ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ಜಮಾಮ್ ಪ್ರಕಾರ ಕ್ರಿಕೆಟ್ ಆಟದ ದಿಕ್ಕನ್ನೇ ಬದಲಿಸಿದ ಮೂರು ಆಟಗಾರರು ಇವರಂತೆ !

Inzamam-ul-Haq Names 3 Batsmen From Different Eras ‘Who Changed The Game Of Cricket

ಪಾಕಿಸ್ತಾನದ ಮಾಜಿ ಆಟಗಾರರು ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ಕೆಲ ಪ್ರಮುಖ ಹೇಳಿಕೆಯನ್ನು ನೀಡುತ್ತಾ ಮಾಧ್ಯಮಗಳ ಕೇಂದ್ರ ಬಿಂದುವಾಗುತ್ತಿದ್ದಾರೆ. ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ ಬಳಿಕ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಅವರು ಸುದ್ದಿಕೇಂದ್ರಕ್ಕೆ ಬಂದಿದ್ದಾರೆ.

ಕ್ರಿಕೆಟ್ ಆಟದ ಸ್ವರೂಪವನ್ನು ಬದಲಾಗಲು ಮೂವರು ಆಟಗಾರರು ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಲ್ ನೀಡಿರುವ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!

ಆದರೆ ಪಾಕಿಸ್ತಾನದ ನಾಯಕನ ಈ ವಿಮರ್ಶೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಹರ್ಷವನ್ನು ತಂದಿಲ್ಲ. ಯಾಕೆ ಅನ್ನುವುದನ್ನು ಮುಂದೆ ನೋಡಿ

ಮೂರು ವಿಭಿನ್ನ ಕಾಲದ ಆಟಗಾರರನ್ನು ಹೆಸರಿಸಿದ ಹಕ್

ಮೂರು ವಿಭಿನ್ನ ಕಾಲದ ಆಟಗಾರರನ್ನು ಹೆಸರಿಸಿದ ಹಕ್

ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಕ್ರಿಕೆಟ್‌ ಆಟದ ಶೈಲಿಯನ್ನು ಮತ್ತು ರೀತಿಯನ್ನು ಬದಲಾಯಿಸಿದ ಆಟಗಾರರು ಇವರು ಎಂದು ಮೂವರು ಆಟಗಾರರ ಹೆಸರನ್ನು ಹೇಳಿದ್ದಾರೆ. ಅದಕ್ಕೆ ಇನ್ಜಿ ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮಾತನ್ನು ಹಕ್ ಹೇಳಿದ್ದಾರೆ.

ಯಾರು ಆ ಆಟಗಾರರು

ಯಾರು ಆ ಆಟಗಾರರು

ಇನ್ಜಮಾಮ್ ಉಲ್ ಹಕ್ ಹೆಸರಿಸಿದ ಮೊದಲ ಆಟಗಾರ ಬೇರೆ ಯಾರೂ ಅಲ್ಲ. ಅದು ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್. ಈ ಹಿಂದೆ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಯನ್ನು ತಂದ ಆಟಗಾರ ರಿಚರ್ಡ್ಸ್. ವೇಗದ ಬೌಲರ್‌ಗಳನ್ನೂ ಮುನ್ನುಗ್ಗಿ ಬಂದು ದೊಡ್ಡ ಹೊಡೆತಗಳನ್ನು ಬಾರಿಸಬಹುದು ಎಂದು ತೋರಿಸಿದ ಆಟಗಾರ ಎಂದು ವಿವಿಯನ್ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.

