ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018: ವಾಟ್ಸನ್ ನಿಂದ ಕೃಷ್ಣ ತನಕ ಅನಿರೀಕ್ಷಿತವಾಗಿ ಮಿಂಚಿದ XI

By Mahesh
IPL 2018: From Shane Watson to Prasidh Krishna - players who excelled beyond expectations

ಬೆಂಗಳೂರು, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ನಿರೀಕ್ಷೆಗೂ ಮೀರಿ, ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿ, ಗಮನ ಸೆಳೆದರು. ಅನಿರೀಕ್ಷಿತ ಆಟವಾಡಿ ಮಿಂಚಿದ ಆಟಗಾರರ ಪಟ್ಟಿ ಇಲ್ಲಿದೆ...

ಈ ಪಟ್ಟಿಯಲ್ಲಿ ಮುಖ್ಯವಾಗಿ ಐಪಿಎಲ್ 11ರ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ನ ಆರಂಭಿಕ ಆಟಗಾರ ಶೇನ್ ವಾಟ್ಸನ್ ಅಬ್ಬರಿಸಿದ್ದು ಯಾರೂ ಮರೆಯುವಂತಿಲ್ಲ. ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಶೇನ್ ವಾಟ್ಸನ್ ಸೇರಿದಂತೆ ಹಲವಾರು ಆಟಗಾರರು ಈ ಪಟ್ಟಿಯಲ್ಲಿದ್ದಾರೆ.

ಐಪಿಎಲ್ 2018 : ಅಂಕಿ ಅಂಶ

ಐಪಿಎಲ್ ಹರಾಜಿನಲ್ಲಿ ಹೆಚ್ಚು ಸದ್ದು ಮಾಡದ ಆಟಗಾರರು, ಮೈದಾನದಲ್ಲಿ ಆರ್ಭಟಿಸಿದರು. ಈ ಪೈಕಿ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಹೆಸರಿಸಬಹುದು. ಕೆಎಲ್ ರಾಹುಲ್ ಅವರು ನಿರೀಕ್ಷೆಗೂ ಮೀರಿ ಉತ್ತಮವಾಗಿ ಆಡಿದರು.

ಮೈಖೇಲ್ ಆಯ್ಕೆಯ ಅನಿರೀಕ್ಷಿತ ಸಂಚಲನ ತಂದ ಆಟಗಾರರ ವಿವರ ಹಾಗೂ ಅಂಕಿ ಅಂಶಗಳು ಮುಂದಿವೆ...

1. ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್)

1. ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್)

2017ರಲ್ಲಿ ಆರ್ ಸಿಬಿ ಪರ ಆಡಿದ್ದ ಶೇನ್ ವಾಟ್ಸನ್ 11.16 ರನ್ ಸರಾಸರಿಯಂತೆ 67ರನ್ ಹಾಗೂ 10.02 ಎಕಾನಮಿ ರೇಟ್ ನಂತೆ 4 ವಿಕೆಟ್ ಗಳಿಸಿದ್ದರು. ಈ ಬಾರಿ ಐಪಿಎಲ್ ಆಡುವುದೇ ಅನುಮಾನ ಎನಿಸಿದ್ದಾಗ, ಚೆನ್ನೈ ತಂಡ ಸೇರಿದರು.

36 ವರ್ಷ ವಯಸ್ಸಿನ ಶೇನ್ ವಾಟ್ಸನ್ 2008ರಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದಂತೆ 2018ರಲ್ಲೂ ಮಿಂಚಿದರು. 154.60 ಸ್ಟ್ರೈಕ್ ರೇಟ್ ನಂತೆ 555ರನ್ ಚೆಚ್ಚಿದರು. 15 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧ ಶತಕ ಬಾರಿಸಿ, ಚೆನ್ನೈ ತಂಡವು ಕಪ್ ಎತ್ತಲು ನೆರವಾದರು.

