ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದಾಯ ಹೇಳುವ ಹೊತ್ತಾಯಿತೇ? ಈ ಆಟಗಾರರ ಭವಿಷ್ಯವೇನು?

ಬೆಂಗಳೂರು, ಮೇ 21: ಐಪಿಎಲ್ ಪ್ರತಿ ಆವೃತ್ತಿಯಲ್ಲಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತದೆ. ದೇಶಿ ಕ್ರಿಕೆಟ್‌ನಲ್ಲಿ ಹೆಚ್ಚು ಅವಕಾಶ ಸಿಗದ ಆಟಗಾರರು ಇಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತೆ ಮಿಂಚುತ್ತಾರೆ.

ಎಷ್ಟೋ ಆಟಗಾರರಿಗೆ ಇದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ವೇದಿಕೆಯೂ ಹೌದು. ಇನ್ನು ಕೆಲವು ಆಟಗಾರರಿಗೆ ಅಗ್ನಿಪರೀಕ್ಷೆಯ ಜಾಗವಿದು. ತಮ್ಮಲ್ಲಿ ಇನ್ನೂ ಆಟವಾಡುವ ಸಾಮರ್ಥ್ಯವಿದೆ, ಮರೆಯಬೇಡಿ ಎಂದು ಹೇಳಿಕೊಳ್ಳಲು ಸಿಗುವ ಅವಕಾಶ.

ಕೊನೆಯ ಘಟ್ಟಕ್ಕೆ ಬಂತು ಐಪಿಎಲ್ ಹಬ್ಬ: ಯಾರಿಗೆ ಸಿಗಲಿದೆ ಕಪ್?ಕೊನೆಯ ಘಟ್ಟಕ್ಕೆ ಬಂತು ಐಪಿಎಲ್ ಹಬ್ಬ: ಯಾರಿಗೆ ಸಿಗಲಿದೆ ಕಪ್?

ಐಪಿಎಲ್ ಎಂದರೆ ಯುವಕರ ಆಟ. ಹಿರಿಯ ಆಟಗಾರರು ಈ ವೇಗಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಮಾತನ್ನು ಎಂ.ಎಸ್. ಧೋನಿ, ಶೇಟ್ ವಾಟ್ಸನ್, ಡ್ವೇಯ್ನ್ ಬ್ರೇವೊ, ಸುರೇಶ್ ರೈನಾ, ಕ್ರಿಸ್ ಗೇಲ್ ಮುಂತಾದ ಆಟಗಾರರು ಹುಸಿಯಾಗಿಸಿದರು.

ಆದರೆ, ಕ್ರಿಕೆಟ್ ಜಗತ್ತು ಕಣ್ಣಿಟ್ಟಿದ್ದ ಅನೇಕ ಆಟಗಾರರು ಇಲ್ಲಿ ವಿಫಲರಾದರು. ದೇಶಿ ಕ್ರಿಕೆಟ್‌ನಲ್ಲಿ ಮಿಂಚಲಾಗದೆ, ಐಪಿಎಲ್‌ನಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಈ ಆಟಗಾರರು ಕ್ರೀಡಾಂಗಣದ ತಮ್ಮ ಪಯಣಕ್ಕೆ ವಿದಾಯ ಹೇಳುವ ಹಂತಕ್ಕೆ ತಲುಪಿದ್ದಾರೆಯೇ ಎಂಬ ಅನಿಸಿಕೆ ಮೂಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರೀತಿ ಝಿಂಟಾ ಖುಷಿಯಾಗಿದ್ದೇಕೆ?ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರೀತಿ ಝಿಂಟಾ ಖುಷಿಯಾಗಿದ್ದೇಕೆ?

