ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಕೆಆರ್ ಗೆಲುವಿನ ಸಂಭ್ರಮಕ್ಕೆ ಸಾಕ್ಷಿಯಾದ ಶಾರುಖ್

By Mahesh

ಕೋಲ್ಕತ್ತಾ, ಮೇ 05: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 9) ರಲ್ಲಿ ಒಮ್ಮೆಯಾದರೂ 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚೆಂಡು ಎಸೆಯಬೇಕು ಎಂಬ ಬಯಕೆಯುಳ್ಳ ರಸೆಲ್ ನಿನ್ನೆ ದಿನ ಪಂಜಾಬ್ ಬ್ಯಾಟ್ಸ್ ಮನ್ ಗಳಿಗೆ ಮಾರಕವಾದರು. ರೋಚಕ ಪಂದ್ಯದಲ್ಲಿ ಗೌತಮ್ ಗಂಭೀರ್ ಪಡೆ 7ರನ್ ಗಳ ಜಯ ದಾಖಲಿಸಿತು. ಈ ಗೆಲುವಿನ ಸಂಭ್ರಮದಲ್ಲಿ ತಂಡದ ಮಾಲೀಕ ಶಾರುಖ್ ಖಾನ್ ಕೂಡಾ ಭಾಗಿಯಾಗಿದ್ದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಳ್ಕತತ ನೈಟ್ ರೈಡರ್ಸ್ ತಂಡ 3 ವಿಕೆಟ್​ಗೆ 164 ರನ್ ಗಳಿಸಿತು. ಇದನ್ನು ಚೇಸ್ ಮಾಡಿದ ಕಿಂಗ್ಸ್ XI ಪಂಜಾಬ್ ತಂಡ ಕೊನೆ ಗಳಿಗೆಯಲ್ಲಿ ತ್ವರಿತವಾಗಿ ರನ್ ಗಳಿಸಲು ಪರದಾಡಿ 9 ವಿಕೆಟ್​ಗೆ 157 ರನ್ ಗಳಿಸಿ ಸೊಲೊಪ್ಪಿಕೊಂಡಿತು. [ಕುರ್ಚಿ ಒದ್ದ ಗಂಭೀರ್ ಗೆ ದಂಡ, ವಿರಾಟ್ ಕೊಹ್ಲಿ ನಷ್ಟ]

IPL 2016: KKR edge KXIP by 7 runs to top table


20 ರನ್ನಿತ್ತು 4 ವಿಕೆಟ್ ಪಡೆದ ರಸೆಲ್ ಗೆಲುವಿನ ರೂವಾರಿ ಎನಿಸಿದರು. ಅಂತಿಮ ಓವರ್​ನಲ್ಲಿ ಕಿಂಗ್ಸ್​ಗೆ 12 ರನ್ ಅಗತ್ಯವಿದ್ದಾಗ ರಸೆಲ್ ಕೇವಲ 4 ರನ್ ಬಿಟ್ಟುಕೊಟ್ಟರಲ್ಲದೆ 2 ರನೌಟ್ ಸಹಿತ 3 ವಿಕೆಟ್ ಉರುಳಿಸಿದರು. [ಗಂಭೀರ್ ಕುರ್ಚಿ ಒದ್ದು ಚೀರಿದ್ದು ಏಕೆ?]

ಪಂಜಾಬ್ ಪರ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್ 68ರನ್(42 ಎಸೆತ, 6X4, 4X6), ಸಹಾ 24ರನ್ ಕೊನೆಯಲ್ಲಿ ಅಕ್ಷರ್ ಪಟೇಲ್ 7 ಎಸೆತಗಳಲ್ಲಿ 21ರನ್ ಗಳಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು.ಆದರೆ, ಅಂತಿಮವಾಗಿ ಕರಾರುವಾಕ್ ಬೌಲಿಂಗ್ ಮೂಲಕ ಕೆಕೆಆರ್ ತಂಡ ಗೆಲುವನ್ನು ಕಸಿದುಕೊಂಡಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ 70 ರನ್(49 ಎಸೆತ, 6‍X4, 2X6) ಮತ್ತು ನಾಯಕ ಗೌತಮ್ ಗಂಭೀರ್ 54 ರನ್(45 ಎಸೆತ, 6X4, 1X6) ಉತ್ತಮ ಅಡಿಪಾಯ ಹಾಕಿಕೊಟ್ಟರು. ಪಂದ್ಯವನ್ನು ವೀಕ್ಷಿಸಲು ಕೆಕೆಆರ್ ತಂಡ ಸಹ ಮಾಲೀಕ ಶಾರುಖ್ ಖಾನ್, ಗಾಯಕಿ ಉಷಾ ಉತ್ತುಪ್, ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರು ಪಂದ್ಯವನ್ನು ವೀಕ್ಷಿಸಿ, ಆನಂದಿಸಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X