ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿ ಅಚ್ಚರಿಗೆ ಕಾರಣರಾದ ಎಂಎಸ್ ಧೋನಿ!

IPL 2019: Done After Father, Dhonis Funniest Connection

ನವದೆಹಲಿ, ಏಪ್ರಿಲ್ 27: ಕ್ರಿಕೆಟ್‌ ಅಂಗಳ ಅಪರೂಪದ, ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾದ ಅನೇಕ ಉದಾಹರಣೆಗಳಿವೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂಥದ್ದೊಂದು ಅಪರೂಪದ ಸಾಧನೆಗಾಗಿ ಅಚ್ಚರಿ ಮೂಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಅಪ್ಪ-ಮಗ ಇಬ್ಬರನ್ನೂ ಔಟ್ ಮಾಡಿದ ಅತೀ ವಿರಳ ಸಂದರ್ಭವೊಂದಕ್ಕೆ ಧೋನಿ ಕಾರಣರಾಗಿದ್ದಾರೆ.

ಪಾಕಿಸ್ತಾನ ವಿರುದ್ಧದ ಅಂಡರ್-19 ಸರಣಿ ರದ್ದುಗೊಳಿಸಿದ ಶ್ರೀಲಂಕಾ ಕ್ರಿಕೆಟ್

ಏಪ್ರಿಲ್ 11ರಂದು ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ನಾಯಕ, ವಿಕೆಟ್ ಕೀಪರ್ ಧೋನಿ ಆರ್‌ಆರ್‌ ಆಟಗಾರ ರಿಯಾನ್ ಪರಾಗ್ ಅವರನ್ನು ಶಾರ್ದೂಲ್‌ ಠಾಕೂರ್ ಓವರ್‌ನಲ್ಲಿ ಕ್ಯಾಚ್ ಮೂಲಕ ಔಟ್ ಮಾಡಿದ್ದರು.

ಧೋನಿ ಕ್ಯಾಚ್ ಹಿಡಿದ, ಔಟ್ ಮಾಡಿದ ಹಿಂದಿನ ದಾಖಲೆಗಳನ್ನು ಕೆದಕಿದಾಗ ಅಪರೂಪದ ಅಚ್ಚರಿ ಕಾಣಸಿಕ್ಕಿದೆ. ಸುಮಾರು 19 ವರ್ಷಗಳ ಹಿಂದೆ ರಣಜಿಯಲ್ಲಿ ಬಿಹಾರ ತಂಡ ಪ್ರತಿನಿಧಿಸಿದ್ದ ಧೋನಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಪರಾಗ್ ಕೆ ದಾಸ್ ಎಂಬವರನ್ನು ಸ್ಟಂಪ್ಡ್ ಔಟ್ ಮಾಡಿದ್ದರು. ಆ ಪರಾಗ್ ಕೆ ದಾಸ್ ಬೇರಾರೂ ಅಲ್ಲ; ಆರ್‌ಆರ್ ತಂಡದಲ್ಲಿ ಈಗ ಆಡುತ್ತಿರುವ ರಿಯಾನ್‌ ಅವರ ತಂದೆ!

ಈ ಸೀಸನ್‌ನಲ್ಲಿ ಡೆಲ್ಲಿಯ ಉತ್ತಮ ಪ್ರದರ್ಶನಕ್ಕೆ ಕಾರಣ ಹೇಳಿದ ಪಾಂಟಿಂಗ್

ತಂದೆ-ಮಗ ಅಂದರೆ ಎರಡು ತಲೆಮಾರಿನ ಆಟಗಾರರನ್ನು ಔಟ್ ಮಾಡಿದ ಶ್ರೇಯಸ್ಸು ಧೋನಿಗೆ ಸಲ್ಲುತ್ತದೆ. ಬಹುಶಃ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ಬೇರೆ ಬೇರೆ ಹಂತಗಳಲ್ಲಿ ತಂದೆ-ಮಗನನ್ನು ಔಟ್ ಮಾಡಿದ ಇಂಥ ಪ್ರಸಂಗ ತೀರಾ ಅಪರೂಪವಾದುದು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, April 27, 2019, 20:54 [IST]
Other articles published on Apr 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more