2. ಅಂಬಟಿ ರಾಯುಡು (ಚೆನ್ನೈ ಸೂಪರ್ ಕಿಂಗ್ಸ್)

2. ಅಂಬಟಿ ರಾಯುಡು (ಚೆನ್ನೈ ಸೂಪರ್ ಕಿಂಗ್ಸ್)

ಮುಂಬೈ ಇಂಡಿಯನ್ಸ್ ತಂಡದಿಂದ ಕೈ ಬಿಟ್ಟ ಪ್ರತಿಭೆ ಅಂಬಟಿ ರಾಯುಡು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದರು. 16 ಪಂದ್ಯಗಳನ್ನಾಡಿ 602ರನ್ ಬಾರಿಸಿದರು. 32 ವರ್ಷ ವಯಸ್ಸಿನ ರಾಯುಡು ಮೂರು ಅರ್ಧಶತಕ ಹಾಗೂ ಒಂದು ಶತಕ ಗಳಿಸಿದರು.

ಇನ್ನಿಂಗ್ಸ್ ಆರಂಭಿಸುವಂತೆ ಎಂಎಸ್ ಧೋನಿ ಸೂಚಿಸಿದ್ದು, ಅಂಬಟಿ ರಾಯುಡುಗೆ ವರದಾನವಾಯಿತು. ರಾಯುಡು ಮತ್ತೊಮ್ಮೆ ಟೀಂ ಇಂಡಿಯಾ ಸೇರಲು ಸಹಕಾರಿಯಾಯಿತು.

3. ಕೇನ್ ವಿಲಿಯಮ್ಸನ್ (ಕೇನ್ ವಿಲಿಯಮ್ಸನ್)

3. ಕೇನ್ ವಿಲಿಯಮ್ಸನ್ (ಕೇನ್ ವಿಲಿಯಮ್ಸನ್)

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು. 16 ಪಂದ್ಯಗಳಿಂದ 735ರನ್ ಚೆಚ್ಚಿ ಕಿತ್ತಳೆ ಟೋಪಿ ಧರಿಸಿದರು. 8 ಅರ್ಧಶತಕ ಬಾರಿಸಿದರು.

ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ವಿಲಿಯಮ್ಸನ್ ನಾಯಕತ್ವ ವಹಿಸಿಕೊಂಡಿದ್ದಲ್ಲದೆ, ತಂಡವನ್ನು ಫೈನಲ್ ಹಂತಕ್ಕೇರಿಸಿದರು. ಎಲ್ಲಾ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ಚೆನ್ನೈ ವಿರುದ್ಧ ಫೈನಲ್ ಪಂದ್ಯ ಸೇರದಂತೆ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತು.

4. ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್)

4. ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್)

ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಸಫಲರಾದರು. ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಬಟ್ಲರ್ ಸತತ ಐದು ಅರ್ಧಶತಕ ಬಾರಿಸಿ, ಸೆಹ್ವಾಗ್ ದಾಖಲೆಯನ್ನು ಮುರಿದರು. 13 ಪಂದ್ಯಗಳಿಂದ 548ರನ್(155.24 ಸ್ಟ್ರೈಕ್ ರೇಟ್) ಚೆಚ್ಚಿದರು. ಕ್ವಾಲಿಫೈಯರ್ 2 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬಟ್ಲರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

5. ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್)

5. ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್)

ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರರಾಗಿ ಮಿಂಚಿದ ಸೂರ್ಯಕುಮಾರ್ ಯಾದವ್ ಅವರು 14 ಪಂದ್ಯಗಳಿಂದ 512 ರನ್ ಗಳಿಸಿದರು. 4 ಅರ್ಧಶತಕ ಬಾರಿಸಿದರು. 2012ರಲ್ಲಿ ಐಪಿಎಲ್ ಗೆ ಕಾಲಿಟ್ಟ ಬಳಿಕ ಇಲ್ಲಿ ತನಕ 200ಪ್ಲಸ್ ರನ್ ಮಾತ್ರ ಗಳಿಸಿದ್ದರು. ಈ ಬಾರಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದರು.

