ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ನಾಟಕೀಯ ಆಟಕ್ಕಾಗಿ ಅನಗತ್ಯ ಪಟ್ಟಿ ಸೇರಿದ ಅಮಿತ್ ಮಿಶ್ರಾ

IPL 2019: Amit Mishra given out obstructing the field, joins unwanted list

ವಿಶಾಖಪಟ್ಟಣ, ಮೇ 9: ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್‌)ನಲ್ಲಿ ರನೌಟ್ ತಪ್ಪಿಸುವುದಕ್ಕಾಗಿ ಚೆಂಡಿಗೆ ಅಡ್ಡನಿಂತು ಔಟಾದ ಎರಡನೇ ಬ್ಯಾಟ್ಸ್ಮನ್‌ ಆಗಿ ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಗುರುತಿಸಿಕೊಂಡಿದ್ದಾರೆ. ಬುಧವಾರ (ಮೇ 8) ನಡೆದ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಟಕೀಯ ನಡೆಗಾಗಿ ಮಿಶ್ರಾ ಔಟ್ ಆದರು.

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಮೂರು ವಿಶ್ವಕಪ್‌ಗಳಲ್ಲಿ ಅಝರುದ್ದೀನ್‌ ಸಾಧನೆಯೇನು?

ವಿಶಾಖಪಟ್ನಂನ ಡಾ. ವೈಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದ 19.4ನೇ ಓವರ್‌ನಲ್ಲಿ ಮಿಶ್ರಾ ಅಬ್ಸ್‌ಟ್ರ್ಯಾಕ್ಟಿಂಗ್ ದ ಫೀಲ್ಡ್ (ಕ್ಷೇತ್ರವನ್ನು ತಡೆಯೋದು) ರೀತಿಯಲ್ಲಿ ಔಟ್ ಆದರು. ಪಂದ್ಯವನ್ನು ಡಿಸಿ 2 ವಿಕೆಟ್‌ಗಳಿಂದ ಗೆದ್ದು ಕ್ವಾಲಿಫೈಯರ್-2ಗೆ ಪ್ರವೇಶಿಸಿತು.

ಎದುರಾಳಿ ಫೀಲ್ಡರ್ ಚೆಂಡು ಎಸೆದಾಗ ಚೆಂಡು ವಿಕೆಟ್‌ಗೆ ತಾಗದಂತೆ, ರನ್ ಓಟ್ ಆಗದಂತೆ ಮಿಶ್ರಾ ಬೇಕೆಂದೇ ಅಡ್ಡವಾಗಿ ಓಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಐಪಿಎಲ್ ಇತಿಹಾಸದಲ್ಲಿ ಈ ರೀತಿಯಲ್ಲಿ ಬ್ಯಾಟ್ಸ್ಮನ್‌ ಒಬ್ಬ ಔಟ್ ಆಗಿದ್ದ ಇದು ಎರಡನೇಸಾರಿ. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ಯೂಸೂಫ್ ಪಠಾಣ್ 2013ರಲ್ಲಿ ಪೂಣೆ ವಾರಿಯರ್ಸ್ ಇಂಡಿಯಾ ವಿರುದ್ಧ 'ಅಬ್ಸ್‌ಟ್ರ್ಯಾಕ್ಟಿಂಗ್ ದ ಫೀಲ್ಡ್' ಗಾಗಿ ಔಟ್ ಆಗಿದ್ದರು.

ಐಪಿಎಲ್‌ನಲ್ಲಿ ಒಂದು ಸಾರಿಯೂ ಟ್ರೋಫಿ ಎತ್ತದ ಡೆಲ್ಲಿ ಈ ಬಾರಿ ಟ್ರೋಫಿಯ ನಿರೀಕ್ಷೆ ಮೂಡಿಸಿದೆ. ಕ್ವಾಲಿಫೈಯರ್-2ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯ ವಿಶಾಖಪಟ್ಟಣ ಸ್ಟೇಡಿಯಂನಲ್ಲೇ ಮೇ 10ರಂದು ನಡೆಯಲಿದೆ.

Story first published: Thursday, May 9, 2019, 16:00 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X