ಪಾನೀಪೂರಿ ಮಾರಿ ಮಿಲಿಯನೇರ್ ಸಾಲಿಗೆ ಬಂದ ಕ್ರಿಕೆಟಿಗನ ಹಿಸ್ಟರಿ-ಮಿಸ್ಟರಿ!

ಕೋಲ್ಕತ್ತಾ, ಡಿಸೆಂಬರ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಗಾಗಿ ನಡೆದ ಆಟಗಾರರ ಹರಾಜಿನಲ್ಲಿ ಉತ್ತರ ಪ್ರದೇಶದ ಯುವ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಗಮನಾರ್ಹ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ಪಾಲಾಗಿದ್ದಾರೆ.

IPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

ಈಗಿನ್ನು 17ರ ಹರೆಯದವರಾಗಿರುವ ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 2.40 ಕೋಟಿ ರೂ.ಗೆ ಖರೀದಿಸಿದೆ. ಮುಂಬೈ ಪರ ಒಳ್ಳೆಯ ಪ್ರದರ್ಶನ ನೀಡಿ, ಐಪಿಎಲ್‌ನಲ್ಲಿ ಉತ್ತಮ ಮೊತ್ತಕ್ಕೆ ಸೇಲಾಗಿರುವ ಯುವ ಆಟಗಾರನ ಬದುಕಿನ ಹಿಂದೆ ಕೆಲ ಕುತೂಹಲಕಾರಿ ಕತೆಗಳಿವೆ.

ಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿ

ಪಾನೀಪೂರಿ ಮಾರಬೇಕಾದ ಅನಿವಾರ್ಯತೆಗೆ ಬದುಕು ಎಳೆದೊಯ್ದಿದ್ದರೂ, ಕ್ರಿಕೆಟ್‌ ಪ್ರತಿಭೆಯಾಗಿ ಇಂದು ಬೆಳೆಯುತ್ತಿರುವ ಯಶಸ್ವಿ ಜೈಸ್ವಾಲ್ ಬದುಕಿನ ಕೆಲ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಕನಸಿನ ಬೆನ್ನತ್ತಿ ಹೊರಟವ

ಕನಸಿನ ಬೆನ್ನತ್ತಿ ಹೊರಟವ

ಯಶಸ್ವಿ ಜೈಸ್ವಾಲ್ ಜನಿಸಿದ್ದು ಉತ್ತರ ಪ್ರದೇಶದ ಬಧೋಹಿ ಎಂಬ ಪುಟ್ಟ ನಗರದಲ್ಲಿ. ಆದರೆ ಕ್ರಿಕೆಟರ್ ಆಟಗಾರ ಆಗುವಾಸೆಯಿಂದ ಜೈಸ್ವಾಲ್ 11ರ ಹರೆಯದವರಾಗಿದ್ದಾಗಲೇ ಹುಟ್ಟೂರನ್ನು ತ್ಯಜಿಸಿದ್ದರು. ಆದರೆ ಬಡತನವಿದ್ದ ಕಾರಣದಿಂದ ಜೈಸ್ವಾಲ್‌ಗೆ ಕ್ರಿಕೆಟರ್ ಆಗುವ ಕನಸು ಸುಲಭವಾಗಿ ಈಡೇರಿರಲಿಲ್ಲ. ಹೆಸರು ಯಶಸ್ವಿ ಎಂದಿತ್ತಾದರೂ ಯಶಸ್ವಿ ಅನೇಕ ಬದುಕಿನ ಸವಾಲುಗಳನ್ನು ಎದುರುಗೊಳ್ಳಬೇಕಾಗಿ ಬಂದಿತ್ತು.

