ಆಸಿಸ್ ವಿರುದ್ಧದ ಭಾರತದ ಗೆಲುವಿಗೆ ದ್ರಾವಿಡ್ ಕೊಡುಗೆ ಅಪಾರ: ಇನ್ಜಮಾಮ್ ಉಲ್ ಹಕ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಸಾಧಿಸಿದ ಸರಣಿ ಗೆಲುವಿನ ಹಿಂದೆ ರಾಹುಲ್ ದ್ರಾವಿಡ್ ಪರಿಶ್ರಮವನ್ನು ಪ್ರಶಂಸಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಲ್ ಭಾರತದ ಈ ಸಾಧನೆಯಲ್ಲಿ ರಾಹುಲ್ ದ್ರಾವಿಡ್ ಪಾತ್ರ ಪ್ರಮುಖವಾಗಿತ್ತು ಎಂದಿದ್ದಾರೆ.

"ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತೀಯ ಯುವ ಕ್ರಿಕೆಟಿಗರ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ರಿಷಬ್ ಪಂತ್ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಅವರಂತಾ ಆಟಗಾರರ ಬೆಳವಣಿಗೆಯಲ್ಲಿ ರಾಹುಲ್ ದ್ರಾವಿಡ್ ಪಾತ್ರ ಬಹಳ ದೊಡ್ಡದಿದೆ" ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ

"ಅಂಡರ್ -19 ತಂಡದಿಂದ ಇಂಡಿಯಾ ಎ, ಮತ್ತು ಇಂಡಿಯಾ ಎ ಯಿಂದ ರಾಷ್ಟ್ರೀಯ ತಂಡಕ್ಕೆ ಈ ಪ್ರಯಾಣವನ್ನು ಸುಧಾರಿಸಿಕೊಂಡು ಮುಂದುವರಿದಿದ್ದಾರೆ. ಈ ಆಟಗಾರರು ಆಟದಲ್ಲಿ ಭದ್ರವಾಗಿ ನೆಲೆಯೂರಲು ರಾಹುಲ್ ದ್ರಾವಿಡ್ ಪಾತ್ರವನ್ನು ಬಹುಳ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ" ಎಂದು ಹಕ್ ಹೇಳಿದ್ದಾರೆ.

"ರಾಹುಲ್ ದ್ರಾವಿಡ್ ಅವರು ರಕ್ಷಣಾತ್ಮಕವಾಗಿ ಬಲಿಷ್ಠ ಆಟಗಾರ. ಅದೇ ಕಾರಣದಿಂದಾಗಿ ಅವರನ್ನು "ದಿ ವಾಲ್" ಎಂದು ಕರೆಯುತ್ತಾರೆ. ಆವರು ಯಾವುದೇ ಸಂದರ್ಭದಲ್ಲೂ ಆಡಬಲ್ಲವರು. ಆತ ಮಾನಸಿಕವಾಗಿ ಸಾಕಷ್ಟು ಕಠಿಣರಾಗಿದ್ದಾರೆ. ಹೀಗಾಗಿ ಅವರು ಯಾವುದೇ ಸ್ಥಾನದಲ್ಲೂ ಹೊಂದಿಕೊಳ್ಳುತ್ತಾರೆ. ಈ ಹುಡುಗರ ಜೊತೆಗೆ ದ್ರಾಔಇಡ್ ಕೆಲಸ ಮಾಡಿರುವುದು ಅವರನ್ನು ಮಾನಸಿಕವಾಗಿ ಕಠಿಣರನ್ನಾಗಿಸಿದೆ" ಎಂದು ಇನ್ಜಮಾಮ್ ಉಲ್ ಹಕ್ ಯುಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

2016 ಮತ್ತು 2019ರ ಅಂಡರ್‌-19 ವಿಶ್ವಕಪ್ ತಂಡದಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ತಂಡಗಳಲ್ಲಿ ರಿಷಭ್ ಪಂತ್, ವಾಶಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ಪೃಥ್ವಿ ಶಾ ಆಡಿದ್ದರೆ ಇಂಡಿಯಾ ಎ ತಂಡದಲ್ಲಿ ಸಿರಾಜ್, ಸೈನಿ, ವಿಹಾರಿ ಹಾಗೂ ಅಗರ್ವಾಲ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಿದ ಅನುಭವ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, January 22, 2021, 11:42 [IST]
Other articles published on Jan 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X