ಒಂದು ಕಾಲದಲ್ಲಿ ತಂಡದ ಆಧಾರ ಸ್ಥಂಬಗಳಲ್ಲಿ ಒಂದಾಗಿದ್ದ ಈ ಆಟಗಾರರು, ರಾಜ್ಯದ ರಣಜಿ ತಂಡಕ್ಕೂ ಭಾರವಾಗುತ್ತಿದ್ದಾರೆ. ವೈಫಲ್ಯಗಳ ಮಧ್ಯೆಯೂ ಅವರ ಮೇಲೆ ನಂಬಿಕೆಯಿಟ್ಟು ಖರೀದಿಸಿದ ಐಪಿಎಲ್ ಫ್ರಾಂಚೈಸಿಗಳಿಗೆ ಕಹಿ ನೀಡಿದ್ದಾರೆ. ಈ ಆಟಗಾರರ ಭವಿಷ್ಯ ಇಲ್ಲಿಗೇ ಮುಗಿಯಿತೇ? ಮುಂದಿನ ಆವೃತ್ತಿಯಲ್ಲೂ ಈ ಆಟಗಾರರು ಪ್ಯಾಡ್ ಧರಿಸುವರೇ? ಯುವ ಆಟಗಾರರ ಪೈಪೋಟಿಯ ನಡುವೆ ರಾಷ್ಟ್ರೀಯ ತಂಡದಲ್ಲಿ ಮತ್ತೆ ತಮ್ಮ ಸ್ಥಾನ ಕಂಡುಕೊಳ್ಳುವರೇ ಎಂಬ ಪ್ರಶ್ನೆಗಳು ಮೂಡಿವೆ.

ಆಟ ಮುಗಿಸಿದರೇ ಗೌತಮ್ ಗಂಭೀರ್?

ಆಟ ಮುಗಿಸಿದರೇ ಗೌತಮ್ ಗಂಭೀರ್?

ವಿದೇಶಗಳ ಚೆಂಡು ಪುಟಿದೇಳುವ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳ ಬೆಂಕಿ ಚೆಂಡಿನಂತ ಎಸೆತಗಳನ್ನು ಪುಟಾಣಿ ದೇಹದ ಗೌತಮ್ ಗಂಭೀರ್ ಕೊಂಚವೂ ಭಯವಿಲ್ಲದೆ ಎದುರಿಸಿ ಬೌಂಡರಿಗಟ್ಟುತ್ತಿದ್ದರು.

ಹೆಸರಿನಲ್ಲಿ ಗಂಭೀರವಿದ್ದರೂ ಅದು ಅವರ ಸಹಜ ಸ್ವಭಾವವಲ್ಲ. ಕೋಪಿಷ್ಠ ಗುಣ ಅವರದು. ಈ ಕಾರಣದಿಂದಲೇ ಅವರು ಅನೇಕ ಬಾರಿ ಸಹ ಆಟಗಾರರೊಂದಿಗೇ ಕಿತ್ತಾಟ ನಡೆಸಿ ಕೆಟ್ಟ ಹೆಸರುಪಡೆದ್ದಾರೆ. ಆದರೆ ಆ ಅಗ್ರೆಸಿವ್ ಸ್ವಭಾವ ಕ್ರಿಕೆಟ್ ಅಂಗಳದಲ್ಲಿ ಅವರ ಯಶಸ್ಸಿಗೆ ಕಾರಣವಾಗಿತ್ತು.

2007ರ ಟಿ 20 ಮತ್ತು 2011ರ ವಿಶ್ವಕಪ್ ಫೈನಲ್‌ನಲ್ಲಿ ಗಂಭೀರ್ ಆಟ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಂತಹ ಗಂಭೀರ್ ಈಗ ತಂಡಕ್ಕೆ ಬೇಡವಾಗಿದ್ದಾರೆ. ಅವರ ಆಟ ಕಳೆಗುಂದಿದೆ. ಬಾಲ್‌ ಎದುರಿಸಲು ತಿಣುಕಾಡುತ್ತಿದ್ದಾರೆ.

