ಅಂಪೈರ್ ಪ್ರಮಾದ: ಜಾವಗಲ್ ಶ್ರೀನಾಥ್ ಬಳಿ ದೂರು ನೀಡಿದ ಪಂಜಾಬ್

ದುಬೈ, ಸೆ. 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಎರಡನೇ ಪಂದ್ಯ ರೋಚಕ ಟೈ ಆಗಿ ನಂತರ ಡೆಲ್ಲಿ ಕ್ಯಾಪಿಟಲ್ ಸುಲಭವಾಗಿ ಗೆಲುವು ದಾಖಲಿಸಿದ್ದು ತಿಳಿದಿರಬಹುದು. ಆದರೆ, ಪಂದ್ಯ ಟೈ ಆಗುವುದಕ್ಕೂ ಮುನ್ನ ಅಂಪೈರ್ ಎಸಗಿದ ಪ್ರಮಾದದಿಂದಾಗಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡಕ್ಕೆ 1 ರನ್ ಕಡಿತವಾಗಿದ್ದು, ಇದು ಪಂದ್ಯದ ದಿಕ್ಕು ದೆಸೆಯನ್ನೇ ಬದಲಾಯಿಸಿಬಿಟ್ಟಿತು. ಅಂಪೈರ್ ತಪ್ಪು ನಿರ್ಣಯದ ಬಗ್ಗೆ ಪಂದ್ಯದ ರೆಫ್ರಿ ಜಾವಗಲ್ ಶ್ರೀನಾಥ್ ಬಳಿ ದೂರು ನೀಡಿರುವುದಾಗಿ ಪಂಜಾಬ್ ತಂಡದ ವಕ್ತಾರರು ಹೇಳಿದ್ದಾರೆ.

ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮಾಡಿದ ಪ್ರಮಾದದಿಂದಾಗಿ ಪಂದ್ಯವೇ ಕೈಬಿಟ್ಟು ಹೋಯಿತು. ಈ ಬಗ್ಗೆ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರು ಗುರುತಿಸಿ ಚಿತ್ರ ಸಮೇತ ಟ್ವೀಟ್ ಮಾಡಿದ್ದರು. ಅನೇಕರು ಈ ಬಗ್ಗೆ ಪ್ರಶ್ನೆ ಮಾಡಿ, ಎಷ್ಟೇ ತಂತ್ರಜ್ಞಾನ ಬಂದರೂ ಅಂಪೈರ್ ಗಳ ಗುಣಮಟ್ಟ ಬದಲಾಗಿಲ್ಲ, ನ್ಯಾಯವಾಗಿ ಗೆಲ್ಲಬೇಕಾದ ತಂಡಕ್ಕೆ ಅನ್ಯಾಯವಾಗುತ್ತಲೇ ಇರುತ್ತದೆ ಎಂದಿದ್ದಾರೆ.

ಅಂಪೈರ್ ನಿರ್ಣಯ ನಿಜಕ್ಕೂ ಆಘಾತಕಾರಿ

ಅಂಪೈರ್ ನಿರ್ಣಯ ನಿಜಕ್ಕೂ ಆಘಾತಕಾರಿ

'' ಅಂಪೈರ್ ನಿರ್ಣಯ ನಿಜಕ್ಕೂ ಆಘಾತಕಾರಿ, ಇದರಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು. ಈ ವಿಷಯದ ಬಗ್ಗೆ ಗಮನಹರಿಸುವಂತೆ ರೆಫ್ರಿ ಅವರಿಗೆ ಅಧಿಕೃತ ದೂರು ನೀಡಿದ್ದೇವೆ. ರೆಫ್ರಿ ನೀಡುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಗುಣಮಟ್ಟ, ನ್ಯಾಯಯುತವಾಗಿ ಆಟದ ನಿರೀಕ್ಷೆ ಅಭಿಮಾನಗಳಲ್ಲಿರುತ್ತದೆ" ಎಂದು ಕಿಂಗ್ಸ್ ಎಲೆವನ್ ತಂಡ ಹೇಳಿದೆ.

