ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

International Left-Handers Day: Top 10 Greatest Left-Handed Batsmen in Cricket History

ಬೆಂಗಳೂರು: ಅಮ್ಮಂದಿರ ದಿನ, ಅಪ್ಪಂದಿರ ದಿನ, ಪರಿಸರದ ದಿನ, ಪ್ರೀತಿಯ ದಿನ, ಕಾರ್ಮಿಕರ ದಿನ, ಕ್ರೀಡಾ ದಿನ, ಸ್ನೇಹಿತರ ದಿನ ಹೀಗೆ ವಿಶೇಷ 'ಡೇ'ಗಳಿರುತ್ತವೆಯಲ್ಲ? ಹಾಗೇ ಎಡಚರಿಗೂ ಒಂದು ದಿನವಿದೆ. ಆಗಸ್ಟ್ 13ರನ್ನು ಅಂತಾರಾಷ್ಟ್ರೀಯ ಎಡಚರ ದಿನವಾಗಿ ಆಚರಿಸಲಾಗುತ್ತದೆ. ಎಡಗೈಯಲ್ಲಿ ಬರೆಯುವ, ಎಡಗೈಲಿ ಚೆಂಡೆಸೆಯುವ, ಎಡಗೈಯಲ್ಲಿ ಕಡಿಯುವ-ಕೊಯ್ಯುವ, ಎಡಗೈನಲ್ಲಿ ಬ್ಯಾಟಿಂಗ್ ಮಾಡುವ, ಕೆಲಸಗಳಿಗೆ ಎಡಗೈಯನ್ನೇ ಹೆಚ್ಚಾಗಿ ಬಳಸುವ ಮಂದಿಗೆಲ್ಲ ಈ ದಿನ ಅರ್ಪಣೆ ಮಾಡಲಾಗಿದೆ.

ವಿಶ್ವ ದಾಖಲೆ ಸನಿಹದಲ್ಲಿದ್ದಾರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ವಿಶ್ವ ದಾಖಲೆ ಸನಿಹದಲ್ಲಿದ್ದಾರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್

ಎಡಗೈ ಬ್ಯಾಟಿಂಗ್‌ಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿರುವ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಎಡಚರ ದಿನವಾದ ಇಂದು ಎಡಗೈ ಬ್ಯಾಟಿಂಗ್‌ಗಾಗಿ ಮಿಂಚಿದ ಶ್ರೇಷ್ಠ ದಾಂಡಿಗರನ್ನು ಕ್ರಿಕೆಟ್ ಪ್ರೇಮಿಗಳು ಸ್ಮರಿಸಿಕೊಳ್ಳಲೇಬೇಕು.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳುಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಕ್ರಿಕೆಟ್ ಇತಿಹಾಸದಲ್ಲಿ ಮಿನುಗಿದ ಟಾಪ್ 10 ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳ ಮಾಹಿತಿ ಇಲ್ಲಿದೆ.

1. ಬ್ರಿಯಾನ್ ಲಾರಾ

1. ಬ್ರಿಯಾನ್ ಲಾರಾ

ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಗರುತಿಸಿಕೊಳ್ಳುವವರು. ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ಲಾರಾ ವೆಸ್ಟ್ ಇಂಡೀಸ್ ಹೊರತಾಗಿ ಮೇರಿಲೆಬೋನ್ ಕ್ರಿಕೆಟ್ ಕ್ಲಬ್, ಮುಂಬೈ ಚಾಂಪ್ಸ್, ನಾರ್ದರ್ನ್ ಟ್ರಾನ್ಸ್ವಾಲ್, ಸದರ್ನ್ ರಾಕ್ಸ್, ಮತ್ತು ವಾರ್ವಿಕ್‌ಷೈರ್ ತಂಡಗಳ ಪರ ಆಡಿದ್ದಾರೆ. 131 ಟೆಸ್ಟ್ ಪಂದ್ಯಗಳನ್ನಾಡಿರುವ ಲಾರಾ 52.88 ಸರಾಸರಿಯಲ್ಲಿ 11953 ರನ್ ಗಳಿಸಿದ್ದಾರೆ. 34 ಶತಕಗಳನ್ನು ಬಾರಿಸಿದ್ದಾರೆ. 299 ಏಕದಿನ ಪಂದ್ಯಗಳಲ್ಲಿ 10405 ರನ್, 19 ಶತಕಗಳನ್ನು ಬಾರಿಸಿದ್ದಾರೆ.