ಕಳೆದ ಆವೃತ್ತಿಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನಾಯಕರಾಗಿ, ಟ್ರೋಫಿ ಗೆದ್ದಿದ್ದಲ್ಲದೆ ಬ್ಯಾಟಿಂಗ್‌ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದ ಗಂಭೀರ್, ಈ ಬಾರಿ ತವರು ತಂಡ ದೆಹಲಿಗೆ ಮರಳಿದ್ದರು. ಆದರೆ ಮೊದಲ ಪಂದ್ಯದಲ್ಲಿ ಕಷ್ಟಪಟ್ಟು ಅರ್ಧಶತಕ ಗಳಿಸಿದ್ದ ಅವರು, ಮತ್ತೆ ಯಾವ ಪಂದ್ಯದಲ್ಲಿಯೂ ಹೇಳಿಕೊಳ್ಳುವಂತಹ ಆಟವಾಡಲಿಲ್ಲ.

ಆರು ಪಂದ್ಯಗಳಿಂದ ಗಂಭೀರ್ 17ರ ಸರಾಸರಿಯಲ್ಲಿ ಗಳಿಸಿದ ಒಟ್ಟು ರನ್ 88 ಮಾತ್ರ. ಅವರ ಸ್ಟ್ರೈಕ್‌ ರೇಟ್‌ ಇದ್ದಿದ್ದು ಕೇವಲ 96.59. ಸತತ ವೈಫಲ್ಯದ ಜತೆಗೆ ತಂಡವೂ ಸೋಲುಗಳನ್ನು ಅನುಭವಿಸಿದ್ದರಿಂದ ಅದಕ್ಕೆ ಹೊಣೆ ಹೊತ್ತು ಟೂರ್ನಿಯ ಅರ್ಧದಲ್ಲಿಯೇ ಗಂಭೀರ್ ನಾಯಕತ್ವ ತ್ಯಜಿಸಿದರು.

ಅವರಿಗಿಂತ ಕಿರಿಯ ಶ್ರೇಯಸ್ ಅಯ್ಯರ್ ಅವರ ಹೆಗಲಿಗೆ ನಾಯಕತ್ವದ ಹೊಣೆ ವರ್ಗಾವಣೆಯಾಯಿತು. ಮುಂದಿನ ಪಂದ್ಯದಿಂದಲೇ ಅವರು ಮತ್ತೆ ಕಣಕ್ಕೆ ಇಳಿಯಲೇ ಇಲ್ಲ.

ಇದು ಗಂಭೀರ್ ಅವರ ಯುಗಾಂತ್ಯವೇ ಅಥವಾ ದೇಶಿ ಕ್ರಿಕೆಟ್‌ನಲ್ಲಿ ಆಡಿ ಮತ್ತೆ ಪುಟಿದೇಳುವರೇ ಎಂಬ ಪ್ರಶ್ನೆ ಈಗ ಎದುರಾಗಿದೆ.

ಯುವರಾಜ್ ಗತವೈಭವ

ಯುವರಾಜ್ ಗತವೈಭವ

ಯುವರಾಜ್ ಸಿಂಗ್ ಅಥವಾ ಯುವಿ ತಂಡದಲ್ಲಿ ಇದ್ದರೆ ಅದರ ಗಮ್ಮತ್ತೇ ಬೇರೆ ಎಂಬ ಅಭಿಪ್ರಾಯವಿತ್ತು. ಸೋಲು ಖಾತರಿ ಎಂಬಂತಾಗಿದ್ದ ಅನೇಕ ಪಂದ್ಯಗಳಲ್ಲಿ ಹೋರಾಟ ನಡೆಸಿ ಗೆಲುವಿನ ದಡಕ್ಕೆ ತಂದ ಕೀರ್ತಿ ಯುವಿಯದ್ದು. 2007ರ ಟಿ 20 ವಿಶ್ವಕಪ್‌ನಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸತತ ಆರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಯುವಿ ಆಟ ಒಂದು ರೋಚಕ ಇತಿಹಾಸ.

