ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆರಾಧ್ಯ ದೈವ' ಕೊಹ್ಲಿ ಜತೆ ಆಡಲು ಯುವ ಪ್ರತಿಭೆ ಪ್ರಯಾಸ್ ಸಜ್ಜು

 IPL 2019 Auction: Prayas gears up to share dressing room with icon Kohli

ಬೆಂಗಳೂರು, ಡಿಸೆಂಬರ್ 18: ತನ್ನ ಆರಾಧ್ಯ ದೈವ ವಿರಾಟ್ ಕೊಹ್ಲಿ ಜತೆ ಒಂದು ಸೆಲ್ಫಿ ತೆಗೆದುಕೊಳ್ಳುವ ಕನಸು ಕಾಣುತ್ತಿದ್ದ ಯುವ ಕ್ರಿಕೆಟರ್ ಗೆ ಈಗ ಜತೆಯಲ್ಲಿ ಆಡುವ, ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಸದವಕಾಶ ಲಭ್ಯವಾಗಿದೆ.

ಪಶ್ಚಿಮ ಬಂಗಾಲದ 15 ವರ್ಷ ವಯಸ್ಸಿನ ಯುವ ಪ್ರತಿಭೆ ಪ್ರಯಾಸ್ ರಾಯ್ ಬರ್ಮಾನ್ ಅವರನ್ನು 15 ಕೋಟಿ ರು ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಖರೀದಿಸಿದೆ. 20 ಲಕ್ಷ ರು ಮೂಲ ಬೆಲೆ ಹೊಂದಿದ್ದ ಪ್ರಯಾಸ್ ಉತ್ತಮ ಲೆಗ್ ಸ್ಪಿನ್ನರ್ ಆಗಿ ಬೆಳೆಯುತ್ತಿದ್ದಾರೆ.

ಐಪಿಎಲ್ ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು? ಐಪಿಎಲ್ ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?

ಬೆಂಗಾಲ ಪರ ಆಡಿರುವ ಪ್ರಯಾಸ್ ತಮ್ಮ ಚೊಚ್ಚಲ ಸೀಸನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

ದೆಹಲಿಯಲ್ಲಿ ಬೆಳೆದರೂ, ಅಜ್ಜಿ, ಅಜ್ಜನ ಜತೆ ಕೋಲ್ಕತ್ತಾದ ಡಮ್ ಡಮ್ ಪಾರ್ಕ್ ಬಳಿಯ ಫ್ಲಾಟಿನಲ್ಲಿ ನೆಲೆಸಿದ್ದು, ದೇಶದ ಪರ ಆಡುವ ಆಡುವ ಕನಸು ಹೊಂದಿದ್ದಾರೆ.

ಐಪಿಎಲ್ ಹರಾಜು: ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ ಯಾರು? ಐಪಿಎಲ್ ಹರಾಜು: ಬಂಪರ್ ಹೊಡೆದ 'ಮಿಸ್ಟರಿ ಸ್ಪಿನ್ನರ್' ಚಕ್ರವರ್ತಿ ಯಾರು?

ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರ ಜತೆ ಆಡುವ ಮೂಲಕ ಕಲಿಯುವುದು ಸಾಕಷ್ಟಿರುತ್ತದೆ ಎಂದು 6 ಅಡಿ 1 ಇಂಚು ಎತ್ತರವಿರುವ ಪ್ರಯಾಸ್ ಅವರು ಲೆಗ್ ಸ್ಪಿನ್ನರ್ ವಿಷಯದಲ್ಲಿ ದಿಗ್ಗಜ ಅನಿಲ್ ಕುಂಬ್ಳೆ ಅವರನ್ನು ಮಾದರಿಯಾಗಿ ಹೊಂದಿದ್ದಾರೆ.

