ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್: ಹಕ್ ಹೇಳಿದ್ದೇನು ಗೊತ್ತಾ?!

Inzamam-Ul-Haq weighs in on Rahul Dravid possibly coaching India for Sri Lanka tour
Rahul Dravid ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪಾಕಿಸ್ತಾನ ಮಾಜಿ ನಾಯಕ | Oneindia Kannada

ಕರಾಚಿ: ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳುತ್ತಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಝಮಾಮ್ ಉಲ್ ಹಕ್ ಖುಷಿ ತೋರಿಕೊಂಡಿದ್ದಾರೆ. ಆ ಪ್ರವಾಸ ಸರಣಿ ಅದ್ಭುತ ಎನಿಸಲಿದೆ ಎಂದು ಹಕ್ ಹೇಳಿದ್ದಾರೆ. ಜೂನ್-ಜುಲೈ-ಆಗಸ್ಟ್‌ ಅವಧಿಯಲ್ಲಿ ಭಾರತೀಯ ಟೆಸ್ಟ್ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋದರೆ ನಿಯಮಿತ ಓವರ್‌ಗಳ ತಂಡ ಶ್ರೀಲಂಕಾಕ್ಕೆ ತೆರಳುವುದರಲ್ಲಿದೆ.

ಆವತ್ತು ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಗೆದ್ದಿತ್ತು!ಆವತ್ತು ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಗೆದ್ದಿತ್ತು!

ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿ ಮತ್ತು ಟಿ20 ಸರಣಿಗಾಗಿ ಭಾರತ ತಂಡ ಪ್ರವಾಸ ಹೊರಡಲಿದೆ. ಇದೇ ವೇಳೆ ಭಾರತೀಯ ಟೆಸ್ಟ್‌ ತಂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಹೋಗಲಿದೆ.

ತಂಡ ಕಟ್ಟುವಲ್ಲಿ ದ್ರಾವಿಡ್ ಕೊಡುಗೆ

ತಂಡ ಕಟ್ಟುವಲ್ಲಿ ದ್ರಾವಿಡ್ ಕೊಡುಗೆ

ಇಂಗ್ಲೆಂಡ್‌ಗೆ ಹೋಗುವ ತಂಡದ ಜೊತೆ ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೋಗಲಿರುವುದರಿಂದ ಶ್ರೀಲಂಕಾ ಪ್ರವಾಸಕ್ಕೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ಕಳುಹಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯೋಚಿಸಿದೆ. ಕ್ರಿಕೆಟ್‌ನಲ್ಲಿ ಭಾರತ ಬಲಿಷ್ಠ ತಂಡವಾಗಿ ಹೊರಹೊಮ್ಮಲು ದ್ರಾವಿಡ್ ಕೊಡುಗೆಗಳಿವೆ ಎಂದು ಅರಿತಿರುವ ಹಕ್, ಈ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೊಂದು ಕುತೂಹಲಕಾರಿ ಐಡಿಯಾ

ಇದೊಂದು ಕುತೂಹಲಕಾರಿ ಐಡಿಯಾ

'ನಾನು ಇದಕ್ಕು ಮೊದಲೂ ದ್ರಾವಿಡ್ ಅವರನ್ನು ಉಲ್ಲೇಖಿಸಿದ್ದೇನೆ. ಆತ ಅಂಡರ್-19 ತಂಡದ ಮೂಲಕ ಹೇಗೆ ಪ್ರತಿಭಾನ್ವಿತ ಆಟಗಾರರನ್ನು ಸೃಷ್ಠಿಸಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್ ಆಗಿ ಹೋಗುವ ಸಾಧ್ಯತೆಯಿದೆ ಎನ್ನುವ ಸಂಗತಿ ಕೇಳಿದೆ. ಲಂಕಾಕ್ಕೆ ದ್ರಾವಿಡ್ ಅವರನ್ನು ಕೋಚ್ ಆಗಿ ಕಳುಹಿಸುತ್ತಿರುವುದು ಒಂದು ಅದ್ಭುತ ಮತ್ತು ಕುತೂಹಲಕಾರಿ ಐಡಿಯಾ ಎಂದು ನನಗನ್ನಿಸುತ್ತಿದೆ,' ಎಂದು ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಹಕ್ ಹೇಳಿದ್ದಾರೆ.

ಇನ್ಝಮಾಮ್ ಉಲ್ ಹಕ್ ಸಲಹೆ

ಇನ್ಝಮಾಮ್ ಉಲ್ ಹಕ್ ಸಲಹೆ

ವಿಶ್ವಕ್ರಿಕೆಟ್‌ನಲ್ಲಿ ಭಾರತ ಸಾಕಷ್ಟು ಬದಲಾಗಿದೆ. ಯಾವ ದೇಶಗಳು ತಮ್ಮ ತಂಡಗಳನ್ನು ಬಲಿಷ್ಠಗೊಳಿಸಲು ಯೋಚಿಸುತ್ತಿದ್ದಾವೋ ಅವು ಮೊದಲು ಅವರ ಪ್ರಥಮದರ್ಜೆ ಸ್ವರೂಪವನ್ನು ಸುಧಾರಿಸಿಕೊಳ್ಳಬೇಕು. ಆಗ ಆ ದೇಶ ಈಗ ಭಾರತ ಏನು ಮಾಡುತ್ತಿದೆಯೋ ಅದನ್ನೇ ಮಾಡಬಹುದು. ಏಕಕಾಲದಲ್ಲಿ ಎರಡು ತಂಡಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುವುದು ಆಗ ಸಾಧ್ಯವಾಗುತ್ತದೆ,' ಎಂದು ಇನ್ಝಮಾಮ್ ವಿವರಿಸಿದ್ದಾರೆ. ಜುಲೈ 13ರಿಂದ ಜುಲೈ 27ರ ವರೆಗೆ ಲಂಕಾ ಸರಣಿ ನಡೆದರೆ ಜೂನ್ 18ರಿಂದ ಆಗಸ್ಟ್ 27ರ ವರೆಗೆ ನಡೆದರೆ ಇಂಗ್ಲೆಂಡ್ ಸರಣಿ ಜೂನ್ 18ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ.

Story first published: Saturday, May 22, 2021, 15:23 [IST]
Other articles published on May 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X