ಡೆಲ್ಲಿ ಹಿಂದಿಕ್ಕಿ ದಾಖಲೆ ಬರೆದ ಕಿಂಗ್ಸ್ ಎಲೆವನ್ ''ಕ್ಯಾಪ್ಟನ್'

ಅಂಪೈರ್ ನಿರ್ಣಯದ ಬಗ್ಗೆ ರೆಫ್ರಿ ಪಾತ್ರವೇನು?

ಅಂಪೈರ್ ನಿರ್ಣಯದ ಬಗ್ಗೆ ರೆಫ್ರಿ ಪಾತ್ರವೇನು?

ಮುಂದೇನು?: ಅಂಪೈರ್ ನಿರ್ಣಯದ ಬಗ್ಗೆ ತಂಡದ ನಾಯಕ ಪ್ರಶ್ನಿಸುವ ಹಕ್ಕು ಎಲ್ಲಾ ಸಂದರ್ಭಗಳಲ್ಲೂ ಇರುವುದಿಲ್ಲ. ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಅವರು ಈ ಹಿಂದೆ ಮೈದಾನದಲ್ಲೇ ಅಂಪೈರ್ ಜೊತೆ ವಾದಿಸಿ, ತಂಡಕ್ಕೆ 2 ಹೆಚ್ಚುವರಿ ರನ್ ಸಂಪಾದಿಸಿದ್ದು ಇತಿಹಾಸ. ಆದರೆ, ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಎಲ್ ರಾಹುಲ್ ನೀಡಿರುವ ದೂರನ್ನು ಮ್ಯಾಚ್ ರೆಫ್ರಿ ಶ್ರೀನಾಥ್ ಅವರು ಐಪಿಎಲ್ ಆಡಳಿತ ಕೌನ್ಸಿಲ್ ಮುಂದಿಟ್ಟು ಚರ್ಚಿಸಿ ತಮ್ಮ ನಿರ್ಣಯ ಪ್ರಕಟಿಸಲಿದ್ದಾರೆ.

ಪಂದ್ಯದ ಫಲಿತಾಂಶ

ಪಂದ್ಯದ ಫಲಿತಾಂಶ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಬ್ಯಾಟಿಂಗ್‌ನೊಂದಿಗೆ (21 ಎಸತಕ್ಕೆ 53 ರನ್) ಮತ್ತು ಶ್ರೇಯಸ್ ಐಯ್ಯರ್ 39, ರಿಷಭ್ ಪಂತ್ 31 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಗಳಿಸಿತ್ತು.

ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ

ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಮಯಾಂಕ್ ಅಗರ್ವಾಲ್ 89 (60 ಎಸೆತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಬಾರಿಸಿ ಪಂದ್ಯ ಸರಿದೂಗಿಸಿತ್ತು. ಇನ್ನೊಂದು ರನ್ ಗಳಿಸುವಷ್ಟರಲ್ಲಿ ಮಯಾಂಕ್ ವಿಕೆಟ್ ಒಪ್ಪಿಸಿದ್ದರು. ಸೂಪರ್‌ ಓವರ್‌ನಲ್ಲಿ ಕೆXIಪಿ 2 ರನ್ ಬಾರಿಸಿತ್ತು, ಡೆಲ್ಲಿ 3 ರನ್ ಬಾರಿಸಿ ಪಂದ್ಯ ಗೆದ್ದಿತು.

ಸೆಹ್ವಾಗ್ ಟ್ವೀಟ್

ಅಂಪೈರ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕು. ರನ್ ಇದ್ದಿದ್ದನ್ನು ಶಾರ್ಟ್ ರನ್ ಎಂದು ಹೇಳಿ ಪ್ರಮಾದ ಎಸಗಿದ ಅಂಪೈರ್ ನಿಜಕ್ಕೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರು. ಇದು ಶಾರ್ಟ್ ರನ್ ಆಗಿರಲಿಲ್ಲ. ಪಂದ್ಯದ ದಿಕ್ಕು ಬದಲಾಯಿಸಿದ್ದು ಇದೇ ಘಟನೆ ಎಂದು ಟ್ವೀಟ್ ಮಾಡಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 21, 2020, 12:35 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X