ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2019: ಕ್ಯಾಪಿಟಲ್ಸ್‌ ಕೋಟೆಗೆ ಕನ್ನ ಹಾಕಲು ಇಂಡಿಯನ್ಸ್‌ ಸಜ್ಜು

IPL 2019 Mumbai Indians vs Delhi Capitals

ಹೊಸದಿಲ್ಲಿ, ಏಪ್ರಿಲ್‌ 18: ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಮಾಜಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡ ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿಗುರುವಾರ ಕಣಕ್ಕಿಳಿಯಲಿದೆ.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

ಪ್ರಸಕ್ತ ಲೀಗ್‌ನಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತನ್ನ ಅಭಿಯಾನ ಆರಂಭಿಸಿದ ಮುಂಬಯಿ ಇಂಡಿಯನ್ಸ್‌ ತಂಡ ಮನೆಯಂಗಣದಲ್ಲೇ 37 ರನ್‌ಗಳ ಹೀನಾಯ ಸೋಲುಂಡಿತ್ತು. ಇದೀಗ ದಿಲ್ಲಿಯ ಭದ್ರ ಕೋಟೆಯೊಳಗೆ ನುಗ್ಗಿ ಕ್ಯಾಪಿಟಲ್ಸ್‌ಗೆ ಸೋಲುಣಿಸುವ ಲೆಕ್ಕಾಚಾರ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ತಂಡದ್ದಾಗಿದೆ.

ಐಪಿಎಲ್ 2019 : ರಾಜಸ್ಥಾನ ವಿರುದ್ಧ ಪಂಜಾಬಿಗೆ ರೋಚಕ ಜಯಐಪಿಎಲ್ 2019 : ರಾಜಸ್ಥಾನ ವಿರುದ್ಧ ಪಂಜಾಬಿಗೆ ರೋಚಕ ಜಯ

ಮತ್ತೊಂದೆಡೆ ಹ್ಯಾಟ್ರಿಕ್‌ ಗೆಲುವಿನ ಲಯದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌, ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಡಿದ 8 ಪಂದ್ಯಗಳಲ್ಲಿ 5 ಜಯ ಮತ್ತು 3 ಸೋಲುಂಡಿರುವ ಕ್ಯಾಪಿಟಲ್ಸ್‌ ಪಡೆ ಕೋಚ್‌ ರಿಕಿ ಪಾಂಟಿಂಗ್‌ ಮಾರ್ಗದರ್ಶನದಲ್ಲಿ ಆಲ್‌ರೌಂಡ್‌ ಪ್ರದರ್ಶನ ಕಾಯ್ದುಕೊಂಡಿದೆ. ಮುಂಬಯಿ ತಂಡ ಕೂಡ 8 ಪಂದ್ಯಗಳನ್ನಾಡಿ 10 ಅಂಕಗಳನ್ನು ಗಳಿಸಿದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಕ್ಯಾಪಿಟಲ್ಸ್‌ ಸಂಭಾವ್ಯ 11
ಕ್ವಿಂಟನ್‌ ಡಿ'ಕಾಕ್‌, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ಕೃಣಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ, ಕೈರೊನ್‌ ಪೊಲಾರ್ಡ್‌, ಜೇಸನ್‌ ಬೆಹ್ರೆನ್‌ಡಾರ್ಫ್‌, ರಾಹುಲ್‌ ಚಹರ್‌, ಲಸಿತ್‌ ಮಾಲಿಂಗ, ಜಸ್‌ಪ್ರೀತ್‌ ಬುಮ್ರಾ.

1
45910

ಇಂಡಿಯನ್ಸ್‌ ಸಂಭಾವ್ಯ 11
ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಕಾಲಿನ್‌ ಮನ್ರೊ, ರಿಷಭ್‌ ಪಂತ್‌, ಕ್ರಿಸ್‌ ಮಾರಿಸ್‌, ಅಕ್ಷರ್‌ ಪಟೇಲ್‌, ಕೀಮೊ ಪೌಲ್‌, ಕಗಿಸೊ ರಬಾಡ, ಅಮಿತ್‌ ಮಿಶ್ರಾ, ಇಶಾಂತ್‌ ಶರ್ಮಾ.

amit mishra of delhi team

ಅಂಕಿಅಂಶ ವಿಶೇಷ
01
ಟೆಲ್ಲಿ ಕ್ಯಾಪಿಟಲ್ಸ್‌ ತಂಡದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ಇನ್ನೊಂದು ವಿಕೆಟ್‌ ಪಡೆದಲ್ಲಿ ಐಪಿಎಲ್‌ ಇತಿಹಾಸದಲ್ಲಿ 150 ವಿಕೆಟ್‌ಗಳನ್ನು ಪಡೆದ ಎರಡನೇ ಹಾಗೂ ಭಾರತದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಲಸಿತ್‌ ಮಾಲಿಂಗ (161) ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಬೌಲರ್‌.

Story first published: Thursday, April 18, 2019, 10:29 [IST]
Other articles published on Apr 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X