ಪಾನೀಪೂರಿ ಮಾರಾಟ

ಪಾನೀಪೂರಿ ಮಾರಾಟ

ಬಡತನವಿದ್ದಿದ್ದರಿಂದ ಕ್ರಿಕೆಟ್ ಪ್ರಾಕ್ಟೀಸ್ ಮುಗಿದ ಬಳಿಕ ಯಶಸ್ವಿ ಜೈಸ್ವಾಲ್ ಮುಂಬೈಯ ದಾರಿಗಳಲ್ಲಿ ಪಾನೀಪೂರಿ ಮಾರುತ್ತಿದ್ದರು. ಆಗೆಲ್ಲ ಜೈಸ್ವಾಲ್ ಕಷ್ಟದ ದಿನಗಳನ್ನು ಕಂಡಿದ್ದರು. ಆದರೆ ಮುಂಬೈ ಕ್ರಿಕೆಟ್ ಕ್ಲಬ್‌ನ ಸ್ಥಾಪಕ ಮತ್ತು ಕೋಚ್ ಜ್ವಾಲ ಸಿಂಗ್‌ಗೆ ಈ ಚುರುಕು ಹುಡುಗ, ನಾಳೆ ಪ್ರತಿಭಾನ್ವಿತ ಕ್ರಿಕೆಟಿಗ ಅನ್ನಿಸಿಕೊಳ್ಳುತ್ತಾನೆ ಅನ್ನಿಸಿತು. ಸಿಂಗ್ ಆತನನ್ನು ಕ್ರಿಕೆಟ್ ಮೈದಾನಕ್ಕೆ ಎಳೆತಂದರು, ತರಬೇತಿ ನೀಡಿದರು. ಅಲ್ಲಿಂದ ಜೈಸ್ವಾಲ್ ಕ್ರಿಕೆಟ್ ರಂಗದಲ್ಲಿ ಬೆಳೆಯಲಾರಂಭಿಸಿದ.

12ನೇ ವರ್ಷದವರಾಗಿದ್ದಾಗಲೇ ದಾಖಲೆ!

12ನೇ ವರ್ಷದವರಾಗಿದ್ದಾಗಲೇ ದಾಖಲೆ!

ಹೈಸ್ಕೂಲು ಕಲಿಯುತ್ತಿದ್ದಾಗಲೇ ಅಂದರೆ 12ನೇ ವರ್ಷದವರಾಗಿದ್ದಾಗಲೇ ಯಶಶ್ವಿ ಜೈಸ್ವಾಲ್ ದಾಖಲೆ ಪುಟ ಸೇರಿದ್ದರು. 2014ರ ಜನವರಿಯಲ್ಲಿ ನಡೆದಿದ್ದ ಗೈಲ್ಸ್ ಶೀಲ್ಡ್ ಶಾಲೆಗಳ ಕ್ರಿಕೆಟ್ ಪಂದ್ಯದಲ್ಲಿ 319 ರನ್‌ಗಳ ಸುದೀರ್ಘ ಬ್ಯಾಟಿಂಗ್ ಮತ್ತು 99 ರನ್‌ಗೆ 13 ವಿಕೆಟ್‌ ಮುರಿದು ಜೈಸ್ವಾಲ್ ದಾಖಲೆ ನಿರ್ಮಿಸಿದ್ದರು. ಅಂಜುಮಾನ್ ಇಸ್ಲಾಮ್ ಹೈಸ್ಕೂಲ್ ಪ್ರತಿನಿಧಿಸಿದ್ದ ಯಶಸ್ವಿ, ರಾಜಾ ಶಿವಾಜಿ ವಿದ್ಯಾಮಂದಿರ್ ವಿರುದ್ಧ ಈ ದಾಖಲೆಯ ಪ್ರದರ್ಶನ ನೀಡಿದ್ದರು.