ಶ್ರೀಲಂಕಾದ ಸ್ಪೋಟಕ ಆಟಗಾರ

ಶ್ರೀಲಂಕಾದ ಸ್ಪೋಟಕ ಆಟಗಾರ

ಶ್ರೀಲಂಕಾದ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ ಕ್ರಿಕೆಟ್‌ ಆಟದ ರೀತಿಯನ್ನು ಬದಲಾಯಿಸಿದ ಮತ್ತೋರ್ವ ಆಟಗಾರ ಎಂಬುದು ಇನ್ಜಮಾಮ್ ಉಲ್ ಹಕ್ ಅಭಿಮತ. ಆರಂಭದ 15 ಓವರ್‌ಗಳಲ್ಲಿ ವೇಗದ ಬೌರರ್‌ಗಳನ್ನು ಯಾವ ರೀತಿ ದಂಡಿಸಬೇಕೆಂದು ಸನತ್ ಜಯಸೂರ್ಯ ತೋರಿಸಿಕೊಟ್ಟರು. ಜಯಸೂರ್ಯ ಬರುವ ಮುನ್ನ ಗಾಳಿಯಲ್ಲಿ ಚೆಂಡನ್ನು ಬಾರಿಸುವುದು ಉತ್ತಮ ಬ್ಯಾಟ್ಸ್‌ಮನ್‌ನ ಲಕ್ಷಣ ಎಂದೆನಿಸುಕೊಳ್ಳುತ್ತಿರಲಿಲ್ಲ. ಆದರೆ ಈ ದೃಷ್ಟಿಕೋನವನ್ನು ಜಯಸೂರ್ಯ ಬದಲಾಯಿಸಿದರು ಎಂಬ ಅಭಿಪ್ರಾಯವನ್ನು ಹಕ್ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಡಿಗ್ರಿ

ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಡಿಗ್ರಿ

ಪಾಕಿಸ್ತಾನದ ಮಾಜಿ ನಾಯಕನ ಪ್ರಕಾರ ಕ್ರಿಕೆಟ್‌ ಆಟದ ರೀತಿಯನ್ನು ಬದಲಾಯಿಸಿದ ಮತ್ತೋರ್ವ ಆಟಗಾರ ಎಂದರೆ ಅದು ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಲಿಯರ್ಸ್. ಮೊದಲು ಆಟಗಾರರು ನೇರವಾಗಿ ಬ್ಯಾಟ್‌ಬೀಸುವುದು ಮಾತ್ರವೇ ಕರಗತ ಮಾಡಿಕೊಂಡಿದ್ದರು. ಆದರೆ ಎಬಿ ಡಿವಿಲಿಯರ್ಸ್ ಪೆಡ್ಲ್ ಸ್ವೀಪ್, ರಿವರ್ಸ್ ಸ್ವೀಪ್‌ಗಳನ್ನು ಪರಿಣಾಮಕಾರಿಯಾಗಿ ವೇಗದ ಬೌಲರ್‌ಗಳ ಮುಂದೆ ಬಾರಿಸಿ ಆಟದ ಶೈಲಿಯನ್ನು ಬದಲಾಯಿಸಿದರು.

ಭಾರತೀಯರನ್ನೇ ಗುರುತಿಸದ ಹಕ್

ಭಾರತೀಯರನ್ನೇ ಗುರುತಿಸದ ಹಕ್

ಪಾಕಿಸ್ತಾನದ ಮಾಜಿ ಆಟಗಾರ ಇನ್ಜಮಾಮ್ ಉಲ್ ಹಕ್ ಕ್ರಿಕೆಟ್ ಆಟದ ರೀತಿಯನ್ನು ಬದಲಾಯಿಸಿದ ಆಟಗಾರರು ಎಂದು ಈ ಮೂವರು ಆಟಗಾರರನ್ನು ಹೆಸರಿಸಿದ್ದಾರೆ. ಆದರೆ ಇದರಲ್ಲಿ ಯಾವುದೇ ಭಾರತೀಯರ ಹೆಸರನ್ನು ಹಕ್ ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ರೋಹಿತ್ ಶರ್ಮಾರಂತಾ ಆಟಗಾರರನ್ನು ಹೊಂದಿದ್ದರೂ ಹಕ್ ಬೇಕೆಂದೇ ಭಾರತೀಯ ಆಟಗಾರರನ್ನು ನಿರ್ಲಕ್ಷ್ಯ ಮಾಡಿದರೆ ಎನ್ನುವುದನ್ನು ಕ್ರಿಕೆಟ್ ಅಬಿಮಾನಿಗಳು ಚರ್ಚಿಸುತ್ತಿದ್ದಾರೆ.

Story first published: Thursday, February 20, 2020, 11:03 [IST]
Other articles published on Feb 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X