ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ಇನ್ಝಮಾಮ್ ಉಲ್ ಹಕ್ ಶ್ಲಾಘನೆ

Inzamam ul Haq lauds Team India’s 151-run triumph at Lord’s
ವಿರಾಟ್ ಪಡೆಯ ಬಗ್ಗೆ ಪಾಕ್ ಮಾಜಿ ನಾಯಕನ ಹೊಗಳಿಕೆಯ ಸುರಿಮಳೆ | Oneindia Kannada

ಕರಾಚಿ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ 151 ರನ್ ಭರ್ಜರಿ ಗೆಲುವಿಗೆ ಪಾಕಿಸ್ತಾನದ ಮಾಜಿ ನಾಯಕ ಇನ್ಝಮಾಮ್ ಉಲ್‌ ಹಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಮವಾರ (ಆಗಸ್ಟ್ 16) ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋಲುತ್ತೆ ಎಂದು ಭಾವಿಸಲಾಗಿತ್ತು. ಆದರೆ ಕಮ್‌ಬ್ಯಾಕ್‌ ಮಾಡಿದ್ದ ಭಾರತ ರೋಚಕ ರೀತಿಯಲ್ಲಿ ಪಂದ್ಯ ಗೆದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಪಡೆದುಕೊಂಡಿತ್ತು.

IPL 2021: ಯುಎಇ ಸ್ಟೇಡಿಯಂ ಒಳಗೆ ಕೇಳಲಿದೆ ಪ್ರೇಕ್ಷಕರ ಕೇಕೆ!IPL 2021: ಯುಎಇ ಸ್ಟೇಡಿಯಂ ಒಳಗೆ ಕೇಳಲಿದೆ ಪ್ರೇಕ್ಷಕರ ಕೇಕೆ!

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ಸೋಲಿರುವ ಭಾರತ ವಿಶೇಷ ದಾಖಲೆಗೂ ಕಾರಣವಾಗಿತ್ತು. ಅಸಲಿಗೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಅಂಥ ಬ್ಯಾಟಿಂಗ್‌ ಬಂದಿರಲಿಲ್ಲ. ಆದರೆ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರಿಂದ ಉತ್ತಮ ಜೊತೆಯಾಟ ಬಂದಿತ್ತು. ಇಬ್ಬರೂ 89 ರನ್ ಜೊತೆಯಾಟ ನೀಡಿದ್ದರು. ಹೀಗಾಗಿ ಭಾರತ ಪಂದ್ಯದಲ್ಲಿ ರೋಚಕ ತಿರುವಿನೊಂದಿಗೆ ಪಂದ್ಯ ಗೆದ್ದಿತ್ತು.

ವಿರಾಟ್ ಕೊಹ್ಲಿ ಪಡೆ ಕೊಂಡಾಡಿದ ಇನ್ಝಮಾಮ್ ಉಲ್ ಹಕ್
ಭಾರತೀಯ ತಂಡದ ದಿಟ್ಟ ಪ್ರತಿರೋಧ, ಪಂದ್ಯ ಗೆಲ್ಲಲೇಬೇಕೆನ್ನುವ ಹಠ, ಬದ್ಧತೆಗೆ ವಿಶ್ವ ಕ್ರಿಕೆಟ್‌ನ ಎಲ್ಲರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಎಲ್ಲರೂ ಭಾರತದ ರೋಚಕ ಆಟವನ್ನು ಕೊಂಡಾಡಿದ್ದರು. ಈಗ ಇನ್ಝಮಾಮ್ ಉಲ್ ಹಕ್ ಕೂಡ ಭಾರತೀಯರ ಆಟಕ್ಕೆ ಮೆಚ್ಚುಗೆ ತೋರಿಕೊಂಡಿದ್ದಾರೆ. ಸೋಲಲಿದ್ದ ಪಂದ್ಯವನ್ನು ರೋಚಕ ರೀತಿಯಲ್ಲಿ ಗೆದ್ದ ವಿರಾಟ್ ಕೊಹ್ಲಿ ಪಡೆಯನ್ನು ಹಕ್ ಮನಸಾರೆ ಶ್ಲಾಘಿಸಿದ್ದಾರೆ.

'ತಾಲಿಬಾನ್‌ಗಳು ಕ್ರಿಕೆಟ್‌ಗೆ ಬೆಂಬಲ ನೀಡುತ್ತಾರೆಂದು ನನಗೆ ಭರವಸೆಯಿದೆ' ಎಂದ ಭಾರತೀಯ!'ತಾಲಿಬಾನ್‌ಗಳು ಕ್ರಿಕೆಟ್‌ಗೆ ಬೆಂಬಲ ನೀಡುತ್ತಾರೆಂದು ನನಗೆ ಭರವಸೆಯಿದೆ' ಎಂದ ಭಾರತೀಯ!