6. ಮಯಾಂಕ್ ಮಾರ್ಕಂಡೆ (ಮುಂಬೈ ಇಂಡಿಯನ್ಸ್)

6. ಮಯಾಂಕ್ ಮಾರ್ಕಂಡೆ (ಮುಂಬೈ ಇಂಡಿಯನ್ಸ್)

ಈ ಬಾರಿ ಮುಂಬೈ ತಂಡದ ಅಚ್ಚರಿಯ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ ತಮ್ಮ ಮೊದಲ ಐಪಿಎಲ್ ನಲ್ಲೇ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದರು. ಮೊದಲ ಪಂದ್ಯದಲ್ಲೇ ಅಂಬಟಿ ರಾಯುಡು ಹಾಗೂ ಎಂಎಸ್ ಧೋನಿ ಅವರ ವಿಕೆಟ್ ಗಳಿಸಿದರು. 20 ವರ್ಷ ವಯಸ್ಸಿನ ಪಂಜಾಬ್ ಬೌಲರ್ ಒಟ್ಟಾರೆ, 14 ಪಂದ್ಯಗಳಿಂದ 15ವಿಕೆಟ್ ಗಳಿಸಿದರು.

7. ಮುಜೀಬ್ ಉರ್ ಜದ್ರಾನ್ (ಕಿಂಗ್ಸ್ XI ಪಂಜಾಬ್)

7. ಮುಜೀಬ್ ಉರ್ ಜದ್ರಾನ್ (ಕಿಂಗ್ಸ್ XI ಪಂಜಾಬ್)

17 ವರ್ಷ ವಯಸ್ಸಿನ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಮುಜೀರ್ ಉರ್ ಜದ್ರಾನ್ ಅವರು 11 ಪಂದ್ಯಗಳಿಂದ 10 ವಿಕೆಟ್ ಗಳಿಸಿದರು. ಕಿಂಗ್ಸ್ ಎಲೆವನ್ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. 6.99 ಎಕಾನಾಮಿ ದರದಂತೆ ಬೌಲ್ ಮಾಡಿ ವಿಕೆಟ್ ಕಿತ್ತ ಜದ್ರಾನ್ ಅವರು ಮುಂಬರುವ ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ.

8. ಶ್ರೇಯಸ್ ಗೋಪಾಲ್ (ರಾಜಸ್ಥಾನ್ ರಾಯಲ್ಸ್)

8. ಶ್ರೇಯಸ್ ಗೋಪಾಲ್ (ರಾಜಸ್ಥಾನ್ ರಾಯಲ್ಸ್)

24 ವರ್ಷ ವಯಸ್ಸಿನ ಕರ್ನಾಟಕದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಅವರು 20 ಲಕ್ಷಕ್ಕೆ ರಾಜಸ್ಥಾನಕ್ಕೆ ಮಾರಾಟವಾಗಿದ್ದರು. ಆದರೆ, 7.61 ಎಕಾನಾಮಿ ದರದಂತೆ 11 ವಿಕೆಟ್ ಕಿತ್ತ ಈ ಲೆಗ್ ಸ್ಪಿನ್ನರ್ ದಾಳಿಗೆ ಸಿಲುಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಗಳು ತಿಣುಕಿದ್ದನ್ನು ಮರೆಯುವಂತಿಲ್ಲ. ಆ ಪಂದ್ಯದಲ್ಲಿ 4/16 ಪಡೆದು ಶ್ರೇಯಸ್ ಮಿಂಚಿದರು.

