ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶ್ವಿನ್ ಆಯ್ಕೆ ಮಾಡುವುದು ಚೆನ್ನೈ ತಂಡದ ಮೊದಲ ಆದ್ಯತೆ

By Mahesh
Getting R Ashwin in IPL 2018 auction will be a priority for Chennai Super Kings: MS Dhoni

ಚೆನ್ನೈ, ಜನವರಿ 19: 'ಬೇರೆ ತಂಡಗಳಿಂದ ಭಾರಿ ಆಫರ್ ಇದ್ದರೂ, ತನಗೆ ಎಲ್ಲವನ್ನು ಕೊಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಮರಳುವುದು ನನ್ನ ಆದ್ಯತೆಯಾಗಿತ್ತು' ಎಂದು ಚೆನ್ನೈ ಸೂಪರ್ ಕಿಂಗ್ಸ್ ನ ಸ್ಟಾರ್ ಆಟಗಾರ ಎಂಎಸ್ ಧೋನಿ ಹೇಳಿದ್ದಾರೆ.

ಇದರ ಬೆನ್ನಲ್ಲೇ ಮುಂಬರುವ ಹರಾಜು ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

ಐಪಿಎಲ್ 2018 : ಆಟಗಾರರ ಸಂಬಳ, ಧೋನಿ ಎಲ್ಲಿಗೆ? ಇತ್ಯಾದಿಐಪಿಎಲ್ 2018 : ಆಟಗಾರರ ಸಂಬಳ, ಧೋನಿ ಎಲ್ಲಿಗೆ? ಇತ್ಯಾದಿ

ಬೆಂಗಳೂರಿನಲ್ಲಿ ಜನವರಿ 27 ಹಾಗೂ 28ರಂದು ಐಪಿಎಲ್ 2018ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿ(15 ಕೋಟಿ ರು) ಯನ್ನು ನಾಯಕನಾಗಿ ಮರಳಿದ್ದಾರೆ.

ಸುರೇಶ್ ರೈನಾ (11 ಕೋಟಿ ರೂ.) ಹಾಗೂ ರವೀಂದ್ರ ಜಡೇಜಾ (7 ಕೋಟಿ ರೂ.) ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಮಿಕ್ಕ ಸ್ಟಾರ್ ಆಟಗಾರರನ್ನು ಹರಾಜು ಮೂಲಕವೆ ಖರೀದಿಸಬೇಕಿದೆ.

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮುಂದಿನ ಐಪಿಎಲ್ ನಲ್ಲಿ ಕಣಕ್ಕಿಳಿಯಲಿವೆ.

ಐಪಿಎಲ್ : ಗೌತಮ್ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಕಣ್ಣು?

ಆಟಗಾರರ ಸಂಬಳ ಮಿತಿ 80 ಕೋಟಿ ರುಗೆ ಏರಿಸಲಾಗಿದೆ. ಮೂರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ಐಪಿಎಲ್ 11ರಲ್ಲಿ ಪ್ರತಿಯೊಂದು ತಂಡ 25 ಆಟಗಾರರನ್ನು ಖರೀದಿ ಮಾಡಬಹುದಾಗಿದೆ, ಈ ಪೈಕಿ 17 ಭಾರತೀಯರಾದರೆ 8 ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ.

Story first published: Friday, January 19, 2018, 18:34 [IST]
Other articles published on Jan 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X