2. ಸೌರವ್ ಗಂಗೂಲಿ

2. ಸೌರವ್ ಗಂಗೂಲಿ

ಟೀಮ್ ಇಂಡಿಯಾದ ಮಾಜಿ ನಾಯಕ, ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಎಡಗೈ ಬ್ಯಾಟಿಂಗ್‌ಗೆ ಹೆಚ್ಚು ಫೇಮಸ್ಸು. ಭಾರತವಲ್ಲದೆ ಬಂಗಾಳ, ಕೋಲ್ಕತಾ ನೈಟ್ ರೈಡರ್ಸ್, ಲಂಕಾಷೈರ್, ಮೇರಿಲೆಬೋನ್ ಕ್ರಿಕೆಟ್ ಕ್ಲಬ್, ನಾರ್ಥಾಂಪ್ಟನ್ಶೈರ್ ಮತ್ತು ಪುಣೆ ವಾರಿಯರ್ಸ್ ಪರ ಆಡಿರುವ ಗಂಗೂಲಿ 113 ಟೆಸ್ಟ್ ಪಂದ್ಯಗಳಲ್ಲಿ 7212 ರನ್, 16 ಶತಕ, 311 ಏಕದಿನ ಪಂದ್ಯಗಳಲ್ಲಿ 11363 ರನ್, 22 ಶತಕಗಳನ್ನು ಸಿಡಿಸಿದ್ದಾರೆ.

3. ಸರ್ ಗ್ಯಾರಿ ಸೋಬರ್ಸ್

3. ಸರ್ ಗ್ಯಾರಿ ಸೋಬರ್ಸ್

ವೆಸ್ಟ್ ಇಂಡೀಸ್ ಮತ್ತೊಬ್ಬ ದಂತಕತೆ ಸರ್ ಗ್ಯಾರಿ ಸೋಬರ್ಸ್ ಕೂಡ ಲೆಫ್ಟ್‌ ಹ್ಯಾಂಡ್ ಬ್ಯಾಟ್ಸ್‌ಮನ್. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಗಳಿರುವ ಸೋಬರ್ಸ್ 160 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 8032 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕ, 30 ಅರ್ಧ ಶತಕಗಳು ಸೇರಿವೆ.

4. ಆ್ಯಡಮ್ ಗಿಲ್‌ಕ್ರಿಸ್ಟ್

4. ಆ್ಯಡಮ್ ಗಿಲ್‌ಕ್ರಿಸ್ಟ್

ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮಿಡ್ಲ್‌ಸೆಕ್ಸ್, ನ್ಯೂ ಸೌತ್ ವೇಲ್ಸ್, ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳ ಪರ ಆಡಿರುವ ಆ್ಯಡಮ್ ಗಿಲ್‌ಕ್ರಿಸ್ಟ್‌, ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡವರು. 96 ಟೆಸ್ಟ್ ಪಂದ್ಯಗಳಲ್ಲಿ ಗಿಲ್‌ಕ್ರಿಸ್ಟ್‌ 47.60ರ ಸರಾಸರಿಯಲ್ಲಿ 5570 ರನ್, 17 ಶತಕಗಳನ್ನು ಬಾರಿಸಿದ್ದಾರೆ. 287 ಏಕದಿನ ಪಂದ್ಯಗಳಲ್ಲಿ 9619 ರನ್, 16 ಶತಕಗಳನ್ನು ಬಾರಿಸಿದ್ದಾರೆ. 13 ಟಿ20ಐ ಪಂದ್ಯಗಳಲ್ಲಿ 272 ರನ್ ಗಳಿಸಿದ್ದಾರೆ.

5. ಕುಮಾರ ಸಂಗಕ್ಕಾರ

5. ಕುಮಾರ ಸಂಗಕ್ಕಾರ

ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಕೂಡ ಅತ್ಯುತ್ತಮ ಎಡಗೈ ಬ್ಯಾಟ್ಸ್‌ಮನ್. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದ ಸಂಗಕ್ಕಾರ 134 ಟೆಸ್ಟ್ ಪಂದ್ಯಗಳಲ್ಲಿ 12400 ರನ್ ಗಳಿಸಿದ್ದಾರೆ. 38 ಶತಕಗಳನ್ನು ಬಾರಿಸಿದ್ದಾರೆ. ಬರೋಬ್ಬರಿ 404 ಏಕದಿನ ಪಂದ್ಯಗಳನ್ನು ಆಡಿರುವ ಸಂಗಕ್ಕಾರ 14234 ರನ್, 25 ಶತಕಗಳ ದಾಖಲೆ ಹೊಂದಿದ್ದಾರೆ.

6. ಯುವರಾಜ್ ಸಿಂಗ್

6. ಯುವರಾಜ್ ಸಿಂಗ್

'ಕೆಚ್ಚೆದೆಯ ಮಹಾರಾಜ' ಎಂದೇ ಖ್ಯಾತರಾಗಿದ್ದ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕೂಡ ಲೆಫ್ಟ್‌ ಹ್ಯಾಂಡರ್. ಸಿಕ್ಸ್ 6 ಅಂತ ಹೇಳಿದರೆ ಪಕ್ಕನೆ ನೆನಪಾಗೋದೇ ಯುವಿ. ಟಿ20ಐನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸ್ ಚಚ್ಚಿದ ವಿಶ್ವದಾಖಲೆ ನಿರ್ಮಿಸಿರುವ ಯುವರಾಜ್, 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್ ಗಳಿಸಿದ್ದಾರೆ. ಇನ್ನು 304 ಏಕದಿನ ಪಂದ್ಯಗಳಲ್ಲಿ 8701 ರನ್, 14 ಶತಕ, 58 ಟಿ20ಐ ಪಂದ್ಯಗಳಲ್ಲಿ 1177 ರನ್, 8 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ.

