ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಗೆ 2-3 ಪಂದ್ಯಗಳ ನಿಷೇಧ ಹೇರಬೇಕು: ವೀರೇಂದ್ರ ಸೆಹ್ವಾಗ್

IPL 2019: ‘Dhoni should’ve been banned for 2-3 games’ - Sehwag

ನವದೆಹಲಿ, ಏಪ್ರಿಲ್ 14: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಎಂಎಸ್ ಧೋನಿಗೆ ಎನಿಲ್ಲವಾದರೂ 2-3 ಪಂದ್ಯಗಳ ನಿಷೇಧವನ್ನಾದರೂ ಹೇರಬೇಕಿತ್ತು ಎಂದಿದ್ದಾರೆ. ಪಂದ್ಯದ ವೇಳೆ ಮೈದಾನಕ್ಕೆ ತೆರಳಿ ಅಂಪೈರ್ ಜೊತೆ ಧೋನಿ ವಾಗ್ವಾದಕ್ಕಿಳಿದಿದ್ದ ಪ್ರಸಂಗಕ್ಕೆ ಸಂಬಂಧಿಸಿ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮೊಗದಲ್ಲಿ ಮೊದಲ ನಗು, ಪಂಜಾಬ್ ವಿರುದ್ಧ ಬೆಂಗಳೂರು ಜಯಭೇರಿಕೊಹ್ಲಿ ಮೊಗದಲ್ಲಿ ಮೊದಲ ನಗು, ಪಂಜಾಬ್ ವಿರುದ್ಧ ಬೆಂಗಳೂರು ಜಯಭೇರಿ

ಏಪ್ರಿಲ್ 11ರಂದು ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 25ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್ 4 ವಿಕೆಟ್ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ನೋಬಾಲ್‌ಗೆ ಸಂಬಂಧಿಸಿ ಗರಂ ಆದ ಧೋನಿ ಆಟದ ನಡುವೆಯೇ ಮೈದಾನ ಪ್ರವೇಶಿಸಿ ಅಂಪೈರ್ ಅವರನ್ನು ಪ್ರಶ್ನಿಸಿದ್ದು ವಿವಾದಕ್ಕೀಡಾಗಿತ್ತು.

ಈ ವಿವಾದ ಕುರಿತು ಕ್ರಿಕ್‌ಬಝ್‌ ಜೊತೆ ಮಾತನಾಡುತ್ತ ಸೆಹ್ವಾಗ್, 'ನನಗನ್ನಿಸುವ ಪ್ರಕಾರ ಧೋನಿಗೆ 2-3 ಪಂದ್ಯಗಳ ನಿ‍ಷೇಧ ಹೇರಬೇಕಿತ್ತು. ಯಾಕೆಂದರೆ ಇವತ್ತು ಧೋನಿ ಮಾಡಿದರೆ, ನಾಳೆ ಇನ್ನೊಬ್ಬ ನಾಯಕ ಇದನ್ನೇ ಮಾಡುತ್ತಾನೆ. ಹೀಗಾದರೆ ಅಂಪೈರ್‌ಗಳ ಮೌಲ್ಯವೇನು?' ಎಂದಿದ್ದಾರೆ.

ವಿಶ್ವಕಪ್‌: ಭಾರತ ಅಂತಿಮ ತಂಡ ಪ್ರಕಟಿಸುವ ದಿನಾಂಕ, ಸಮಯ-ಮಾಹಿತಿವಿಶ್ವಕಪ್‌: ಭಾರತ ಅಂತಿಮ ತಂಡ ಪ್ರಕಟಿಸುವ ದಿನಾಂಕ, ಸಮಯ-ಮಾಹಿತಿ

ಪಂದ್ಯದ ವೇಳೆ 'ಗರಂ ಆದ ಕೂಲ್ ಕ್ಯಾಪ್ಟನ್‌' ಧೋನಿಗೆ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿತ್ತು. ಧೋನಿಯ ಈ ನಡೆಗೆ ಕ್ರಿಕೆಟ್ ವಲಯದಲ್ಲ ಟೀಕೆಯೂ ವ್ಯಕ್ತವಾಗಿತ್ತು. ಆದರೆ ಧೋನಿ ಅಭಿಮಾನಿಗಳು ಮಾತ್ರ ಧೋನಿ ಈ ವರ್ತನೆಯನ್ನು ಸಮರ್ಧಿಸಿಕೊಂಡಿದ್ದರು. ಒಟ್ಟಿನಲ್ಲಿ ಈ ವಿವಾದ ಈಗಲೂ ಕ್ರಿಕೆಟ್ ವಲಯದಲ್ಲಿ ಚರ್ಚಿಸಲ್ಪಡುತ್ತಿದೆ.

Story first published: Sunday, April 14, 2019, 0:30 [IST]
Other articles published on Apr 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X