ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಯನ್ಸ್ ಹಾಗೂ ಡೆವಿಲ್ಸ್ ಕಾದಾಟದಲ್ಲಿ ಸಿಕ್ಸರ್ ಗಳದ್ದೇ ಅಬ್ಬರ

ಐಪಿಎಲ್ 2017ರ 42ನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಸಿಕ್ಸರ್ ಗಳದ್ದೇ ಅಬ್ಬರ, ಎರಡು ತಂಡಗಳು ಸೇರಿ 31 ಸಿಕ್ಸ್ ಬಾರಿಸಿದ್ದು ದಾಖಲೆಯಾಗಿದೆ.

By Mahesh

ನವದೆಹಲಿ, ಮೇ 05: ಐಪಿಎಲ್ 2017ರ 42ನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಸಿಕ್ಸರ್ ಗಳದ್ದೇ ಅಬ್ಬರ, ಎರಡು ತಂಡಗಳು ಸೇರಿ 31 ಸಿಕ್ಸ್ ಬಾರಿಸಿದ್ದು ದಾಖಲೆಯಾಗಿದೆ.

ಗುಜರಾತ್ ಲಯನ್ಸ್ ತಂಡ 208ರನ್ ಬಾರಿಸಿ ಬೃಹತ್ ಮೊತ್ತ ಪೇರಿಸಿ ಗೆಲುವಿನ ಕನಸು ಕಾಣ ತೊಡಗಿತು. ಆದರೆ, ಡೆಲ್ಲಿ ತಂಡದ ಯುವ ಪ್ರತಿಭೆಗಳಾದ ರಿಷಬ್ ಪಂತ್ 97 ಹಾಗೂ ಸಂಜು ಸ್ಯಾಮ್ಸನ್ 61ರನ್ ಬಾರಿಸಿ, 143ರನ್ ಜೊತೆಯಾಟ ಸಾಧಿಸಿ ಗೆಲುವಿನ ಹೊಸ್ತಿಲಿಗೆ ತಂಡವನ್ನು ತಂದರು. ಎರಡು ತಂಡಗಳಿಂದಲೂ ಭರ್ಜರಿ ಸಿಕ್ಸರ್, ಬೌಂಡರಿಗಳ ಸುರಿಮಳೆಯಾಯಿತು. [ರಿಷಬ್ ಪಂತ್ ಆಟ ನೋಡಿ ಥ್ರಿಲ್ ಆಗಿ ಸಚಿನ್ ಟ್ವೀಟ್]

97ರನ್ ಗಳಿಸಿ ಔಟಾದ ರಿಷಬ್ ಪಂತ್ ರನ್ನು ಎದುರಾಳಿ ತಂಡದ ನಾಯಕ ಸುರೇಶ್ ರೈನಾ ಅವರು ಸಂತೈಸಿದ ರೀತಿ ಪಂದ್ಯದ ಗಮನಾರ್ಹ ದೃಶ್ಯವಾಗಿತ್ತು. ರೈನಾ, ದಿನೇಶ್ ಕಾರ್ತಿಕ್ ಬ್ಯಾಟಿಂಗ್, ಕೋರೆ ಆಂಡರ್ಸನ್ ಕ್ಯಾಚ್, ಬ್ರೆಂಡನ್ ಮೆಕಲಮ್ ಫೀಲ್ಡಿಂಗ್ ಎಲ್ಲವೂ ಈ ಪಂದ್ಯ ಇತರೆ ಪ್ರಮುಖ ಅಂಶಗಳು...[ಐಪಿಎಲ್: ಗುಜರಾತ್ ಲಯನ್ಸ್ ಮೇಲೆ ಡೆಲ್ಲಿ ಡೆವಿಲ್ಸ್ ಸವಾರಿ]

ರಿಷಬ್ ಪಂತ್ ಹಾಗೂ ಸಂಜು

ರಿಷಬ್ ಪಂತ್ ಹಾಗೂ ಸಂಜು

* 209ರನ್ ಟಾರ್ಗೆಟ್ ಬೆನ್ನು ಹತ್ತಿದ ಡೆಲ್ಲಿ ತಂಡ ಉತ್ತಮ ಆರಂಭ ಪಡೆದರೂ ಕರುಣ್ ನಾಯರ್ ಅವರು 12ರನ್ ಗಳಿಸಿ ಔಟಾದರು.
* ರಿಷಬ್ ಪಂತ್ ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶನ ನೀಡಿದರು.
* ಪವರ್ ಪ್ಲೇ ಅವಧಿಯಲ್ಲಿ ದೆಹಲಿ 63/1 ಸ್ಕೋರ್ ಮಾಡಿತು.
* ರಿಷಬ್ ಪಂತ್ ಅರ್ಧಶತಕವನ್ನು 9ನೇ ಓವರ್ ನಲ್ಲಿ 27 ಎಸೆತಗಳಲ್ಲಿ ಪೂರೈಸಿದರು.
* ಸಂಜು ಸ್ಯಾಮ್ಸನ್ ಅವರು 12ನೇ ಓವರ್ ಗಳಲ್ಲಿ 24 ಎಸೆತಗಳಲ್ಲಿ 50ರನ್ ಗಡಿ ದಾಟಿದರು.