7. ಸನತ್ ಜಯಸೂರ್ಯ

7. ಸನತ್ ಜಯಸೂರ್ಯ

ಶ್ರೀಲಂಕಾ ಶ್ರೇಷ್ಠ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಕೂಡ ಲೆಫ್ಟಿ. ಲಂಕಾವಲ್ಲದೆ ಕೊಲಂಬೊ ಕ್ರಿಕೆಟ್ ಕ್ಲಬ್, ಡಾಲ್ಫಿನ್ಸ್, ಮೇರಿಲೆಬೊನ್ ಕ್ರಿಕೆಟ್ ಕ್ಲಬ್, ಮುಂಬೈ ಇಂಡಿಯನ್ಸ್, ರುಹುನಾ ಮತ್ತು ಸಮರ್ಸೆಟ್ ತಂಡಗಳ ಪರ ಜಯಸೂರ್ಯ ಆಡಿದ್ದಾರೆ. 110 ಟೆಸ್ಟ್ ಪಂದ್ಯಗಳಲ್ಲಿ ಸನತ್, 6973 ರನ್ ಗಳಿಸಿದ್ದಾರೆ, 14 ಶತಕ ಬಾರಿಸಿದ್ದಾರೆ. 445 ಏಕದಿನ ಪಂದ್ಯಗಳಲ್ಲಿ 13430 ರನ್, 28 ಶತಕ ಬಾರಿಸಿದ್ದಾರೆ. 31 ಟಿ20ಐ ಪಂದ್ಯಗಳಲ್ಲಿ 629 ರನ್ ದಾಖಲೆ ಮಾಡಿದ್ದಾರೆ.

8. ಅಲನ್ ಬಾರ್ಡರ್

8. ಅಲನ್ ಬಾರ್ಡರ್

ಆಸ್ಟ್ರೇಲಿಯಾ ದಂತಕತೆ ಅಲನ್ ಬಾರ್ಡರ್ ಅವರು ಎಸೆಕ್ಸ್, ಗ್ಲೌಸೆಸ್ಟರ್‌ಶೈರ್, ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್ ಪರ ಆಡಿದ ಅನುಭವ ಹೊಂದಿದ್ದರು. 156 ಟೆಸ್ಟ್ ಪಂದ್ಯಗಳಲ್ಲಿ 11174 ರನ್, 27 ಶತಕ, 273 ಏಕದಿನ ಪಂದ್ಯಗಳಲ್ಲಿ 6524 ರನ್, 3 ಶತಕಗಳ ದಾಖಲೆ ಬಾರ್ಡರ್ ಹೆಸರಿನಲ್ಲಿದೆ.

9. ಸಾಯೀದ್ ಅನ್ವರ್

9. ಸಾಯೀದ್ ಅನ್ವರ್

ಪಾಕಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಸಾಯೀದ್ ಅನ್ವರ್ ಕೂಡ ಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರು. 55 ಟೆಸ್ಟ್ ಪಂದ್ಯಗಳಲ್ಲಿ 4052 ರನ್, 11 ಶತಕ, 247 ಏಕದಿನ ಪಂದ್ಯಗಳಲ್ಲಿ 8824 ರನ್, 20 ಶತಕಗಳನ್ನು ಅನ್ವರ್ ಬಾರಿಸಿದ್ದಾರೆ. ಪಾಕ್ ತಂಡವಲ್ಲದೆ ಅಗ್ರಿಕಲ್ಚರ್ ಡೆವಲಪ್‌ಮೆಂಟ್‌ ಬ್ಯಾಂಕ್ ಆಫ್ ಪಾಕಿಸ್ತಾನ, ಕರಾಚಿ, ಲಾಹೋರ್ ತಂಡಗಳ ಪರ ಸಾಯೀದ್ ಆಡಿದ್ದಾರೆ.

10. ಮ್ಯಾಥ್ಯೂ ಹೇಡನ್

10. ಮ್ಯಾಥ್ಯೂ ಹೇಡನ್

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ ಮಿಂಚಿದ್ದ ಮ್ಯಾಥ್ಯೂ ಹೇಡನ್ ಆಸೀಸ್ ಅಲ್ಲದೆ ಬ್ರಿಸ್ಬೇನ್ ಹೀಟ್, ಚೆನ್ನೈ ಸೂಪರ್ ಕಿಂಗ್ಸ್, ಹ್ಯಾಂಪ್ಶೈರ್ ಮತ್ತು ನಾರ್ಥಾಂಪ್ಟನ್ಶೈರ್ ಪರ ಕೂಡ ಆಡಿದ್ದಾರೆ. 103 ಟೆಸ್ಟ್ ಪಂದ್ಯಗಳಲ್ಲಿ 8625 ರನ್, 30 ಶತಕ, 161 ಏಕದಿನ ಪಂದ್ಯಗಳಲ್ಲಿ 6133 ರನ್, 10 ಶತಕ, 9 ಟಿ20ಐ ಪಂದ್ಯಗಳಲ್ಲಿ 308 ರನ್ ಗಳಿಸಿದ್ದಾರೆ.

Story first published: Saturday, August 15, 2020, 11:21 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X