ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ನಾಯಕ ವಿರಾಟ್ ಬೆನ್ನಿಗೆ ನಿಂತ ಪಾಕ್‌ ಮಾಜಿ ನಾಯಕ

Inzamam-ul-Haq backs Virat Kohli, says theres nothing to worry
Inzamam backs Kohli, says there's nothing to worry | Inzamam | Virat Kohli | India | Pakistan

ಲಾಹೋರ್, ಮಾರ್ಚ್ 2: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್‌ಝಮಾಮ್ ಉಲ್ ಹಕ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬೆನ್ನಿಗೆ ನಿಂತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಸೋತಿದ್ದನ್ನು ತಲೆಗೆ ಹಚ್ಚಿಕೊಳ್ಳಬೇಡ. ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಹೋರಾಟ ನಡೆಸಿ ಗೆದ್ದರಾಯಿತು ಎಂದು ಸಮಾಧಾನಿಸಿದ್ದಾರೆ.

ಸೋಮವಾರ (ಮಾರ್ಚ್ 2) ಮುಕ್ತಾಯಗೊಂಡ ಭಾರತ-ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಅಷ್ಟೇ ಅಲ್ಲ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-2ರ ಸೋಲನುಭವಿಸಿತ್ತು. ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್‌ ಕೂಡ ಕಳಪೆಯಾಗಿತ್ತು. 4 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 2, 19, 3 ಮತ್ತು 14 ರನ್ ಅಷ್ಟೇ ಗಳಿಸಿದ್ದರು.

ಭಾರತ ತಂಡದ ಸೋಲು ಮತ್ತು ವಿರಾಟ್ ಕೊಹ್ಲಿಯ ಪ್ರದರ್ಶನದ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸಿರುವ ಇನ್‌ಝಮಾಮ್ ಉಲ್ ಹಕ್, 'ಕೊಹ್ಲಿಯ ತಂತ್ರಗಾರಿಕೆಯ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆ ಮಾತುಗಳು ಕೇಳುವಾಗ ನನಗೆ ಅಚ್ಚರಿಯಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 70 ಶತಕಗಳನ್ನು ಬಾರಿಸಿದ್ದಾರೆ. ಅವರ ತಂತ್ರಜಾರಿಕೆಯನ್ನು ನಾವು ಪ್ರಶ್ನಿಸುವುದು ಹೇಗೆ ಸಾಧ್ಯ,' ಎಂದಿದ್ದಾರೆ.

'ಆಟಗಾರನೊಬ್ಬ ತನ್ನ ಅತ್ಯುತ್ತಮ ಪ್ರಯತ್ನ ಹಾಕಿದ ಮೇಲೂ ಮತ್ತೊಬ್ಬರಿಂದ ಟೀಕಿಸಲ್ಪಡುವ ಸಂದರ್ಭವೊಂದು ಎದುರಾಗುತ್ತದೆ ಎಂದು ನಾನೊಬ್ಬ ಕ್ರಿಕೆಟರ್ ಆಗಿ ಹೇಳುತ್ತೇನೆ. ಕೊಹ್ಲಿ ಆಡಲಿಲ್ಲ ಹೌದು. ಆದರೆ ಉಳಿದ ಆಟಗಾರರು ಏನು ಮಾಡಿದರು? ಇದು ಕ್ರಿಕೆಟ್‌ನಲ್ಲಿನ ಏರಿಳಿತದ ಕ್ಷಣವಷ್ಟೇ,' ಎಂದು ಹಕ್ ಕೊಹ್ಲಿಯನ್ನು ಸಾಂತ್ವನಿಸಿದ್ದಾರೆ.

'ಪಂದ್ಯ ಸೋತಿರುವುದರಿಂದ ನಿನ್ನ ಬ್ಯಾಟಿಂಗ್‌ ಟೆಕ್ನಿಕ್ ಬದಲಾಯಿಸಬೇಕೆಂದು ಎಲ್ಲರೂ ಮಾತನಾಡುತ್ತಿದ್ದಾರೆ. ಹಾಗಂತ ನೀನು ನಿನ್ನ ಟೆಕ್ನಿಕ್ ಬದಲಾಯಿಸಬೇಕಿಲ್ಲ. ಇಂಥ ಸಂದರ್ಭಗಳು ಕ್ರಿಕೆಟ್‌ ಬದುಕಿನಲ್ಲಿ ಬಂದು ಹೋಗುತ್ತದೆ. ಮುಂದಿನ ಪಂದ್ಯದಲ್ಲಿ ಬಲಿಷ್ಠ ಹೋರಾಟ ನಡೆಸಿದರಾಯಿತು. ಈ ಸೋಲಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ,' ಎಂದು ಹಕ್ ಕೊಹ್ಲಿಗೆ ಸಲಹೆಯಿತ್ತಿದ್ದಾರೆ.

Story first published: Monday, March 2, 2020, 22:28 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X