ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2019: 'ಮಂಕಡಿಂಗ್' ಔಟ್ ವಿವಾದ - ಮೌನ ಮುರಿದ ಜೋಸ್ ಬಟ್ಲರ್

IPL 2019: Jos Buttler reacts to R Ashwin Mankading incident

ನವದೆಹಲಿ, ಏಪ್ರಿಲ್ 4: ವಿವಾದವೇ ನಡೆಯದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದಿದ್ದು ಇರಲಿಕ್ಕಿಲ್ಲ. ಇದ್ದರೂ ಅದೂ ಒಂದೋ ಎರಡೋ ಸೀಸನ್‌ ವಿವಾದವಿಲ್ಲದೆ ಮುಕ್ತಾಯ ಕಂಡಿರಬಹುದು. ಇನ್ನುಳಿದಂತೆ ಸಣ್ಣಪುಟ್ಟ ವಿವಾದಗಳು ಐಪಿಎಲ್‌ನಲ್ಲಿ ಇದ್ದಿದ್ದೆ. ದೊಡ್ಡ ಮಟ್ಟದ ಕ್ರೀಡಾಕೂಟಗಳು, ಟೂರ್ನಮೆಂಟ್‌ಗಳು ನಡೆಯುವಾಗ ವಿವಾದ ಸಾಮಾನ್ಯವೂ ಹೌದು.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಈ ಬಾರಿ ಐಪಿಎಲ್‌ನಲ್ಲಿ 'ಮಂಕಡ್' ಔಟ್ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಮಾರ್ಚ್ 25ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್‌ XI ಪಂಜಾಬ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ಆಟಗಾರ ಜೋಸ್ ಬಟ್ಲರ್ ಅವರನ್ನು ಪಂಜಾಬ್ ನಾಯಕ ಆರ್‌ ಅಶ್ವಿನ್ 'ಮಂಕಡ್' ವಿಧಾನದಲ್ಲಿ ಔಟ್ ಮಾಡಿದ್ದರು. ಇದು ವಿವಾದಕ್ಕೆ ಗುರಿಯಾಗಿತ್ತು.

ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಜಾಸ್ ಬಟ್ಲರ್ ಈ ವಿವಾದದ ಬಗ್ಗೆ ಅನಂತರ ಪ್ರತಿಕ್ರಿಯಿಸಿರಲಿಲ್ಲ. ಆದರೆ ಈಗ ಬಟ್ಲರ್ ಮೌನ ಮುರಿದಿದ್ದಾರೆ. ಅಂದು ಥರ್ಡ್ ಅಂಪೈರ್ ಮಂಕಡಿಂಗ್ ಅನ್ನು ಔಟ್ ಎಂದು ತೀರ್ಪಿತ್ತಿದ್ದು ಅದೊಂದು ತಪ್ಪು ನಿರ್ಧಾರ ಎಂದು ಬಟ್ಲರ್ ಹೇಳಿದ್ದಾರೆ.

ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತಾ, ಇಲ್ವಾ?!ಐಪಿಎಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತಾ, ಇಲ್ವಾ?!

'ನೀವು ಒಂದು ವೇಳೆ ವಿಡಿಯೋ ಫೂಟೇಜ್ ನೋಡಿದರೆ, ಅಲ್ಲಿ ಅಂಪೈರ್ ಅವರ 'ಔಟ್' ತೀರ್ಮಾನ ತಪ್ಪು ಅನ್ನೋದು ಬಹುಶಃ ಗೊತ್ತಾಗುತ್ತೆ. ಯಾಕೆಂದರೆ ಅಶ್ವಿನ್ ಬಾಲ್ ರಿಲೀಸ್ ಮಾಡೋದನ್ನು ನಿರೀಕ್ಷಿಸಿದ್ದ ಆಕ್ಷಣ ನಾನಿನ್ನೂ ಕ್ರೀಸ್‌ನಲ್ಲೇ ಇದ್ದೆ' ಎಂದು ಬಟ್ಲರ್ ಹೇಳಿಕೊಂಡಿದ್ದಾರೆ.

'ಆ ಕ್ಷಣ ನನಗೆ ನಿಜಕ್ಕೂ ತುಂಬಾ ನಿರಾಶೆಯಾಯಿತು. ಆ ರೀತಿ ವಂಚಿಸಿ ಔಟ್ ಮಾಡೋದು ನನಗೆ ಇಷ್ಟವಾಗೋಲ್ಲ. ಟೂರ್ನಿ ಆರಂಭವಾಗುತ್ತಲೇ ಇಂಥ ಘಟನೆಯಾಗಿದ್ದು ಐಪಿಎಲ್‌ನಲ್ಲಿ ಕೆಟ್ಟ ನಿದರ್ಶನವಾಗಿ ಉಳಿಯಲಿದೆ. ಟೂರ್ನಿಯ ನಿಟ್ಟಿನಲ್ಲಿ ನೋಡಿದರೂ ಇದು ನಿರಾಶಾದಾಯಕ ಆರಂಭ' ಎಂದು ಬಟ್ಲರ್ ತನ್ನೊಳಗಿದ್ದ ಬೇಸರ ತೋರಿಕೊಂಡರು.

Story first published: Thursday, April 4, 2019, 18:37 [IST]
Other articles published on Apr 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X