ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರ ಐಪಿಎಲ್‌ ಫೈನಲ್ ಪಂದ್ಯದ ಟಿಕೆಟ್‌ಗಳು ಏನಾಯ್ತು ಗೊತ್ತಾ?

IPL 2019 : IPL ಟಿಕೆಟ್ ಗಳು ಮಾಯ..! ಕ್ರಿಕೆಟ್ ಅಭಿಮಾನಿಗಳ ಆಕ್ರೋಶ..!? | Oneindia Kannada
IPL final tickets sold out in two minutes

ಬೆಂಗಳೂರು, ಮೇ 09: ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಎರಡು ಸ್ಟ್ಯಾಂಡ್‌ಗಳನ್ನು ತೆರೆಯಲು ಅನುಮತಿ ಸಿಗದ ಕಾರಣ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಚೆನ್ನೈನಿಂದ ಹೈದರಾಬಾದ್‌ಗೆ ವಾರ್ಗಾವಣೆಯಾಯಿತು.

ಅಂತೆಯೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೇ ಮಂಗಳವಾರ ಫೈನಲ್‌ ಪಂದ್ಯದ ಮೊದಲ ಕಂತಿನ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟಕ್ಕೆ ಇರಿಸಿತು. ಮಾರಾಟಕ್ಕೆ ಇಟ್ಟ ಕೇವಲ 120 ಸೆಕೆಂಡ್‌ಗಳಲ್ಲಿ ಟಿಕೆಟ್‌ಗಳ ಮಾಯಾ. 2 ನಿಮಿಷ ತಡವಾಗಿ ಟಿಕೆಟ್‌ ಖರೀದಿಸಲು ಪ್ರಯತ್ನಿಸಿದವರಿಗೆಲ್ಲ ಸಿಕ್ಕಿದ್ದು ಒಂದೇ ಉತ್ತರ ಸೋಲ್ಡ್‌ ಔಟ್‌.. ಸೋಲ್ಡ್‌ ಔಟ್‌..

 ಹಾರ್ದಿಕ್‌ ಪಾಂಡ್ಯ ಭವಿಷ್ಯ ನುಡಿದ ಯುವರಾಜ್‌ ಸಿಂಗ್‌! ಹಾರ್ದಿಕ್‌ ಪಾಂಡ್ಯ ಭವಿಷ್ಯ ನುಡಿದ ಯುವರಾಜ್‌ ಸಿಂಗ್‌!

ಒಂದೆಡೆ ಇದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯ ವೀಕ್ಷಣೆಗೆ ಇರುವ ಭಾರಿ ಬೇಡಿಕೆಯನ್ನು ಎತ್ತಿ ಹಿಡಿಯುತ್ತದೆ. ಮತ್ತೊಂದೆಡೆ ಟಿಕೆಟ್‌ ಮಾರಾಟದಲ್ಲಿ ಬಿಸಿಸಿಐ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆಯೇ ಎಂಬ ಸಂಶಯವೂ ಸಹಜವಾಗಿಯೇ ಮೂಡುತ್ತದೆ. ಕ್ರಿಕೆಟ್‌ ಅಭಿಮಾನಿಗಳಂತೂ ಇಂತಹ ಗೊಂದಲವನ್ನು ಪ್ರತಿ ಬಾರಿಯ ಐಪಿಎಲ್‌ ವೇಳೆ ಎದುರಿಸುತ್ತಲೇ ಇದ್ದಾರೆ.

 ಸೌರಾಷ್ಟ್ರ ಸ್ಟಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರಿ ಡಿಮಾಂಡ್‌! ಸೌರಾಷ್ಟ್ರ ಸ್ಟಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರಿ ಡಿಮಾಂಡ್‌!

ಇನ್ನು ಬಿಸಿಸಿಐ ಯಾವುದೇ ಮುನ್ಸೂಚನೆ ನೀಡದೆ ಮಂಗಳವಾರ ಬೆಳಗ್ಗೆ ಹಠಾತ್ತಾಗಿ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಮಾರಾಟಕ್ಕೆ ಇಟ್ಟಿದೆ. ಇದನ್ನು ಹಲವರು ಅನುಮಾನದಿಂದ ಕಂಡಿದ್ದು, ಈ ಕುರಿತಾಗಿ ದನಿಯೆತ್ತಿದ್ದಾರೆ.

 RCB ಬಗ್ಗೆ ಮಾಜಿ ಮಾಲೀಕ ವಿಜಯ್‌ ಮಲ್ಯ ಹೇಳಿದ್ದೇನು? RCB ಬಗ್ಗೆ ಮಾಜಿ ಮಾಲೀಕ ವಿಜಯ್‌ ಮಲ್ಯ ಹೇಳಿದ್ದೇನು?

"ಕೆಲವೇ ಕ್ಷಣಗಳಲ್ಲಿ ಟಿಕೆಟ್‌ಗಳು ಸಂಪೂರ್ಣವಾಗಿ ಮರಾಟವಾಗಲು ಹೇಗೆ ಸಾಧ್ಯ? ಇದು ಸಂಶಯಾಸ್ಪದ. ಬಿಸಿಸಿಐ ಈ ವಿಚಾರವಾಗಿ ಫೈನಲ್‌ ಪಂದ್ಯ ವೀಕ್ಷಿಸಲು ಹಾತೊರೆಯುತ್ತಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಉತ್ತರ ನೀಡಬೇಕಿದೆ,'' ಎಂದು ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.

ಮರಾಟವಾಗುವ ಟಿಕೆಟ್‌ಗಳೆಷ್ಟು?

ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ಒಟ್ಟು 39 ಸಾವಿರ ಆಸನಗಳ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ 25 ರಿಂದ 30 ಸಾವಿರ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಆದರೆ, ಈ ಬಾರಿ ಎಷ್ಟು ಟಿಕೆಟ್‌ಗಳು ಮರಾಟಕ್ಕಿವೆ ಎಂಬ ಮಾಹಿತಿಯನ್ನು ಕೂಡ ಬಿಸಿಸಿಐ ಬಿಡುಗಡೆ ಮಾಡಿಲ್ಲ.

ಟಿಕೆಟ್‌ಗಳ ದರವೆಷ್ಟು?

ಇನ್ನು ಮೂಲಗಳ ಪ್ರಕಾರ ಈ ಬಾರಿಯ ಐಪಿಎಲ್‌ಗೆ 1000, 1500, 2000, 2500, 5000, 10000, 12500, 15000 ಮತ್ತು 22500 ಸಾವಿರ ರೂ. ದರದ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಅಂದಹಾಗೆ ಇದರಲ್ಲಿನ 1500, 2000, 2500 ಮತ್ತು 5000 ದರದ ಟಿಕೆಟ್‌ಗಳು ಸಂಪೂರ್ಣ ಸೋಲ್ಡ್‌ ಔಟ್‌ ಎನ್ನುವುದೇ ಅಚ್ಚರಿ.

ಟಿಕೆಟ್‌ಗಳು ಎಲ್ಲಿ ಹೋದವು ಎಂಬುದು ಯಕ್ಷ ಪ್ರಶ್ನೆ

ಕೆಲವೇ ದರದ ಟಿಕೆಟ್‌ಗಳು ಮಾತ್ರ ಕ್ಷಣಮಾತ್ರದಲ್ಲಿ ಮಾರಾಟ ಗೊಂಡಿವೆ. ಆದರೆ, ಗರಿಷ್ಠ ಬೆಲೆಯ ಟಿಕೆಟ್‌ಗಳು ಎಲ್ಲಿ ಹೋದವೂ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಕುರಿತಾಗಿ ಟಿಕೆಟ್‌ ಮಾರಾಟ ನಡೆಸಿದ ಈವೆಂಟ್ಸ್‌ ನಾವ್‌ ಪ್ರತಿಕ್ರಿಯೆ ನೀಡಿದ್ದು, "ಟಿಕೆಟ್ಸ್‌ ಮಾರಾಟದ ಕುರಿತಾಗಿ ನಾವು ಯಾವುದೇ ಮಾಹಿತಿ ನೀಡುವಂತಿಲ್ಲ. ಬಿಸಿಸಿಐ ನೀಡಿರುವ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಕುರಿತಾಗಿ ಬಿಸಿಸಿಐ ಬಳಿಯೇ ಮಾಹಿತಿ ಪಡೆಯಬೇಕು,'' ಎಂದು ಹೇಳಿದೆ.

ಟಿಕೆಟ್ಸ್‌ ಮಾರಟದಿಂದ ಬಿಸಿಸಿಐಗೆ ಸಿಗುವ ಲಾಭವೆಷ್ಟು?

ಐಪಿಎಲ್‌ನ ಲೀಗ್‌ ಹಂತದ ಪಂದ್ಯಗಳ ಟಿಕೆಟ್ಸ್‌ ಮಾರಟದಿಂದ ಬರುವ ಹಣವನ್ನು ಆಯಾ ಫ್ರಾಂಚೈಸಿ ತಂಡಗಳು ಹಂಚಿಕೊಳ್ಳುತ್ತವೆ. ಕೇವಲ ಪ್ಲೇ ಆಫ್ಸ್‌ ಆ ಮತ್ತು ಫೈನಲ್ ಪಂದ್ಯಕ್ಕೆ ಮಾರಾಟ ಮಾಡಲಾಗುವ ಟಿಕೆಟ್‌ಗಳ ಮೊತ್ತವನ್ನು ಬಿಸಿಸಿಐ ತನನ್ ಜೇಬಿಗಿಳಿಸುತ್ತದೆ. ಕಳೆದ ಬಾರಿಯ ಐಪಿಎಲ್‌ ಪ್ಲೇ ಆಫ್ಸ್‌ ಮತ್ತು ಫೈನಲ್‌ ಪಂದ್ಯಗಳಿಂದ ಬಿಸಿಸಿಐ ಬರೋಬ್ಬರಿ 15 ಕೋಟಿ ರೂ. ಗಳಿಸಿತ್ತು. ಈ ಬಾರಿ 20 ಕೋಟಿ ರೂ. ಮೊತ್ತವನ್ನು ಜೇಬಿಗಿಳಿಸಲು ಎದುರು ನೋಡುತ್ತಿರುವುದಾಗಿ ಬಿಸಿಸಿಐ ಈ ಮೊದಲು ತಿಳಿಸಿತ್ತು. ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡವನ್ನು 15 ಕೋಟಿ ರೂ. ಬಹುಮಾನ ಮೊತ್ತ ಸ್ವೀಕರಿಸಿದರೆ, ರನ್ನರ್ಸ್‌ಅಪ್‌ ಸ್ಥಾನ ಪಡೆಯುವ ತಂಡಕ್ಕೆ 10 ಕೋಟಿ ರೂ. ಬಹುಮಾನ ಲಭ್ಯವಾಗುತ್ತದೆ.

Story first published: Thursday, May 9, 2019, 13:25 [IST]
Other articles published on May 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X