ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ನವದೆಹಲಿ, ಏಪ್ರಿಲ್ 30: ಐಪಿಎಲ್ 2019ರ ಕಳೆ ಹೆಚ್ಚುವಲ್ಲಿ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಪ್ರಮುಖ ಆಟಗಾರ ಆಗಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾದಿಂದ ವರ್ಷದ ನಿಷೇಧ ಶಿಕ್ಷೆ ಮುಗಿಸಿದವರೇ ಐಪಿಎಲ್‌ನಲ್ಲಿ ಪಾಲ್ಗೊಂಡು ವಾರ್ನರ್ ಕ್ರಿಕೆಟ್‌ ಪ್ರಿಯರಿಗೆ ರಸದೌತಣವನ್ನೂ ಬಡಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಲೂ ಪ್ಲೇ ಆಫ್‌ ಪ್ರವೇಶಿಸಬಲ್ಲದು!

ಸನ್ ರೈಸರ್ಸ್ ಹೈದರಾಬಾದ್ ಪರ ಬಿರುಸಿನ ಬ್ಯಾಟಿಂಗ್ ನಡೆಸಿದ ವಾರ್ನರ್ ಸದ್ಯಕ್ಕೆ 2019ರ ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಾಗಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 12 ಇನ್ನಿಂಗ್ಸ್‌ಗಳನ್ನಾಡಿರುವ ಅವರು 69.20ರ ಸರಾಸರಿಯಂತೆ 692 ರನ್ ಗಳಿಸಿ ಆರೆಂಜ್ ಕ್ಯಾಪ್ ಹಾದಿಯಲ್ಲಿ ಮೊದಲ ಸ್ಥಾನ ಆವರಿಸಿದ್ದಾರೆ.

ಐಪಿಎಲ್‌ ಪ್ಲೇ ಆಫ್ಸ್‌ ಪಂದ್ಯಗಳಿಂದ 20 ಕೋಟಿ ರೂ. ಜೇಬಿಗಿಳಿಸಲಿರುವ ಬಿಸಿಸಿಐ

ಸೋಮವಾರ (ಏಪ್ರಿಲ್ 29) ಹೈದರಾಬಾದ್‌ನಲ್ಲಿ ನಡೆದ ಕೊನೆಯ ಐಪಿಎಲ್ ಪಂದ್ಯವನ್ನಾಡಿದ ವಾರ್ನರ್, ಪಂಜಾಬ್ ವಿರುದ್ಧ ಹೈದರಾಬಾದ್ 45 ರನ್‌ ಗೆಲುವಿಗೆ ಕಾರಣರಾಗಿದ್ದರು. ಆಸೀಸ್ ಪರ ವಿಶ್ವಕಪ್ ಅಭ್ಯಾಸಕ್ಕಾಗಿ ಈಗ ತಾಯ್ನೆಲಕ್ಕೆ ಹೊರಟಿದ್ದಾರೆ. ಹಾಗೆ ಹೊರಡೋಕೂ ಮುನ್ನ ವಾರ್ನರ್ ಭಾವನಾತ್ಮಕ ಸಂದೇಶಗಳನ್ನು ಬರೆದಿದ್ದಾರೆ.

ಭಾರತಕ್ಕೆ ಕೃತಜ್ಞ

ಐಪಿಎಲ್ ಸಲುವಾಗಿ ಕುಟುಂಬದೊಂದಿಗೆ ಬಂದು ಅದ್ಭುತ ದೇಶ ಭಾರತದಲ್ಲಿ ಒಂದಿಷ್ಟು ಖುಷಿಯ ಕ್ಷಣಗಳನ್ನು ಸಂಭ್ರಮಿಸಲು ಸಾಧ್ಯವಾಗಿದ್ದಕ್ಕೆ ನಾನು ಭಾರತಕ್ಕೆ ಅತ್ಯಂತ ಕೃತಜ್ಞನಾಗಿದ್ದೇನೆ ಎಂಬರ್ಥದಲ್ಲಿ ವಾರ್ನರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಒಂದು ಕುಟುಂಬದಂತಿದ್ದೆವು

'ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಒಂದು ಕುಟುಂಬದಂತಿದ್ದೆವು. ತಂಡದಲ್ಲಿ ನನ್ನನ್ನು ಬೆಂಬಲಿಸಿದ್ದಕಾಗಿ ಎಸ್‌ಆರ್‌ಎಚ್‌ಗೆ ನಾನು ಮಾತುಗಳಿಂದ ಕೃತಜ್ಞತೆ ವ್ಯಕ್ತಪಡಿಸಲು ಸಾಧ್ಯವಿಲ್ಲ' ಎಂದು ಐಪಿಎಲ್ ಅಂತಿಮ ಪಂದ್ಯದ ಬಳಿಕ ವಾರ್ನರ್ ಟ್ವೀಟ್ ಮಾಡಿದ್ದಾರೆ.

ವಿಶ್ವಕಪ್‌ನಲ್ಲಿ ಮತ್ತೆ ಸಿಗೋಣ

ಸೋಮವಾರ (ಏಪ್ರಿಲ್ 29) ಐಪಿಎಲ್ ಕಡೆಯ ಪಂದ್ಯವನ್ನಾಡಿ ಆಸ್ಟ್ರೇಲಿಯಾಕ್ಕೆ ಹೊರಟ ವಾರ್ನರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹ ಆಟಗಾರ, ಅಫ್ಘಾನಿಸ್ತಾನ್‌ ಸ್ಟಾರ್ ರಶೀದ್ ಖಾನ್ ಪ್ರೀತಿಯಿಂದ ಬೀಳ್ಕೊಟ್ಟು ಮಾಡಿರುವ ಟ್ವೀಟ್.

ವಿಶ್ವಕಪ್‌ ಎಡೆಗಿನ ಮೆಟ್ಟಿಲು

ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ವರ್ಷದ ನಿಷೇಧ ಅನುಭವಿಸಿದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಸಾರಿಯ ಐಪಿಎಲ್‌ನಲ್ಲಿ ಪಾಲ್ಗೊಂಡವರೇ ಭರ್ಜರಿ ಪ್ರದರ್ಶನವನ್ನೂ ನೀಡಿದ್ದರು. ನಿಷೇಧಕ್ಕೀಡಾಗಿದ್ದರಿಂದ 2018ರ ಐಪಿಎಲ್‌ನಲ್ಲಿ ವಾರ್ನರ್ ಪಾಲ್ಗೊಂಡಿರಲಿಲ್ಲ. ಈ ಸಾರಿ ನಿಷೇಧದ ಅವಧಿ ಮುಗಿಯುವ ಹೊತ್ತಿಗೆ ವಾರ್ನರ್ ಎಸ್‌ಆರ್ಎಚ್ ತಂಡ ಸೇರಿಕೊಂಡಿದ್ದರು. ಅಂದರೆ ವಿಶ್ವಕಪ್‌ಗೆ ತಕ್ಕಮಟ್ಟಿನ ತಯಾರಿಗೆ ಐಪಿಎಲ್ ದಾರಿಯಾಗಿತ್ತು. ಇದನ್ನೇ ಸ್ಮರಿಸಿದ ವಾರ್ನರ್, 'ಐಪಿಎಲ್ ನನ್ನ ಪಾಲಿಗೆ ವಿಶ್ವಕಪ್‌ ಎಡೆಗಿನ ಮೆಟ್ಟಿಲು' ಎಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 30, 2019, 18:08 [IST]
Other articles published on Apr 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X