯರ್ ಜೀವನೋಪಾಯಕ್ಕಾಗಿ ಕಳೆದ 4 ವರ್ಷಗಳಿಂದಲೂ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತ ಬದುಕಿನ ಬಂಡಿ ತಳ್ಳುತ್ತಿದ್ದಾರೆ. ಕ್ರಿಕೆಟ್‌ ವೃತ್ತಿ ಬದುಕು ನಿಂತಾಗ ಬೇರೆ ಬೇರೆ ಕೆಲಗಳಲ್ಲಿ ಪ್ರಯತ್ನಿಸಿ ಕೊನೆಗೆ ಬಡಗಿಯಾಗಿ ಹೊಸ ಬದುಕು ಆರಂಭಿಸಿರುವ ಕ್ಸೇವಿಯರ್ ಕತೆ ನಮ್ಮ ಬದುಕಿಗೂ ಸ್ಫೂರ್ತಿ ತುಂಬುತ್ತದೆ.

ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!

ಎಡಗೈ ಸ್ಪಿನ್ನರ್ ಆಗಿದ್ದ ಕ್ಸೇವಿಯರ್ ಡೊಹೆರ್ಟಿ 2001-02ರ ಸೀಸನ್‌ನಲ್ಲಿ ಪ್ರಥಮದರ್ಜೆ ಮತ್ತು ಲಿಸ್ಟ್‌ ಎ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 17 ವರ್ಷಗಳ ಕಾಲ ಡೊಹೆರ್ಟಿ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಕಳೆದಿದ್ದಾರೆ.

ವಿಶ್ವಕಪ್‌ ತಂಡದಲ್ಲಿ ಕ್ಸೇವಿಯರ್

ವಿಶ್ವಕಪ್‌ ತಂಡದಲ್ಲಿ ಕ್ಸೇವಿಯರ್

38ರ ಹರೆಯದ ನಿವೃತ್ತ ಸ್ಪಿನ್ನರ್ ಕ್ಸೇವಿಯರ್ ಡೊಹೆರ್ಟಿ 2015ರಲ್ಲಿ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿದ್ದರು. ಆ ಟೂರ್ನಿಯಲ್ಲಿ ಮೈಕಲ್ ಕ್ಲಾರ್ಕ್ ಆಸೀಸ್ ತಂಡ ಮುನ್ನಡೆಸಿದ್ದರು. ಆವತ್ತು ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ ಗೆಲುವನ್ನಾಚರಿಸಿತ್ತು. ಇದೇ ಟೂರ್ನಿಯ ಒಂದು ಪಂದ್ಯದಲ್ಲಿ ಕ್ಸೇವಿಯರ್ 7 ಓವರ್‌ ಎಸೆದು 60 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಹೀಗಾಗಿ ಮುಂದೆ ಕ್ಸೇವಿಯರ್‌ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದರೆ ಕ್ರಿಕೆಟ್ ನಿವೃತ್ತಿ ಬಳಿಕ ಕ್ಸೇವಿಯರ್ ಬದುಕಿಗೆ ಹೊಸ ವೃತ್ತಿ ಕಂಡುಕೊಂಡಿದ್ದಾರೆ.

ಡೊಹೆರ್ಟಿ ವೃತ್ತಿ ಬದುಕಿನ ಸಾಧನೆ

ಡೊಹೆರ್ಟಿ ವೃತ್ತಿ ಬದುಕಿನ ಸಾಧನೆ

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಶನ್ (ಎಸಿಎ) ಒಂದು ವಿಡಿಯೋ ಅಪ್‌ಲೋಡ್ ಮಾಡಿದೆ. ಇದರಲ್ಲಿ ಡೊಹೆರ್ಟಿ ತಾನು ಹೇಗೆ ಈ ಬಡಗಿಯ ವೃತ್ತಿಗೆ ಸೇರಿದೆ, ಈಗ ಹೇಗೆ ಕೆಲಸವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ತನ್ನ ನೆರವಿಗೆ ಬಂದ ಎಸಿಎಗೆ ಕ್ಸೇವಿಯರ್ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ. 2015ರಲ್ಲಿ ಕಡೇಯ ಬಾರಿ ರಾಷ್ಟ್ರೀಯ ತಂಡಕ್ಕೆ ಆಡಿರುವ ಕ್ಸೇವಿಯರ್, 4 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್, 60 ಏಕದಿನ ಪಂದ್ಯಗಳಲ್ಲಿ 55 ವಿಕೆಟ್, 11 ಟಿ20ಐ ಪಂದ್ಯಗಳಲ್ಲಿ 10 ವಿಕೆಟ್ ದಾಖಲೆ ಹೊಂದಿದ್ದಾರೆ.

'ಒಂದು ವರ್ಷ ತುಂಬಾ ಪರದಾಡಿದ್ದೆ'

'ನಾನೀಗ ಕಾರ್ಪೆಂಟರ್ ಕೆಲಸದ ಮೂಲಕ ಬದುಕನ್ನು ಕಳೆಯುತ್ತಿದ್ದೇನೆ. ಜಾಗದಲ್ಲಿ ಮನೆಗಳನ್ನು ನಿರ್ಮಿಸೋದು ನನ್ನ ಕೆಲಸ. ನಾನಿದನ್ನು ಸಂಭ್ರಮಿಸುತ್ತಿದ್ದೇನೆ. ಹೊರಾಂಗಣದಲ್ಲಿ ಕೈಗಳಲ್ಲಿ ಕೆಲಸ ಮಾಡುತ್ತ ನಾನು ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ. ಕ್ರಿಕೆಟ್‌ಗೆ ಸಂಪೂರ್ಣ ವಿಭಿನ್ನ ಸಂಗತಿಯನ್ನು ನಾನು ಕಲಿಯುತ್ತಿದ್ದೇನೆ. ಕ್ರಿಕೆಟ್ ಮುಗಿಸಿದಾಗ ನನಗೆ ಮುಂದೇನು ಮಾಡಬೇಕೆಂದು ತೋಚಿರಲಿಲ್ಲ. ಆಗ ನಾನು ಸುಮಾರು 12 ತಿಂಗಳ ಕಾಲ ಏನೇನೋ ಕೆಲಸ ಮಾಡಿದೆ. ಲ್ಯಾಂಡ್‌ಸ್ಕೇಪಿಂಗ್, ಆಫೀಸ್ ಕೆಲಸ, ಕ್ರಿಕೆಟ್ ಕೆಲಸ ಹೀಗೆ ಇಂಥದನ್ನು ಮಾಡಿ ಕೊನೆಗೆ ಕಾರ್ಪೆಂಟರ್ ಕೆಲಸದಲ್ಲಿ ಬದುಕು ಕಂಡುಕೊಂಡೆ,' ಎಂದು ಕ್ಸೇವಿಯರ್ ಹೇಳಿದ್ದಾರೆ.

Story first published: Tuesday, June 1, 2021, 16:03 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X