ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿ ವಾಪಸ್: ಇಂಗ್ಲೆಂಡಿಗೆ ನಷ್ಟ, ಸನ್ ರೈಸರ್ಸ್ ಗೆ ಲಾಭ

By Mahesh

ಲಂಡನ್. ಮೇ.13: ಕ್ರಿಕೆಟ್ ಜಗತ್ತಿನ ದುರಂತ ಆಟಗಾರ ಎನಿಸಿಕೊಂಡಿರುವ ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಅವರ ಪಾಲಿಗೆ ಮತ್ತೊಮ್ಮೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶತ್ರುವಾಗಿದೆ. ಪೀಟರ್ಸನ್ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಆಯ್ಕೆ ಸಮಿತಿ ಕಡ್ಡಿ ಮುರಿದಂತೆ ಹೇಳಿದ್ದರಿಂದ ನೊಂದಿರುವ ಕೆಪಿ ಈಗ ಮತ್ತೊಮ್ಮೆ ಐಪಿಎಲ್ ನತ್ತ ಮುಖ ಮಾಡಿದ್ದಾರೆ.

ಇಂಗ್ಲೆಂಡಿನ ಸರೆ ಕ್ಲಬ್ ಪರ ಆಡಿ ಅಜೇಯ 326 ರನ್ ಚೆಚ್ಚಿದ ಕೆವಿನ್ ಗೆ ಇಂಗ್ಲೆಂಡ್ ಟೆಸ್ಟ್ ತಂಡ ಸೇರುವ ಅವಕಾಶ ಸಿಗುತ್ತದೆ ಎಂದೇ ನಂಬಲಾಗಿತ್ತು. ಅದರೆ, ಇಂಗ್ಲೆಂಡಿನ ಮಾಜಿ ನಾಯಕ, ಆಯ್ಕೆ ಸಮಿತಿಯ ನೂತನ ಬಾಸ್ ಆಂಡ್ರ್ಯೂ ಸ್ಟ್ರಾಸ್ ಅವರು ಕೆಪಿ ಪಾಲಿಗೆ ವಿಲನ್ ಆಗಿದ್ದಾರೆ.

IPL 2015: 'Angry and hurt' Kevin Pietersen to join Sunrisers Hyderabad

ಇದರಿಂದ ಬೇಸತ್ತ ದಕ್ಷಿಣ ಆಫ್ರಿಕಾ ಮೂಲದ ಇಂಗ್ಲೆಂಡಿನ ಆಟಗಾರ ಕೆಪಿ ಅವರು ಈಗ ಐಪಿಎಲ್ ನಲ್ಲಿ ಆಡುವ ನಿರ್ಧಾರ ಮಾಡಿದ್ದಾರೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಈ ವರ್ಷದ ಇಂಡಿಯನ್ ಪ್ರಿಮಿಯರ್ ಲೀಗ್ ಹರಾಜಿನಲ್ಲಿ ಕೆವಿನ್ ಪೀಟರ್ಸನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 2 ಕೋಟಿ ರು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅದರೆ, ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಸೇರುವ ಆಸೆಯಿಂದ ಕೌಂಟಿಯಲ್ಲಿ ಆಡಲು ಆರಂಭಿಸಿದ ಕೆಪಿ ಉತ್ತಮ ಪ್ರದರ್ಶನ ನೀಡಿದರು.

ಈಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ಕಾರಣ ಐಪಿಎಲ್ ಒಪ್ಪಂದದಂತೆ ಸನ್ ರೈಸರ್ಸ್ ಹೈದರಾಬಾದ್ ಸೇರಲಿದ್ದಾರೆ. ನಾನು ಭಾರತಕ್ಕೆ ಬರುತ್ತಿದ್ದೇನೆ ಎಂದು ಟೆಲಿಗ್ರಾಫ್ ನಲ್ಲಿ ಬರೆದ ತಮ್ಮ ಅಂಕಣದಲ್ಲಿ ಪೀಟರ್ಸನ್ ಹೇಳಿದ್ದಾರೆ.

ಐಪಿಎಲ್ 2015 ರಲ್ಲಿ ಏರಿಳಿತ ಕಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಈಗ ಪ್ಲೇ ಆಫ್ ಹಂತಕ್ಕೇರುವ ಉತ್ಸಾಹದಲ್ಲಿದೆ. ಲೀಗ್ ನಲ್ಲಿ 2 ಪಂದ್ಯ ಬಾಕಿ ಉಳಿದಿದ್ದು, ಭಾನುವಾರ(ಮೇ.17)ದಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಕೆವಿನ್ ಪೀಟರ್ಸನ್ ಲಭ್ಯರಾಗಲಿದಾರೆ.

ಕೆವಿನ್ ಪೀಟರ್ಸನ್ ಅದ್ಭುತ ಆಟಗಾರ ನಿಜ. ಅದನ್ನು ಅವರ ಸಾಧನೆ ಪಟ್ಟಿಯೇ ಹೇಳುತ್ತದೆ. ಆದರೆ, ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಜೊತೆಗಿನ ಅವರ ಸಂಬಂಧ ಹಳಸಿದೆ. ಬೋರ್ಡ್ ಜೊತೆ ಉತ್ತಮ ಸಂಬಂಧ, ನಂಬಿಕೆ ಉಳಿಸಿಕೊಳ್ಳದ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಸ್ಟ್ರಾಸ್ ಪ್ರತಿಕ್ರಿಯಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X