ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಚೆನ್ನೈ ತಂಡಕ್ಕೆ ಸೇರಲಿದ್ದಾರೆ ಇಂಗ್ಲೆಂಡ್ ಆಟಗಾರ

IPl 2018: England all-rounder David Willey set to join Chennai Super Kings

ಬೆಂಗಳೂರು, ಏಪ್ರಿಲ್ 10: ಇಂಗ್ಲೆಂಡ್‌ನ ವೇಗದ ಬೌಲರ್ ಡೇವಿಡ್ ವಿಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಮಿಷೆಲ್ ಸ್ಯಾಂಟ್ನರ್ ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ವಿಲ್ಲಿ ಅವರನ್ನು ಸೇರಿಸಿಕೊಳ್ಳಲು ಚೆನ್ನೈ ತಂಡ ಮುಂದಾಗಿದ್ದು, ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ಇಂಗ್ಲೆಂಡ್‌ ಕೌಂಟಿಯಲ್ಲಿ ಯಾರ್ಕ್‌ಶೈರ್ ಪರ ಆಡುತ್ತಿರುವ ವಿಲ್ಲಿ, ಅರ್ಧದಲ್ಲಿಯೇ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಮುಖಮಾಡಿದ್ದಾರೆ. ಅವರ ಸೇರ್ಪಡೆಯಾದರೆ ಐಪಿಎಲ್‌ನಲ್ಲಿ ಆಡುವ ಇಂಗ್ಲೆಂಡ್‌ ಆಟಗಾರರ ಸಂಖ್ಯೆ 12ಕ್ಕೆ ಏರಲಿದೆ.

ಐಪಿಎಲ್ ವಿಶೇಷ ಪುಟ | ಚೆನ್ನೈ ವೇಳಾಪಟ್ಟಿ | ಕೆಕೆಆರ್ ವೇಳಾಪಟ್ಟಿ

ಕೌಂಟಿಯಲ್ಲಿ ಶುರುವಾಯ್ತು ಸಂಕಟ
ಆದರೆ, ಈ ಬೆಳವಣಿಗೆ ಯಾರ್ಕ್‌ಶೈರ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಗಾಯಗೊಂಡಿರುವ ದಕ್ಷಿಣ ಆಫ್ರಿಕಾದ ಆಟಗಾರ ಕಗಿಸೊ ರಬಾಡ ಬದಲು ಇಂಗ್ಲೆಂಡ್ ಬೌಲರ್ ಲಿಯಮ್ ಪ್ಲಂಕೆಟ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅವರು ಕೂಡ ಯಾರ್ಕ್‌ಶೈರ್ ಪರ ಆಡುತ್ತಿದ್ದರು.

ಈ ರೀತಿ ಹಠಾತ್ತಾಗಿ ಆಟಗಾರರ ಬದಲಾವಣೆಗೆ ಮನವಿಗಳು ಬರುತ್ತಿರುವುದನ್ನು ನಿಭಾಯಿಸುವುದು ನಮಗೆ ತೀರಾ ಕಷ್ಟವಾಗುತ್ತಿದೆ ಎಂದು ಯಾರ್ಕ್‌ಶೈರ್ ತಂಡದ ನಿರ್ದೇಶಕ ಮಾರ್ಟಿನ್ ಮಾಕ್ಸನ್ ಹೇಳಿದ್ದಾರೆ.

ಯಾರ್ಕ್‌ಶೈರ್ ಪರ ಸಂಪೂರ್ಣ ಆಸಕ್ತಿ ತೋರದ ಆಟಗಾರರನ್ನು ಕೈಬಿಟ್ಟು, ನಾವು ಅವಕಾಶ ನಿರಾಕರಿಸಿದ್ದ ಆಟಗಾರರನ್ನು ಕರೆತರುವ ಪರಿಸ್ಥಿತಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಆಟಗಾರರು ಐಪಿಎಲ್‌ನಲ್ಲಿ ಹೊರಳುತ್ತಿರುವುದು ದೇಶಿ ಕ್ರಿಕೆಟ್‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ದೇಶಿ ಟಿ20 ಟೂರ್ನಿಗಳು ಹೆಚ್ಚುತ್ತಿವೆ. ಹೀಗಾಗಿ ಕೌಂಟಿ ಚಾಂಪಿಯನ್‌ಷಿಪ್ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ. ಈ ಸಂಬಂಧ ನಿರ್ದೇಶಕರುಗಳ ಸಭೆ ಕರೆದು ಚರ್ಚಿಸಲಾಗುವುದು.

ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಒಂದು ನಿರ್ದಿಷ್ಟ ದಿನಾಂಕ ನಿಗದಿಪಡಿಸಬೇಕು. ಹೀಗೆ ಮಧ್ಯದಲ್ಲಿ ತಂಡ ತೊರೆದು ಐಪಿಎಲ್ ಸೇರಿಕೊಳ್ಳಲು ಅವಕಾಶ ನೀಡಬಾರದು. ಈ ನಿಯಮಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಲಿದೆ ಮತ್ತು ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

Story first published: Tuesday, April 10, 2018, 11:16 [IST]
Other articles published on Apr 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X