ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ಅವಕಾಶ ಸಿಕ್ಕರೆ ಕನ್ನಡಿಗನ ಪಾತ್ರದಲ್ಲಿ ನಟೊಸೋಕೆ ರೆಡಿ ಅಂದ್ರು ವಿರಾಟ್..!?
IPL 2019:kohli wants to play nags role if biopic made on RCB Insider host Mr. Nags

ಆರ್‌ಸಿಬಿ ಇನ್‌ಸೈಡರ್‌: ಆರೊಂದ್ಲಾ ಆರು, ಆರ್‌ ಮೂರ್ಲಾ ಹನ್ನೆರಡು ಎಂದು ಮಗ್ಗಿ ಹೇಳಿದ ವಿರಾಟ್‌

ಬೆಂಗಳೂರು, ಮೇ 05: ಟೀಮ್‌ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಆರ್‌ಸಿಬಿ ಇನ್‌ಸೈಡರ್‌ನ ನಿರೂಪಕ ಮಿಸ್ಟರ್‌ ನ್ಯಾಗ್ಸ್‌ ಅವರ ಪಾತ್ರ ಮಾಡುವ ಬಯಕೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

 ಚೊಚ್ಚಲ ಐಪಿಎಲ್‌ ಅರ್ಧ ಶತಕ ಬಾರಿಸಿ ಹಿಸ್ಟರಿ ಬರೆದ ರಿಯಾನ್ ಪರಾಗ್! ಚೊಚ್ಚಲ ಐಪಿಎಲ್‌ ಅರ್ಧ ಶತಕ ಬಾರಿಸಿ ಹಿಸ್ಟರಿ ಬರೆದ ರಿಯಾನ್ ಪರಾಗ್!

ಆರ್‌ಸಿಬಿ ಅಭಿಮಾನಿಗಳಿಗೆ ಕ್ರಿಕೆಟ್‌ ಫೀಲ್ಡ್‌ನಿಂದ ಆಚೆಗೂ ಭರಪೂರ ಮನರಂಜನೆ ನೀಡುತ್ತಿರುವ ಆರ್‌ಸಿಬಿ ಇನ್‌ಸೈಡರ್‌ ಶೂ, ನೆಟ್ಟಿಗರ ಅದರಲ್ಲೂ ಆರ್‌ಸಿಬಿಯನ್ನರ ಅಚ್ಚುಮೆಚ್ಚಿನ ಕಾರ್ಯಕ್ರಮ.

 RCB ಗರ್ಲ್ ಟ್ರೆಂಡಿಂಗ್, ಎಲ್ಲಾ ಮ್ಯಾಚಿಗೂ ಕರೆಸಿ ಎಂದು ಕೊಹ್ಲಿಗೆ ಮನವಿ RCB ಗರ್ಲ್ ಟ್ರೆಂಡಿಂಗ್, ಎಲ್ಲಾ ಮ್ಯಾಚಿಗೂ ಕರೆಸಿ ಎಂದು ಕೊಹ್ಲಿಗೆ ಮನವಿ

ಕ್ರಿಕೆಟ್‌ ಮೈದಾನದಿಂದಾಚಗೆ ಆರ್‌ಸಿಬಿ ತಂಡದ ಆಟಗಾರರೊಡನೆ ಸಂದರ್ಶನ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಡುವ ಜನಪ್ರಿಯ ನಿರೂಪಕ ಹಾಗೂ ನಟ ದಾನಿಶ್‌ ಸೇಠ್‌, ಇನ್‌ಸೈಡರ್‌ ಕಾರ್ಯಕ್ರಮದ ಮೂಲಕ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

 ಟಿ20 ಮುಂಬೈ ಲೀಗ್: ಅರ್ಜುನ್ ತೆಂಡೂಲ್ಕರ್ ಅತ್ಯಧಿಕ ಬೆಲೆಗೆ ಮಾರಾಟ ಟಿ20 ಮುಂಬೈ ಲೀಗ್: ಅರ್ಜುನ್ ತೆಂಡೂಲ್ಕರ್ ಅತ್ಯಧಿಕ ಬೆಲೆಗೆ ಮಾರಾಟ

