ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಗೆ ಇಲ್ಲ ಅವಕಾಶ: ವ್ಯರ್ಥವಾಯಿತು ಐಸಿಸಿ ಪ್ರಯತ್ನ

IOC officially confirmed Cricket to not be part of 2028 Los Angeles Olympics

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಗೆ ಐಸಿಸಿ ನಡೆಸಿದ ಪ್ರಯತ್ನ ವಿಫಲವಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಈ ಬಗ್ಗೆ ಶುಕ್ರವಾರ ಅಧಿಕೃತವಾಗಿ ಮಾಹಿತಿ ನೀಡಿದ್ದು 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗೆ ಕೂಡ ಐಒಸಿ ಮಾಹಿತಿ ನೀಡಿದೆ.

ಈ ಬೆಳವಣಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದೆ. ಐಸಿಸಿ ಕಳೆದ ಒಂದೆರಡು ವರ್ಷಗಳಿಂದ ಕ್ರಿಕೆಟನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿತ್ತು. 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ಗೆ ಅವಕಾಶ ದೊರೆಯುವ ಬಗ್ಗೆ ಸಾಕಷ್ಟು ಭರವಸೆಗಳು ಕೂಡ ಮೂಡಿತ್ತು. ಆದರೆ ಈ ಭರವಸೆ ಈಗ ಹುಸಿಯಾಗಿದೆ. ಹೀಗಾಗಿ ಐಸಿಸಿ 2032ರ ಬ್ರಿಸ್ಬೇನ್‌ ಒಳಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳಿಸುವ ಬಗ್ಗೆ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ ಎನ್ನಲಾಗಿದೆ.

Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!

ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಒಂದು ಭಾರಿ ಮಾತ್ರವೇ ಕ್ರಿಕೆಟ್ ಆಡಿಸಲಾಗಿತ್ತು. 1900ನೇ ಇಸವಿಯಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಆಡಿಸಿದ್ದ ಸಂದರ್ಭದಲ್ಲಿ ಕೇವಲ ಎರಡು ತಂಡಗಳು ಮಾತ್ರವೇ ಸ್ಪರ್ಧಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಭಾಗವಹಿಸಿದ್ದು ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗೆದ್ದುಕೊಂಡಿದ್ದರೆ ಫ್ರಾನ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು.

ಐಸಿಸಿ ಪ್ರಸ್ತಾಪದಲ್ಲಿ ಏನಿತ್ತು?: 2028ರ ಬೇಸಿಗೆ ಒಲಿಂಪಿಲ್ಸ್ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದ್ದು ಈ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಪಂದ್ಯಾವಳಿಗೆ ಐಸಿಸಿ ಪ್ರಸ್ತಾಪವನ್ನಿಟ್ಟಿತ್ತು ಐಸಿಸಿ. ಆರು ತಂಡಗಳು ತಲಾ ಮೂರು ತಂಡಗಳ ಎರಡು ಗುಂಪುಗಳಲ್ಲಿ ಮೊದಲಿಗೆ ಸೆಣೆಸಾಡಿ ಎರಡು ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯುವಂತೆ, ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸಲಾಗುತ್ತದೆ ಎಂದು ಪ್ರಸ್ತಾಪದಲ್ಲಿ ತಿಳಿಸಲಾಗಿತ್ತು.

2028ರ ಒಲಿಂಪಿಕ್ಸ್‌ಗೆ ಈಗಾಗಲೇ 28 ಕ್ರೀಡೆಗಳನ್ನು ಅಧಿಕೃತಗೊಳಿಸಲಾಗಿದೆ. ಬೇಸ್‌ಬಾಲ್, ಕರಾಟೆ, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್‌ಗಳ ಮತ್ತು ಕ್ರಿಕೆಟ್ ಈ ಕ್ರೀಡಾಕೂಟಕ್ಕೆ ಸೇರ್ಪಡೆಗಾಗಿ ಅಂತಿಮ ಪಟ್ಟಿಯಲ್ಲಿದ್ದ ಉಳಿದ ಒಂಬತ್ತು ಕ್ರೀಡೆಗಳಾಗಿತ್ತು.

ಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ 2 ವರ್ಷ: 36 ರನ್‌ಗಳಿಗೆ ಆಲೌಟ್ ಆದ ನಂತರ ಸರಣಿ ಗೆದ್ದಿದ್ದೆ ರೋಚಕ

1900 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ರಾಷ್ಟ್ರವಾದ ಫ್ರಾನ್ಸ್ ಮಾತ್ರ ಕ್ರಿಕೆಟ್ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಕಳೆದ ವರ್ಷದ ಆಗಸ್ಟ್‌ನಲ್ಲಿ ಐಒಸಿ ಪರಿಶೀಲನೆಗೆ ಆಯ್ಕೆ ಮಾಡಿದ್ದ ಎಂಟು ಇತರ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಸೇರಿದೆ. ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್‌ಡ್ಯಾನ್ಸಿಂಗ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್, ಮತ್ತು ಮೋಟಾರ್‌ಸ್ಪೋರ್ಟ್ ಮುಖ್ಯ ಈವೆಂಟ್‌ಗಾಗಿ ಇತರ ಎಂಟು ಕ್ರೀಡೆಗಳಾಗಿವೆ.

Story first published: Friday, January 20, 2023, 23:38 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X