ರಿಷಬ್ ಪಂತ್ ಅಬ್ಬರ

ರಿಷಬ್ ಪಂತ್ ಅಬ್ಬರ

* ಸ್ಯಾಮ್ಸನ್ 31 ಎಸೆತಗಳಲ್ಲಿ 61ರನ್ ಗಳಿಸಿ ಔಟ್, ಜಡೇಜಗೆ ವಿಕೆಟ್.
* ಸ್ಯಾಮ್ಸನ್ ಹಾಗೂ ಪತ್ 143 ಜೊತೆಯಾಟ ಮಹತ್ವದ ಪಾತ್ರ ವಹಿಸಿತು.
* ರಿಷಬ್ ಪಂತ್ ಅವರು ಥಂಪಿ ಎಸೆತದಲ್ಲಿ ಔಟಾದರು. 97ರನ್ ಗಳಿಸಿ ಶತಕ ವಂಚಿತರಾದೌ.
* 17.3 ಓವರ್ ಗಳಲ್ಲಿ ಗೆಲುವಿನ ಗಡಿದಾಟಿದ ಡೆಲ್ಲಿ ತಂಡ ಜಯಭೇರಿ ಬಾರಿಸಿತು.
* 97ರನ್ ಬಾರಿಸಿದ ಪಂತ್ ಪಂದ್ಯಶ್ರೇಷ್ಠ ಎನಿಸಿದರು.

ಆಂಡರ್ಸನ್ ಕ್ಯಾಚ್

ಆಂಡರ್ಸನ್ ಕ್ಯಾಚ್

* ಗುಜರಾತ್ ತಂಡದ ನಾಯಕ ರೈನಾ ಅವರು ಪಂದ್ಯದ 9ನೇ ಓವರ್ ನಲ್ಲಿ ಅರ್ಧಶತಕ ಗಳಿಸಿದರು.
* ದಿನೇಶ್ ಕಾರ್ತಿಕ್ ಹಾಗೂ ಸುರೇಶ್ ರೈನಾ ಅವರು 133ರನ್ ಜೊತೆಯಾಟ ಕಂಡರು.
* 13ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಅರ್ಧಶತಕ ಬಾರಿಸಿದರು.
* ರೈನಾ 14ನೇ ಓವರ್ ನಲ್ಲಿ 77ರನ್ ಗಳಿಸಿದ್ದಾಗ ರಬಾಡಾ ಎಸೆತಕ್ಕೆ ರನ್ ಔಟ್ ಆದರು.
* 15ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಅವರು 65 ರನ್ ಗಳಿಸಿದ್ದಾಗ ಕೋರೆ ಆಂಡರ್ಸನ್ ಅವರು ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು.
* 20 ಓವರ್ ಗಳಲ್ಲಿ ಗುಜರಾತ್ ಲಯನ್ಸ್ 208/7 ಸ್ಕೋರ್ ಮಾಡಿತು.

ಗುಜರಾತ್ ಇನ್ನಿಂಗ್ಸ್

ಗುಜರಾತ್ ಇನ್ನಿಂಗ್ಸ್

ಟಾಸ್ ಗೆದ್ದರೂ ಫಿರೋಜ್ ಶಾ ಕೋಟ್ಲಾದಂಥ ಬ್ಯಾಟಿಂಗ್ ಪಿಚ್ ನಲ್ಲಿ ಡೆಲ್ಲಿ ನಾಯಕ ಕರುಣ್ ನಾಯರ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದರು.
* ಸಿಕ್ಕ ಅವಕಾಶ ಬಳಸಿಕೊಂಡು ಲಯನ್ಸ್ ಉತ್ತಮ ಮೊತ್ತ ಕಲೆ ಹಾಕಿತು.
* ಆದರೆ, ಇಬ್ಬರು ಓಪನರ್ ಗಳು ಕಾಗಿಸೋ ರಬಾಡ ಅವರು ಎರಡನೇ ಓವರ್ ನಲ್ಲಿ ಔಟಾದರು.
* ಪವರ್ ಪ್ಲೇ ನಲ್ಲಿ ಗುಜರಾತ್ 58/2 ಸ್ಕೋರ್ ಮಾಡಿತು.
* ಸುರೇಶ್ ರೈನಾ 0 ಹಾಗೂ 2ರನ್ ಗಳಿಸಿದ್ದಾಗ ಕ್ರಮವಾಗಿ ಸ್ಯಾಮುಯಲ್ಸ್ ಹಾಗೂ ಶ್ರೇಯಸ್ ಅಯ್ಯರ್ ರಿಂದ ಜೀವದಾನ ಪಡೆದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X