9. ಕೃಷ್ಣಪ್ಪ ಗೌತಮ್ (ರಾಜಸ್ಥಾನ್ ರಾಯಲ್ಸ್)

9. ಕೃಷ್ಣಪ್ಪ ಗೌತಮ್ (ರಾಜಸ್ಥಾನ್ ರಾಯಲ್ಸ್)

29 ವರ್ಷ ವಯಸ್ಸಿನ ಕೃಷ್ಣಪ್ಪ ಗೌತಮ್ ಅವರು ಕೂಡಾ ಕರ್ನಾಟಕ ಮೂಲದ ಪ್ರತಿಭೆ. 6.40 ಕೋಟಿ ರು ನೀಡಿ ಗೌತಮ್ ಅವರನ್ನು ರಾಜಸ್ಥಾನ ತಂಡಕ್ಕೆ ಖರೀದಿಸಿದ್ದಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. 15 ಪಂದ್ಯಗಳಲ್ಲಿ 11 ವಿಕೆಟ್ ಗಳನ್ನು ಗಳಿಸಿದ್ದಲ್ಲದೆ, 126 ರನ್, ಅದ್ಭುತ ಫೀಲ್ಡಿಂಗ್ ಮೂಲಕ ಎಲ್ಲರ ಹುಬ್ಬೇರಿಸಿದರು. ಮುಂಬೈ ವಿರುದ್ಧ 11 ಎಸೆತಗಳಲ್ಲಿ ಅಜೇಯ 33ರನ್ ಚೆಚ್ಚಿದ್ದನ್ನು ಮರೆಯುವಂತಿಲ್ಲ.

10. ಉಮೇಶ್ ಯಾದವ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

10. ಉಮೇಶ್ ಯಾದವ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಟೀಂ ಇಂಡಿಯಾದ ಪ್ರಮುಖ ವೇಗಿ ಉಮೇಶ್ ಯಾದವ್ ಅವರು 14 ಪಂದ್ಯಗಳಲ್ಲಿ 20 ವಿಕೆಟ್ ಕಿತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಧಾರವಾಗಿದ್ದರು. ಉಮೇಶ್ ಅವರನ್ನು ಟೆಸ್ಟ್ ಬೌಲರ್ ಎಂದೇ ಎಲ್ಲರೂ ಪರಿಗಣಿಸಿರುವ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿ, ಟೀಕಾಕಾರರ ಬಾಯಿ ಮುಚ್ಚಿಸಿದರು.

11. ಪ್ರಸಿಧ್ ಕೃಷ್ಣ (ಕೋಲ್ಕತ್ತಾ ನೈಟ್ ರೈಡರ್ಸ್)

11. ಪ್ರಸಿಧ್ ಕೃಷ್ಣ (ಕೋಲ್ಕತ್ತಾ ನೈಟ್ ರೈಡರ್ಸ್)

ಅಂಡರ್ 19 ತಂಡದ ಸ್ಟಾರ್ ಬೌಲರ್ ಕಮ್ಲೇಶ್ ನಗರಕೋಟಿ ಅವರು ಗಾಯಗೊಂಡು ಐಪಿಎಲ್ ನಿಂದ ಹೊರ ಬಂದ ಬಳಿಕ, ಬದಲಿ ಆಟಗಾರನಾಗಿ ಸೇರಿಕೊಂಡ ಪ್ರಸಿಧ್ ಕೃಷ್ಣ ಅವರು ಕೋಲ್ಕತ್ತ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದರು. ಆಡಿದ 7 ಪಂದ್ಯಗಳಲ್ಲೇ 10 ವಿಕೆಟ್ ಕಿತ್ತಿದ್ದಲ್ಲದೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4/30 ಸಾಧನೆ ಮಾಡಿದರು.

22 ವರ್ಷ ವಯಸ್ಸಿನ ಪ್ರಸಿಧ್ ಅವರು ಆರ್ ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿದ್ದರು. ದಿನೇಶ್ ಕಾರ್ತಿಕ್ ಅವರು ಕೃಷ್ಣ ಅವರ ಪ್ರತಿಭೆ ಗುರುತಿಸಿ, ಅವಕಾಶ ನೀಡಿದ್ದಕ್ಕೆ ತಕ್ಕಂತೆ ಫಲ ಸಿಕ್ಕಿದೆ.

Story first published: Wednesday, May 30, 2018, 18:26 [IST]
Other articles published on May 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X