ಇಂಥ ವಿಜಯ ಕಾಣ ಸಿಗೋದು ಬಲು ಅಪರೂಪ
"ಭಾರತ ಒಂದು ಭಯಂಕರ ಜಯ ದಾಖಲಿಸಿದೆ. ಇಂಥ ವಿಜಯ ಕಾಣ ಸಿಗೋದು ಬಲು ಅಪರೂಪ. ಯುವಕರು ತಂಡದ ಭಾಗವಾಗಿ ಮತ್ತು ಅವರು ಆಡುವ ತಂಡದ ಬಗ್ಗೆ ಅತೀವ ಉತ್ಸಹ ಹೊಂದಿರುವುದರಿಂದ ಭಾರತವು ವಿದೇಶಗಳಲ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲಲು ಆರಂಭಿಸಿದೆ. ವಿದೇಶಿ ನೆಲದಲ್ಲಿ ಪಂದ್ಯಗಳನ್ನು ಗೆಲ್ಲಲು ಆರಂಭಿಸುವ ತಂಡವೇ ಪಕ್ಕಾ ಬಲಿಷ್ಠ ತಂಡವಾಗಲಿದೆ. ತವರು ನೆಲದಲ್ಲಿ ಪಂದ್ಯ ನೆಲ್ಲೋದು ಸಾಮಾನ್ಯ ಸಂಗತಿ. ಆದರೆ ಎದುರಾಳಿಯನ್ನು ಅವರದ್ದೇ ನೆಲದಲ್ಲಿ ಸೋಲಿಸೋದು ಒಂದು ಶ್ರೇಷ್ಠ ಕ್ರಿಕೆಟ್ ತಂಡದ ಚಿಹ್ನೆ," ಎಂದು ಇನ್ಝಮಾಮ್ ಹೇಳಿದ್ದಾರೆ.

ಭಾರತದ ಸ್ಕೋರ್‌ಕಾರ್ಡ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್‌ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಪ್ರಮುಖ 5 ವಿಕೆಟ್‌ ಉರುಳಿಸಿ ಗಮನ ಸೆಳೆದರು. 29 ಓವರ್‌ ಎಸೆದಿದ್ದ ಆ್ಯಂಡರ್ಸನ್ 62 ರನ್ ನೀಡಿ 5 ವಿಕೆಟ್ ಮುರಿದಿದ್ದರು. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ ವಿಕೆಟ್ ಗಳನ್ನು ಆ್ಯಂಡರ್ಸನ್ ಕೆಡವಿದರು. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಬಿಟ್ಟು ಯಾರಿಂದಲೂ ಗಮನಾರ್ಹ ರನ್ ಬರಲಿಲ್ಲ. ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3, ರಿಷಭ್ ಪಂತ್ 22, ಇಶಾಂತ್ ಶರ್ಮಾ 16, ಮೊಹಮ್ಮದ್ ಶಮಿ 56, ಜಸ್‌ಪ್ರೀತ್‌ ಬೂಮ್ರಾ 34 ರನ್‌ನೊಂದಿಗೆ 109.3 ಓವರ್‌ಗೆ 8 ವಿಕೆಟ್ ಕಳೆದು 298 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ ನೀಡಲಾಗಿತ್ತು.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!

ಇಂಗ್ಲೆಂಡ್ ಇನ್ನಿಂಗ್ಸ್‌ ಸ್ಕೋರ್‌
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0, ಜೋ ರೂಟ್ 180, ಜಾನಿ ಬೈರ್‌ಸ್ಟೊವ್ 57, ಜೋಸ್ ಬಟ್ಲರ್ 23, ಮೊಯೀನ್ ಅಲಿ 27, ಸ್ಯಾಮ್ ಕರನ್ , ಒಲ್ಲಿ ರಾಬಿನ್ಸನ್ 6, ಮಾರ್ಕ್ ವುಡ್ 5 ರನ್ ಬಾರಿಸಿದರು. ಇಂಗ್ಲೆಂಡ್ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ 2, ಮೊಹಮ್ಮದ್ ಸಿರಾಜ್ 4 ವಿಕೆಟ್‌ನಿಂದ ಗಮನ ಸೆಳೆದಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 0, ಡೊಮಿನಿಕ್ ಸಿಬ್ಲಿ 0, ಹಸೀಬ್ ಹಮೀದ್ 9, ಜೋ ರೂಟ್ 33, ಜಾನಿ ಬೈರ್‌ಸ್ಟೊ 2, ಜೋಸ್ ಬಟ್ಲರ್ 25, ಮೊಯೀನ್ ಅಲಿ 13, ಸ್ಯಾಮ್ ಕರನ್ 0, ಒಲ್ಲಿ ರಾಬಿನ್ಸನ್ 9, ಮಾರ್ಕ್ ವುಡ್ 0, ಜೇಮ್ಸ್ ಆ್ಯಂಡರ್ಸನ್ 0 ರನ್ ಗಳಿಸಿದರು. ಇಂಗ್ಲೆಂಡ್ 51.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಬಾರಿಸಿ 151 ರನ್‌ನಿಂದ ಶರಣಾಯ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ 3, ಮೊಹಮ್ಮದ್ ಸಿರಾಜ್ 4, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 1 ವಿಕೆಟ್‌ನಿಂದ ಗಮನ ಸೆಳೆದರು. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ 90 ರನ್ ಜೊತೆಯಾಟ ನೀಡಿದ್ದೆ ಇಂಗ್ಲೆಂಡ್‌ ವಿರುದ್ಧ ಒತ್ತಡ ಹೇರಲು ಪ್ರಮುಖ ಕಾರಣವೆನಿಸಿತ್ತು. ಹೀಗಾಗಿಯೇ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಇಂಗ್ಲೆಂಡ್ ಸೋತು ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Story first published: Wednesday, August 18, 2021, 10:03 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X