2011ರ ವಿಶ್ವಕಪ್‌ ಆಡುವಾಗಲೇ ಕಾಣಿಸಿಕೊಂಡ ಕ್ಯಾನ್ಸರ್‌ ಮಾರಕ ರೋಗದೊಂದಿಗೆ ತನ್ನ ಹೋರಾಟವನ್ನು ಬಚ್ಚಿಟ್ಟು, ಅಮೋಘ ಪ್ರದರ್ಶನ ನೀಡಿದ ಯುವಿ ಬಳಿಕ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದರು.

ಮತ್ತೆ ತಂಡಕ್ಕೆ ಮರಳಿದರೂ ಯುವಿ ಆಟದಲ್ಲಿ ಹಿಂದಿನ ಮೊನಚು ಕಾಣಿಸಲೇ ಇಲ್ಲ. ಬೆನ್ನು ನೋವಿನ ಕಾರಣ ಬೌಲಿಂಗ್‌ ಕೂಡ ಮಾಡದಾದರು. ದೂರ ದೂರಕ್ಕೆ ಜಿಗಿದು ಚೆಂಡು ಹಿಡಿಯುತ್ತಿದ್ದ ಯುವಿ, ಐಪಿಎಲ್‌ನಲ್ಲಿ ಕೈಗೆ ಬಂದ ಸುಲಭದ ಕ್ಯಾಚ್‌ಗಳನ್ನೂ ಕೈ ಚೆಲ್ಲಿದರು. ಮತ್ತೆ ಅವಕಾಶಗಳನ್ನು ನೀಡಿದರೂ ಅವರಿಂದ ನಿರೀಕ್ಷಿತ ಆಟ ಮೂಡಿಬರಲೇ ಇಲ್ಲ.

2019ರ ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಯುವಿ ಸುಳಿವು ನೀಡಿದ್ದಾರೆ. ಆ ವೇಳೆ ತಂಡಕ್ಕೆ ಆಯ್ಕೆಯಾಗುವ ಕನಸು ಅವರಲ್ಲಿದೆ. ಆದರೆ, ಯುವಿ ಸದ್ಯದ ಫಾರ್ಮ್ ಚಿಂತೆಗೀಡು ಮಾಡಿದೆ. ಇದೇ ಕಳಪೆ ಪ್ರದರ್ಶನ ಮುಂದುವರಿದರೆ ಯುವಿ ಎಂಬ ಅದ್ಭುತ ಆಟಗಾರನ ಯುಗ ಮುಂದಿನ ವರ್ಷದ ವೇಳೆಗೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಸ್ವಿಂಗ್ ಮರೆತ ಇರ್ಫಾನ್

ಸ್ವಿಂಗ್ ಮರೆತ ಇರ್ಫಾನ್

ಇರ್ಫಾನ್ ಪಠಾಣ್ ಎಂಬ ಮಿಂಚು ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚಿನಷ್ಟೇ ವೇಗವಾಗಿ ಬಂದು ಅಷ್ಟೇ ವೇಗವಾಗಿ ಮರೆಯಾಯಿತು.

ಅಂಡರ್19 ವಿಶ್ವಕಪ್‌ನಲ್ಲಿ ಚುರುಕಿನ ಬೌಲಿಂಗ್‌ನಿಂದ ಗಮನ ಸೆಳೆದ ಇರ್ಫಾನ್ ಪಠಾಣ್, ಬ್ಯಾಟಿಂಗ್‌ನಲ್ಲಿಯೂ ಉತ್ತಮ ತಂತ್ರಗಾರಿಕೆ ಹೊಂದಿದ್ದರು. ಹೀಗಾಗಿ ಅವರಿಗೆ ಭಾರತ ತಂಡ ಬಾಗಿಲು ತೆರೆಯುವುದು ಕಷ್ಟವಾಗಲಿಲ್ಲ.

