ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಬ್ಯಾಟಿಂಗ್‌ಗೆ ಪಾಕ್ ಮಾಜಿ ನಾಯಕನ ಪ್ರಶಂಸೆ: ಸೆಹ್ವಾಗ್ ಬ್ಯಾಟಿಂಗ್‌ಗೆ ಹೋಲಿಸಿದ ಹಕ್

Inzamam-ul-Haq praises Rishabh Pants batting, compared with Virendra Sehwag

ಟೀಮ್ ಇಂಡಿಯಾ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಸ್ಟ್ರೇಲಿಯಾ ಸರಣಿಯ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಮಿಂಚಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿಯಾಗಿ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಒತ್ತಡ ಸಂದರ್ಭದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪ್ರದರ್ಶನ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಪಂತ್ ಬ್ಯಾಟಿಂಗ್ ನೊಡುತ್ತಿದ್ದರೆ ಸೆಹ್ವಾಗ್ ಎಡಗೈ ಬ್ಯಾಟಿಂಗ್ ಮಾಡಿದಂತೆ ಭಾಸವಾಗುತ್ತದೆ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈ ಎದುರಾಳಿ

"ರಿಷಭ್ ಪಂತ್ ನಿಜಕ್ಕೂ ಅದ್ಭುತ ಆಟಗಾರ. ಸುದೀರ್ಘ ಕಾಲದ ನಂತರ ಒತ್ತಡದ ಪರಿಣಾಮ ಬೀರದಂತೆ ಬ್ಯಾಟಿಂಗ್ ಮಾಡುವುದನ್ನು ಗಮನಿಸಿದ್ದೇನೆ. 146 ರನ್‌ಗಳಿಸಿದ್ದಾಗ 6 ವಿಕೆಟ್ ಕಳೆದುಕೊಂಡಿದ್ದರೂ ಅವರು ತಮ್ಮ ಬ್ಯಾಟಿಂಗ್ ಆರಂಭಿಸಿದ ರೀತಿಯಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಪಿಚ್, ತಂಡ ಗಳಿಸಿದ ರನ್ ಯಾವುದು ಕೂಡ ಮುಖ್ಯಾವಾಗದಂತೆ ಪ್ರದರ್ಶನವನ್ನು ನೀಡಿದ್ದಾರೆ" ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

"ರಿಷಭ್ ಪಂತ್ ಸ್ಪಿನ್ನರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸಮಾನವಾಗಿ ಪ್ರದರ್ಶನವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆತನ ಪ್ರದರ್ಶನವನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಅದು ಸೆಹ್ವಾಗ್ ಎಡ ಗೈನಲ್ಲಿ ಬ್ಯಾಟಿಂಗ್ ಮಾಡಿದಂತೆ ಭಾಸವಾಯಿತು" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳಐಪಿಎಲ್ 2021: ರಾಯಲ್ ಚಾಲೆಂಜರ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ

"ನಾನು ಸೆಹ್ವಾಗ್ ಜೊತೆಯಲ್ಲಿ ಆಡಿದ್ದೇನೆ. ಆತನಿಗೂ ಉಳಿದೆಲ್ಲಾ ಸಂಗತಿಗಳು ಮುಖ್ಯವಾಗುವುದಿಲ್ಲ. ಆತ ಬ್ಯಾಟಿಂಗ್‌ ಆರಂಬಿಸಿದಾಗ ಪಿಚ್ ಹೇಗೆ ವರ್ತಿಸುತ್ತದೆ, ಯಾವ ರೀತಿಯ ಬೌಲಿಂಗ್ ಸಾಮರ್ಥ್ಯವನ್ನು ಎದುರಾಳಿ ಹೊಂದಿದೆ ಎಂಬುದು ಗಣನೆಗೆ ಬರುವುದಿಲ್ಲ. ಆತ ತನ್ನ ಹೊಡೆತಗಳನ್ನು ಬಾರಿಸುತ್ತಾನೆ. ಬೌಂಡರಿ ಪಕ್ಕ ಫೀಲ್ಡರ್‌ಗಳು ಇದ್ದರೂ ಆತನ ಆಟ ಹೀಗೆಯೇ ಇರುತ್ತದೆ. ಸೆಹ್ವಾಗ್ ನಂತರ ಅದೇ ರೀತಿಯ ಆಟಗಾರನನ್ನು ನಾನು ಕಾಣುತ್ತಿದ್ದೇನೆ" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

Story first published: Monday, March 8, 2021, 12:26 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X