ನಿದಹಾಸ್ ಟ್ರೋಫಿಯ ಫೈನಲ್ ನಲ್ಲಿ ಕಡೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ, ಭಾರತಕ್ಕೆ ಭರ್ಜರಿ ಜಯ ತಂದಿತ್ತ ತಮಿಳುನಾಡಿನ ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಉತ್ಸಾಹದಿಂದ ಚಿಮ್ಮುತ್ತಿದೆ. ಈ ತಂಡ ಕೂಡ ಅನುಭವಿ ಮತ್ತು ಯುವ ಆಟಗಾರರ ಸಮ್ಮಿಲನದಿಂದ ಕೂಡಿದ್ದು, ಮೂರನೇ ಬಾರಿ ಟ್ರೋಫಿ ಎತ್ತಿಹಿಡಿಯುವ ಉತ್ಸಾಹದಲ್ಲಿದೆ.