ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನವೆಂಬರ್ 27: ಒಂದಲ್ಲ ಎರಡಲ್ಲ.. ಮೂರು ಜಿದ್ದಾಜಿದ್ದಿನ ಕ್ರಿಕೆಟ್ ಪಂದ್ಯಗಳು

 International cricket tournament to start between 6 big countries from Nov 27

ಕೊರೊನಾ ವೈರಸ್‌ನ ಅಬ್ಬರದಲ್ಲಿ ಸ್ತಬ್ಧವಾಗಿದ್ದ ಕ್ರಿಕೆಟ್ ಜಗತ್ತು ಮತ್ತೆ ತನ್ನ ಹಾದಿಗೆ ಮರಳಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಮತ್ತೆ ಸಕ್ರಿಯವಾಗಿದೆ. ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣವಾಗಿ ಮನರಂಜನೆ ಪಡೆಯಲು ಸಿದ್ಧರಾಗಿದ್ದಾರೆ. ನವೆಂಬರ್ 27ರಂದು ಒಂದೇ ದಿನ ಮೂರು ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿದೆ.

ಹೌದು, ನವೆಂಬರ್ 27ರ ಶುಕ್ರವಾರದಂದು ಭರ್ಜರಿ ಮೂರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಅದರಲ್ಲಿ ಒಂದು ಏಕದಿನ ಪಂದ್ಯ ವಾಗಿದ್ದರೆ ಮತ್ತೆರಡು ಅಂತಾರಾಷ್ಟ್ರೀಯ ಟಿ20 ಕದನಗಳಾಗಿದೆ. ಹೀಗಾಗಿ ಅಭಿಮಾನಿಗಳು ಒಂದೇ ದಿನ ಮೂರು ಪಂದ್ಯಗಳಿಗೆ ಸಾಕ್ಷಿಯಾಗಬಹುದು.

ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?ಭಾರತ vs ಆಸ್ಟ್ರೇಲಿಯಾ ಸರಣಿಗಳನ್ನು ಉಚಿತವಾಗಿ ನೋಡೋದು ಹೇಗೆ?

ಹಾಗಾದರೆ ಆ ಮೂರು ಪಂದ್ಯಗಳು ಯಾವುದು? ಯಾವೆಲ್ಲಾ ತಂಡಗಳು ಕಾದಾಡಲಿದೆ? ಭಾರತದಲ್ಲಿ ಎಷ್ಟು ಗಂಟೆಗೆ ಈ ಪಂದ್ಯಗಳು ಆರಂಭವಾಗಲಿದೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

ಭಾರತ vs ಆಸ್ಟ್ರೇಲಿಯಾ, ಏಕದಿನ ಪಂದ್ಯ

ಭಾರತ vs ಆಸ್ಟ್ರೇಲಿಯಾ, ಏಕದಿನ ಪಂದ್ಯ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಏಕದಿನ ಸರಣಿಯ ಮೊದಲ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಕ್ಕೆ 9: 10ಕ್ಕೆ ಆರಂಭವಾಗಲಿದೆ. ಎರಡು ಅಗ್ರ ತಂಡಗಳು ಈ ಕಾದಾಟದಲ್ಲಿ ಮುಖಾಮುಖಿಯಾಗುತ್ತಿದೆ.

ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ ಟಿ20ಐ

ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ ಟಿ20ಐ

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿಕ ಟಿ20 ಪಂದ್ಯವೂ ನಾಳೆಯೇ ನಡೆಯಲಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದಾಗಿದ್ದು ನ್ಯೂಜಿಲೆಂಡ್‌ನ ಆಕ್ಲಂಡ್‌ನಲ್ಲಿರುವ ಈಡನ್ ಪಾರ್ಕ್‌ನಲ್ಲಿ ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 11:30ಕ್ಕೆ ಈ ಪಂದ್ಯ ನಡೆಯಲಿದೆ.

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌ ಟಿ20ಐ

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌ ಟಿ20ಐ

ನಾಳೆ ನಡೆಯಲಿರುವ ಇನ್ನೊಂದು ಪಂದ್ಯ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯುವ ಟಿ20 ಪಂದ್ಯವಾಗಿದೆ. ಇದು ಕೂಡ 3 ಪಂದ್ಯಗಳ ಟಿ20 ಸರಣಿಯಾಗಿದ್ದು ದಕ್ಷಿಣ ಆಫ್ರಿಕಾ ಆತಿಥ್ಯವಹಿಸಿಕೊಂಡಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

Story first published: Thursday, November 26, 2020, 17:03 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X