ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನ ತೊರೆಯಲಿದ್ದಾರೆ ಇಂಝಮಾಮ್

ಮಾಜಿ ಆಟಗಾರನನ್ನು ಹೊರದಬ್ಬಿದ ಪಾಕಿಸ್ತಾನ..? | Oneindia Kannada
Inzamam-ul-Haq to step down as Pakistan chief selector

ಇಸ್ಲಮಾಬಾದ್, ಜುಲೈ 17: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಇಂಝಮಾಮ್ ಉಲ್ ಹಕ್ ಕೆಳಗಿಳಿಯುತ್ತಿದ್ದಾರೆ. ಜುಲೈ 30ರಂದು ಅಧಿಕಾರವಧಿ ಪೂರ್ಣಗೊಳ್ಳಲಿರುವುದರಿಂದ ಹಕ್ ತನ್ನ ಜವಾಬ್ದಾರಿಯಿಂದ ಹೊರೆ ಕೆಳಗಿಳಿಸುತ್ತಿದ್ದಾರೆ.

ವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದ

'ಜವಾಬ್ದಾರಿಯಿಂದ ಕೆಳಗಿಳಿಯಲು ಇದು ಸಕಾಲ ಎಂದು ನನಗನ್ನಿಸುತ್ತಿದೆ. ಜುಲೈ 30ರಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ನನ್ನ ಒಪ್ಪಂದ ಕೊನೆಗೊಳ್ಳಲಿದೆ,' ಎಂದು ಡಾವ್ನ್ ಡಾಟ್ ಕಾಮ್ ಜೊತೆ ಮಾತನಾಡುತ್ತ ಇಂಝಮಾಮ್ ಉಲ್ ಹಕ್ ಹೇಳಿಕೊಂಡಿದ್ದಾರೆ.

ವಿಶ್ವಕಪ್ ವಿಜೇತ ಮಾಜಿ ನಾಯಕನ ಮೇಲೆ ಮುಖ್ಯ ಕೋಚ್ ಆಯ್ಕೆಯ ಹೊಣೆ!ವಿಶ್ವಕಪ್ ವಿಜೇತ ಮಾಜಿ ನಾಯಕನ ಮೇಲೆ ಮುಖ್ಯ ಕೋಚ್ ಆಯ್ಕೆಯ ಹೊಣೆ!

ಪಿಸಿಬಿಗೆ ಈ ವಿಚಾರವನ್ನು ತಿಳಿಸಿರುವುದಾಗಿ ಇಂಝಿ ಹೇಳಿರುವುದಲ್ಲದೆ, ತನ್ನ ನಿರ್ದಾರವನ್ನು ಗೌರವಿಸುತ್ತಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ. 2019ರಲ್ಲಿ ಹಕ್ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.

'ಬೌಂಡರಿ ಬದಲು 2ನೇ ಸೂಪರ್ ಓವರ್‌ ವಿಶ್ವಕಪ್ ವಿಜೇತರ ನಿರ್ಧರಿಸಲಿ''ಬೌಂಡರಿ ಬದಲು 2ನೇ ಸೂಪರ್ ಓವರ್‌ ವಿಶ್ವಕಪ್ ವಿಜೇತರ ನಿರ್ಧರಿಸಲಿ'

'ಯುನೈಟೆಡ್ ಕಿಂಗ್ಡಮ್‌ನಿಂದ ವಾಪಸ್ಸಾದ ನಂತರ, ನನ್ನ ಸ್ಥಾನದಲ್ಲಿ ಮುಂದುವರೆಯಲು ಬಯಸುತ್ತಿಲ್ಲ ಎಂದು ನಾನು ಪಿಸಿಬಿಗೆ ತಿಳಿಸಿದ್ದೆ. 2016ರಲ್ಲಿ ಜವಾಬ್ದಾರಿ ಹೊತ್ತ ನಾನು ಇಲ್ಲಿ ಒಳ್ಳೆಯ ದಿನಗಳನ್ನು ಕಂಡಿದ್ದೇನೆ. ಆದರೆ ಹೊಸ ಮುಖಗಳು ಹೊಸ ಆಲೋಚನೆಗಳೊಂದಿಗೆ ಈ ಸ್ಥಾನಕ್ಕೆ ಬರಲಿ ಎಂಬ ಅಭಿಲಾಷೆ ನನ್ನದು' ಎಂದು ಹಕ್ ತಿಳಿಸಿದ್ದಾರೆ.

Story first published: Wednesday, July 17, 2019, 18:12 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X