ಅದ್ಭುತ ಸ್ವಿಂಗ್ ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದ ಇರ್ಫಾನ್, ಟೆಸ್ಟ್ ಕ್ರಿಕೆಟ್‌ನ ಮೊದಲ ಓವರ್‌ನಲ್ಲಿಯೇ ಹ್ಯಾಟ್ರಿಕ್ ಪಡೆದು ದಾಖಲೆ ನಿರ್ಮಿಸಿದ್ದರು. ಆರಂಭಿಕ ಬ್ಯಾಟ್ಸ್‌ಮನ್‌ ಆಗುವ ಪ್ರಯೋಗಕ್ಕೂ ಒಳಗಾಗಿದ್ದರು.

ಇರ್ಫಾನ್ ಪಠಾಣ್ ಭಾರತ ಕ್ರಿಕೆಟ್ ತಂಡದ ಒಬ್ಬ ಜಾಕ್ ಕಾಲಿಸ್ ಆಗುವ ಎಲ್ಲ ಲಕ್ಷಣಗಳೂ ಕಂಡುಬಂದಿದ್ದವು. ಆದರೆ ಬ್ಯಾಟಿಂಗ್ ಮೇಲೆ ಗಮನ ಕೇಂದ್ರೀಕರಿಸಿದ ಪಠಾಣ್, ಬೌಲಿಂಗ್‌ನಲ್ಲಿನ ಹಿಡಿತ ಕಳೆದುಕೊಂಡರು. ಬಳಿಕ ಬ್ಯಾಟಿಂಗ್‌ನಲ್ಲಿ ಕೂಡ ವೈಫಲ್ಯ ಅನುಭವಿಸಿದರು.

ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಇರ್ಫಾನ್ ಪಠಾಣ್ ಅಂತಹ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ. ಈ ಬಾರಿ ಅವರನ್ನು ಯಾವ ತಂಡವೂ ಖರೀದಿಸುವ ಗೋಜಿಗೇ ಹೋಗಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಸಾಧಾರಣ ಪ್ರದರ್ಶನ ನಿಡಿರುವ ಇರ್ಫಾನ್, ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ತರಬೇತುದಾರರಾಗಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಅವರು ತಂಡದಲ್ಲಿ ಸೇರಿಕೊಂಡು ಕ್ರಿಕೆಟ್ ವೃತ್ತಿ ಬದುಕು ಮುಂದುವರಿಸುವ ಸೂಚನೆ ನೀಡಿದ್ದಾರೆ.

ಟರ್ಬೊಬೇಟರ್ ಬಜ್ಜಿ

ಟರ್ಬೊಬೇಟರ್ ಬಜ್ಜಿ

ದೇಶ ಕಂಡ ಅತ್ಯುತ್ತಮ ಆಫ್‌ಸ್ಪಿನ್ನರ್‌ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು.

ಅನಿಲ್ ಕುಂಬ್ಳೆ ಜತೆಗೆ ಮತ್ತೊಬ್ಬ ಸ್ಪಿನ್ನರ್ ಕೊರತೆ ಎದುರಿಸುತ್ತಿದ್ದಾಗ ಬೌನ್ಸಿಂಗ್ ಪಿಚ್‌ಗಳಲ್ಲಿಯೂ ಚೆಂಡನ್ನು ತಿರುಗಿಸುವ ಸಾಮರ್ಥ್ಯವುಳ್ಳ ಹರ್ಭಜನ್ ಸಿಂಗ್ ತಂಡಕ್ಕೆ ಸಿಕ್ಕಿದ್ದರು. ಕುಂಬ್ಳೆ ಒಂದೆಡೆ ಶಿಸ್ತಿನ ದಾಳಿ ನಡೆಸುತ್ತಿದ್ದಾಗ ಇನ್ನೊಂದೆಡೆ ಹರ್ಭಜನ್ ವಿಕೆಟ್ ಕಿತ್ತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರು.

ತಮ್ಮ ಬೌಲಿಂಗ್ ಶೈಲಿ ಕಾರಣಕ್ಕೆ ಹರ್ಭಜನ್ ವಿವಾದಕ್ಕೆ ಒಳಗಾಗಿದ್ದರು. ಹರ್ಭಜನ್ ಸದ್ಯ ತಂಡಕ್ಕೆ ಒಳ-ಹೊರಗೆ ಹೋಗಿ ಬರುವ ಆಟಗಾರ. ಹಿರಿಯ ಆಟಗಾರನಾಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಜಾಗವಿಲ್ಲ.