ನನಗೆ ಸಕತ್ ಖುಷಿಯಾಗಿದೆ

ನನಗೆ ಸಕತ್ ಖುಷಿಯಾಗಿದೆ

'ನನಗೆ ಸಕತ್ ಖುಷಿಯಾಗಿದೆ, ಸಾಕಷ್ಟು ಫೋನ್ ಕಾಲ್ ಗಳು ಬರುತ್ತಿವೆ, ಎಲ್ಲರ ಶುಭ ಹಾರೈಕೆಗಳನ್ನು ಸ್ವೀಕರಿಸಿ ಧನ್ಯವಾದ ಹೇಳುತ್ತಿದ್ದೇನೆ. ಐಪಿಎಲ್ ತಂಡ ಸೇರುವ ನಿರೀಕ್ಷೆ ಇರಲಿಲ್ಲ, ಅದರಲ್ಲೂ ತನ್ನ ಹೀರೋ ಕೊಹ್ಲಿ ಜತೆ ಆಡಬಲ್ಲೆ ಎಂದು ಊಹಿಸಿರಲೂ ಇಲ್ಲ' ಎಂದು ಪಿಟಿಐ ಜತೆ ಮಾತನಾಡುತ್ತಾ ಪ್ರಯಾಸ್ ಹೇಳಿದ್ದಾರೆ.

ಕೊಹ್ಲಿ, ಕುಂಬ್ಳೆ ನನಗೆ ಮಾದರಿ ಕ್ರಿಕೆಟರ್ಸ್

ಕೊಹ್ಲಿ, ಕುಂಬ್ಳೆ ನನಗೆ ಮಾದರಿ ಕ್ರಿಕೆಟರ್ಸ್

'ಕ್ರಿಕೆಟ್ ನಲ್ಲಿ ನನಗೆ ವಿರಾಟ್ ಮಾದರಿಯಾಗಿದ್ದು, ಅವರ ಜತೆ ಫೋಟೋ ತೆಗೆಸಿಕೊಳ್ಳುವುದು ಕನಸಾಗಿತ್ತು. ಆದರೆ, ಇಲ್ಲಿ ತನಕ ಕನಸು ನನಸಾಗಿರಲಿಲ್ಲ. ಈಗ ನನ್ನ ಹೀರೋ ಜತೆಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುವ ಜತೆಗೆ ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ' ಎಂದಿದ್ದಾರೆ.

ಮನೋಜ್ ತಿವಾರಿ ನೆರವು

ಮನೋಜ್ ತಿವಾರಿ ನೆರವು

ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 4/20 ಗಳಿಸಿದ್ದಲ್ಲದೆ, 9 ಪಂದ್ಯಗಳಿಂದ 11 ವಿಕೆಟ್ 4.45 ಸರಾಸರಿಯಂತೆ ಪಡೆದುಕೊಂಡಿದ್ದಾರೆ. ರಣಜಿಯಲ್ಲಿ ನಾಯಕ ಮನೋಜ್ ತಿವಾರಿ ಹಾಗ್ ಕೋಚ್ ಸಾಯಿರಾಜ್ ಬಹುತಳೆ ನನಗೆ ನೆರವಾದರು ಎಂದು ಸ್ಮರಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಅನುಭವ

ದುರ್ಗಾಪುರ್ ಮೂಲದ ಪ್ರಯಾಸ್ ಅವರು ಬೆಳೆದಿದ್ದು ನವದೆಹಲಿಯ ವಾತಾವರಣದಲ್ಲಿ, ತಂದೆ ಕೌಶಿಕ್ ರಾಯ್ ವೃತ್ತಿಯಲ್ಲಿ ವೈದ್ಯರು, ರಾಮ್ ಪಾಲ್ ಕ್ರಿಕೆಟ್ ಅಕಾಡೆಮಿ, ಗಾರ್ಗಿ ಕಾಲೇಜಿನಲ್ಲಿ ಮೊದಲಿಗೆ ಕ್ರಿಕೆಟ್ ಪಾಠ ಕಲಿತರು.

ದುರ್ಗಾಪುರ್ ಕ್ರಿಕೆಟ್ ಸೆಂಟರ್ ನಲ್ಲಿ ಶಿಬ್ನಾಥ್ ರಾಯ ಮಾರ್ಗದರ್ಶನ ಸಿಕ್ಕಿತು. ಅಂಡರ್ 14ರಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂಡರ್ 16ರಲ್ಲಿ ಆಡಿ ನಂತರ ಬಂಗಾಲ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದಾರೆ.

Story first published: Wednesday, December 19, 2018, 15:08 [IST]
Other articles published on Dec 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X