ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬೆಟ್ಟಿಂಗ್ : ಇಬ್ಬರು ಗುಜರಾತ್ ಆಟಗಾರರಿಗೆ ವಿಚಾರಣೆ ಭೀತಿ!

ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮಾಸ್ಟರ್ ಮೈಂಡ್ ರಮೇಶ್ ಸೇರಿದಂತೆ ಮೂವರು ಬುಕ್ಕಿಗಳನ್ನು ಕಾನ್ಪುರ ಪೊಲೀಸರು ವಿಚಾರಣೆಗೊಳಪಡಿಸಿದಾಗ ಹೊರ ಬಂದ ಸತ್ಯ ಬೆಚ್ಚಿಬೀಳಿಸುವಂತಿದೆ.

By ವಿಕಾಸ್ ನಂಜಪ್ಪ

ಕಾನ್ಪುರ್, ಮೇ 12: ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಗುಜರಾತ್ ಲಯನ್ಸ್ ವಿರುದ್ಧ ಪಂದ್ಯ ನಡೆಯುವ ವೇಳೆಯಲ್ಲಿ ಹೋಟೆಲ್ ರೂಮೊಂದರಲ್ಲಿ ಮೂವರು ಬುಕ್ಕಿಗಳು ಬಂಧಿತರಾಗಿರುವ ಸುದ್ದಿ ಓದಿರುತ್ತೀರಿ.

ಮೂವರ ವಿಚಾರಣೆ ಜಾರಿಯಲ್ಲಿದ್ದು, ಲಭ್ಯ ಮಾಹಿತಿಯಂತೆ ಗುಜರಾತ್ ಲಯನ್ಸ್ ತಂಡದ ಇಬ್ಬರು ಆಟಗಾರರ ಹೆಸರನ್ನು ಬುಕ್ಕಿಗಳು ಹೇಳಿದ್ದಾರೆ. ಹೀಗಾಗಿ ಆ ಇಬ್ಬರು ಆಟಗಾರರನ್ನು ವಿಚಾರಣೆಗೊಳಪಡಿಸಲು ಪೊಲೀಸರು ಮುಂದಾಗಿದ್ದಾರೆ. [ಐಪಿಎಲ್ 10ರ ಮೇಲೆ ಬೆಟ್ಟಿಂಗ್ ಕರಿನೆರಳು, ಮಾಸ್ಟರ್ ಮೈಂಡ್ ಬಂಧನ]

IPL 2017 betting scam: Two Gujarat Lions players likely to be questioned


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನ ಭ್ರಷ್ಟಾಚಾರ ನಿಗ್ರಹ ತಂಡ ಎಸಿಯು ಕೂಡಾ ಪೊಲೀಸರ ತನಿಖೆಗೆ ಸಹಕರಿಸುತ್ತಿದೆ. ಆಟಗಾರರು ತಂಗಿರುವ ಹೋಟೆಲ್ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಹೊರಗಿನ ವ್ಯಕ್ತಿಗಳನ್ನು ಆಟಗಾರರು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಯಾರು ಕಿಂಗ್ ಪಿನ್ : ಬುಕ್ಕಿಗಳಿಂದ ಬರೋಬ್ಬರಿ 40 ಲಕ್ಷ ರೂ. ನಗದು ಹಾಗೂ ಐದು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈ ಮೂಲದ ಮಾಸ್ಟರ್​ವೆುೖಂಡ್ ರಮೇಶ್ ಷಾ, ವಿಕಾಸ್ ಚೌಹಾಣ್ ಹಾಗೂ ರಮೇಶ್ ಬಂಧಿತರು. ಭಾರತದ ಪ್ರಮುಖ ಸ್ಟೇಡಿಯಂಗಳನ್ನು ರಮೇಶ್ ಷಾ ತನ್ನ ನೆಟ್​ವರ್ಕ್ ಹೊಂದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ದೇಶದೆಲ್ಲೆಡೆ ಬೆಟ್ಟಿಂಗ್ ಜಾಲ ಹೊಂದಿರುವ ಮಾಹಿತಿ ಸಿಕ್ಕಿದ್ದು, ಅಜ್ಮೇರ್ ಮೂಲದ ಬಂಟಿ ಇದರ ಕಿಂಗ್ ಪಿನ್ ಎಂದು ತಿಳಿದು ಬಂದಿದೆ. ಬಂಟಿಗೆ ರಮೇಶ್ ಕಳಿಸುವ ವಾಟ್ಸಪ್ ಸಂದೇಶದಲ್ಲಿ 'ಗುಜರಾತ್ ಆಟಗಾರರಿಬ್ಬರು ಬುಕ್ ಆಗಿದ್ದಾರೆ. ಮುಂದಿನ ಪಂದ್ಯದಲ್ಲಿ 200ರನ್ ಚೆಚ್ಚಿದರೂ ಗುಜರಾತ್ ಸೋಲು ಕಾಣಲಿದೆ' ಎಂದು ಕಂಡು ಬಂದಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Read in English:
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X