ಆದರೆ ಹರ್ಭಜನ್ ಆಟವಿನ್ನೂ ಮುಗಿದಿಲ್ಲ ಎಂದು ಆಗಾಗ ಸಾಬೀತುಪಡಿಸುತ್ತಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಹರ್ಭಜನ್ ಅನುಭವ ಟೆಸ್ಟ್‌ ತಂಡಕ್ಕೆ ಅಗತ್ಯವಿರುವುದು ಸುಳ್ಳಲ್ಲ.

ಈ ಬಾರಿ 12 ಪಂದ್ಯಗಳನ್ನು ಆಡಿರುವ ಹರ್ಭಜನ್ ಸಿಂಗ್ 8.48 ಎಕಾನಮಿಯಲ್ಲಿ 270 ರನ್ ನೀಡಿ 7 ವಿಕೆಟ್ ಕಿತ್ತಿದ್ದಾರೆ. ಆದರೆ ಕಳೆದ ರಣಜಿಯಲ್ಲಿ ಹರ್ಭಜನ್ ಬೌಲಿಂಗ್ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಕುಲದೀಪ್ ಯಾದವ್, ಯುಜುರ್ವೇಂದ್ರ ಚಾಹಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್ ಮುಂತಾದ ಸ್ಪಿನ್ನರ್‌ಗಳ ನಡುವೆ ಹರ್ಭಜನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಸುಲಭವಲ್ಲ.

ದೈತ್ಯ ಬ್ಯಾಟ್ಸ್‌ಮನ್ ಯೂಸುಫ್

ದೈತ್ಯ ಬ್ಯಾಟ್ಸ್‌ಮನ್ ಯೂಸುಫ್

ತಮ್ಮ ಇರ್ಫಾನ್ ಪಠಾಣ್‌ಗಿಂತ ತಡವಾಗಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡವರು ಯೂಸುಫ್ ಪಠಾಣ್. ದೈತ್ಯ ದೇಹಿ ಯೂಸುಫ್ ಪಠಾಣ್, ಚೆಂಡನ್ನು ಬೌಂಡರಿಯ ಯಾವ ಮೂಲೆಗೆ ಬೇಕಾದರೂ ಅಟ್ಟಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಇನ್ನೇನು ಭಾರತ ಸೋತೇಬಿಟ್ಟಿತು ಎಂಬ ಪರಿಸ್ಥಿತಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಶತಕ ಬಾರಿಸಿ ಗೆಲ್ಲಿಸಿದ ಯೂಸುಫ್ ಪಠಾಣ್, ಈಗ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

ಬರೋಡಾ ರಣಜಿ ತಂಡದಲ್ಲಿ ಯೂಸುಫ್ ಆಟ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಹೊಡಿಬಡಿಯ ಆಟಕ್ಕೆ ಹೆಸರಾದ ಯೂಸುಫ್, ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. 12 ಪಂದ್ಯಗಳನ್ನು ಆಡಿರುವ ಪಠಾಣ್ 26.85 ಸರಾಸರಿಯಲ್ಲಿ 188 ರನ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳಿಂದ ಅವರು ಗಳಿಸಿದ್ದು 143 ಮಾತ್ರ.

ಯೂಸುಫ್ ಪಠಾಣ್ ಬ್ಯಾಟಿಂಗ್‌ನಲ್ಲಿ ಹಳೆಯ ವೈಭವವಿಲ್ಲ. ಫೀಲ್ಡ್‌ನಲ್ಲಿ ಚುರುಕುತನ ಹೊಂದಿಲ್ಲದ ಕಾರಣ ಅವರು ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಸುಲಭವಲ್ಲ.

Story first published: Monday, May 21, 2018, 17:00 [IST]
Other articles published on May 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X