ಇನ್ನು ಈ ಬಾರಿ ಆರ್‌ಸಿಬಿ ಪ್ರದರ್ಶನ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿ ಗ್ರೂಪ್‌ ಹಂತದಲ್ಲೇ ತಂಡ ಸ್ಪರ್ಧೆಯಿಂದ ಹೊರಬಿದ್ದಿದೆ. ಅದರೆ ಇನ್‌ಸೈಡರ್‌ ಕಾರ್ಯಕ್ರಮ ಮಾತ್ರ ಎಂದಿನಂತೆ ಭಾರಿ ಸದ್ದುಮಾಡುತ್ತಿದ್ದು, ಕ್ರಿಕೆಟ್‌ ಪ್ರಿಯರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದೆ.

 ಕಾಲೆಳೆದ ಅಫ್ರಿದಿಗೆ ಖಾರವಾಗೇ ತಿರುಗೇಟು ನೀಡಿದ ಗೌತಮ್ ಗಂಭೀರ್! ಕಾಲೆಳೆದ ಅಫ್ರಿದಿಗೆ ಖಾರವಾಗೇ ತಿರುಗೇಟು ನೀಡಿದ ಗೌತಮ್ ಗಂಭೀರ್!

ಇನ್ನು ಇತ್ತೀಚೆಗೆ ಬೆಡ್‌ ಮೇಲೆ ನ್ಯಾಗ್ಸ್‌ ಜೊತೆಗೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಡೆಸಿರುವ ಚಿಟ್‌-ಚಾಟ್‌ ಅಂತೂ ಅಭಿಮಾನಿಗಳಿಗೆ ಮಜಾ ನೀಡುವುದಂತೂ ಖಂಡಿತ. ಆರೊಂದ್ಲಾ ಆರು ಎಂದು ಮಗ್ಗಿ ಹೇಳಿದ ಕೊಹ್ಲಿ, ನ್ಯಾಗ್ಸ್‌ ಕಂಡರೆ ಹೊಟ್ಟೆಕಿಚ್ಚು ಎಂದೂ ಒಪ್ಪಿಕೊಂಡಿದ್ದಾರೆ.

 ಹೆಟ್ಮೈರ್-ಗುರ್‌ಕೀರತ್ ಅಬ್ಬರ, ಸನ್ ರೈಸರ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್ ಹೆಟ್ಮೈರ್-ಗುರ್‌ಕೀರತ್ ಅಬ್ಬರ, ಸನ್ ರೈಸರ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್

ಇದೇ ವೇಳೆ ಒಂದು ವೇಳೆ ನ್ಯಾಗ್ಸ್‌ ಕುರಿತಾಗಿ ಸಿನಿಮಾ ನಿರ್ಮಾಣವಾದರೆ ತಾವೇ ನ್ಯಾಗ್ಸ್‌ ಪಾತ್ರದಲ್ಲಿ ನಟಿಸುವುದಾಗಿ ಹೇಳಿ, ನ್ಯಾಗ್ಸ್‌ ಅವರಂತೆ ಒಂದೆರಡು ಡೈಲಾಗ್‌ ಕೂಡ ಹೊಡೆದಿದ್ದಾರೆ. ಒಟ್ಟಾರೆ ಆರ್‌ಸಿಬಿ ಇನ್‌ಸೈಡರ್‌ನ ಈ ಎಪಿಸೋಡ್‌ ಸರ್ವರಿಗೂ ಇಷ್ಟವಾಗುವುದಂತೂ ಖಂಡಿತಾ. ಅದರ ಸಂಪೂರ್ಣ ವಿಡಿಯೊ ಇಲ್ಲಿದೆ. ಅಂದಹಾಗೆ ಇದು ಈ ಬಾರಿಯ ಆರ್‌ಸಿಬಿ ಇನ್‌ಸೈಡರ್‌ ಕಾರ್ಯಕ್ರಮದ ಕೊನೆಯ ಎಪಿಸೋಡ್‌ ಆಗಿದೆ.

Story first published: Sunday, May 5, 2019, 17:49 [IST]
Other articles published on May 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X