ಯೂತ್ ಏಷ್ಯಾಕಪ್‌ನಲ್ಲಿ ಲೀಡಿಂಗ್ ಸ್ಕೋರರ್

ಯೂತ್ ಏಷ್ಯಾಕಪ್‌ನಲ್ಲಿ ಲೀಡಿಂಗ್ ಸ್ಕೋರರ್

2018ರ ಯೂತ್ ಏಷ್ಯಾಕಪ್‌ನಲ್ಲಿ ಯಶಸ್ವಿ, 4 ಪಂದ್ಯಗಳಲ್ಲಿ 318 ರನ್ ಬಾರಿಸಿದ್ದರು. ಮತ್ತೊಂದು ಗಮ್ಮತ್ತಿನ ಸಂಗತಿಯೆಂದರೆ ಜೈಸ್ವಾಲ್ ತಂಡದ ಬೇರೆ ಯಾವ ಆಟಗಾರನೂ ಇಡೀ ಟೂರ್ನಿಯಲ್ಲಿ 200 ರನ್ ಗೆರೆ ಕೂಡ ದಾಟಿಸಿರಲಿಲ್ಲ. ಇದೇ ವರ್ಷ ಅಂದರೆ 2019-20ರ ವಿಜಯ್ ಹಜಾರೆ ಟ್ರೋಫಿ ಪಂದ್ಯವೊಂದರಲ್ಲಿ ಯಶಸ್ವಿ ದ್ವಿಶತಕ ಬಾರಿಸಿದ್ದರು. ಆ ಮೂಲಕ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರನಾಗಿ ಜೈಸ್ವಾಲ್ ಮಿಂಚಿದ್ದರು.

ಆ್ಯಲನ್ ಬ್ಯಾರೋ ದಾಖಲೆ ಬದಿಗೆ

ಆ್ಯಲನ್ ಬ್ಯಾರೋ ದಾಖಲೆ ಬದಿಗೆ

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ದಕ್ಷಿಣ ಆಫ್ರಿಕಾದ ಆ್ಯಲನ್ ಬ್ಯಾರೋ ಅವರ ಹೆಸರಿನಲ್ಲಿತ್ತು. 1975ರಲ್ಲಿ 20 ವರ್ಷ, 275 ದಿನದವರಾಗಿದ್ದ ಬ್ಯಾರೋ ಈ ದಾಖಲೆ ನಿರ್ಮಿಸಿದ್ದರು. ಆದರೆ ಜೈಸ್ವಾಲ್ ದ್ವಿಶತಕ ಬಾರಿಸಿದ್ದು 17 ವರ್ಷ 292 ದಿನ ವಯಸ್ಸಿನವರಾಗಿದ್ದಾಗ. ಅಲ್ಲದೆ 2020ರ ಅಂಡರ್ 19 ವಿಶ್ವಕಪ್‌ ತಂಡದಲ್ಲೂ ಜೈಸ್ವಾಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

12 ಪಟ್ಟು ಹೆಚ್ಚಿನ ಬೆಲೆ

12 ಪಟ್ಟು ಹೆಚ್ಚಿನ ಬೆಲೆ

ಮುಂಬೈ ಪರ ಛತ್ತೀಗಢ ವಿರುದ್ಧ ಲಿಸ್ಟ್‌ ಎ ವೃತ್ತಿ ಬದುಕಿಗೆ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್, ಒಟ್ಟು 12 ಪಂದ್ಯಗಳಲ್ಲಿ 70.81ರ ಸರಾಸರಿಯಂತೆ 779 ರನ್ ಗಳಿಸಿದ್ದರು. ಇದಲ್ಲಿ 3 ಶತಕಗಳು ಮತ್ತು 3 ಅರ್ಧ ಶತಕಗಳು ಸೇರಿದ್ದವು. ಈ ಬಾರಿಯ ಐಪಿಎಲ್ ಹರಾಜು ಕಣದಲ್ಲಿದ್ದ ಜೈಸ್ವಾಲ್ ಅವರ ಮೂಲಬೆಲೆ 20 ಲಕ್ಷ ರೂ. ಆಗಿತ್ತು. ಆದರೆ ರಾಜಸ್ಥಾನ ಅವರನ್ನು ಖರೀದಿಸಿದ್ದು 2.40 ಕೋ.ರೂಗೆ. ಅಂದರೆ ಮೂಲಬೆಲೆಯ 12 ಪಟ್ಟು ಹೆಚ್ಚು ಮೊತ್ತಕ್ಕೆ ಜೈಸ್ವಾಲ್ ಖರೀದಿಸಲ್ಪಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, December 20, 2019, 16:05 [IST]
Other articles published on Dec 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X