ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ವಿರುದ್ಧ ಪಂಜಾಬಿಗೆ 6 ವಿಕೆಟ್ ಗಳ ರೋಚಕ ಜಯ

IPL 2019, KXIP vs SRH, Punjab vs Hyderabad

ಮೊಹಾಲಿ, ಏಪ್ರಿಲ್ 08: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ ಮೂರನೇ ವಾರದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಇಂದು ಕಿಂಗ್ಸ್ ಎಲೆವನ್ ಪಂಜಾಬ್ ಸೆಣಸುತ್ತಿದೆ. ಉಭಯ ತಂಡಗಳು ಕಳೆದ ಪಂದ್ಯವನ್ನು ಸೋತಿದ್ದು, ಗೆಲುವಿನ ರುಚಿ ಕಾಣಲು ಹಂಬಲಿಸಿವೆ.

ವಾರ್ನರ್ 70ರನ್ ನೆರವಿನಿಂದ ಹೈದರಾಬಾದ್ 150/5 ಸ್ಕೋರ್ ಮಾಡಿತ್ತು, 151ರನ್ ಚೇಸ್ ಮಾಡಿದ ಪಂಜಾಬ್ ಹಲವು ಆತಂಕ ಕ್ಷಣಗಳನ್ನು ಎದುರಿಸಿತು, ಅದರೆ, ಕೆಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸಿ, ಗೆಲುವಿನ ದಡ ಮುಟ್ಟಿಸಿದರು. ಮಯಾಂಕ್ ಕೂಡಾ ಅರ್ಧಶತಕ ಬಾರಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

KL Rahul and Mayank

ಟಾಸ್ ಗೆದ್ದ ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ ಆರ್ ಅಶ್ವಿನ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

{cricket_4-2019_45898}

ಮುಜೀಬ್ ಉರ್ ರೆಹ್ಮಾನ್ ಗೆ ಜಾನಿ ಬೈರ್ಸ್ಟೋ ವಿಕೆಟ್ ನೀಡಿದ್ದು, ಹೈದರಾಬಾದ್ ಆರಂಭಿಕ ಆಘಾತ ಅನುಭವಿಸಿದೆ. ಪಂಜಾಬ್ ಪರ ಆಂಡ್ರೆ ಟೈ ಹಾಗೂ ಎಂ ಅಶ್ವಿನ್ ಇಂದಿನ ಪಂದ್ಯವಾಡುತ್ತಿಲ್ಲ.

ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಎರಡು ತಂಡಗಳು ಮೂರು ಪಂದ್ಯಗಳನ್ನಾಡಿದ್ದು, ತಲಾ 6 ಅಂಕಗಳನ್ನು ಪಡೆದಿವೆ.

ಹೈದರಾಬಾದ್ ಮಣಿಸಿದ ಪಂಜಾಬ್

ಹೈದರಾಬಾದ್ ಮಣಿಸಿದ ಪಂಜಾಬ್

ಹೈದರಾಬಾದ್ ವಿರುದ್ಧ ಪಂಜಾಬಿಗೆ 6 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ.
ರನ್ ಚೇಸಿಂಗ್ ನಲ್ಲಿ ಕೆಎಲ್ ರಾಹುಲ್ ಅರ್ಧಶತಕ 71 ರನ್ (53ಎಸೆತ, 7 ಬೌಂಡರಿ, 1ಸಿಕ್ಸರ್) ನೆರವಿಗೆ ಬಂದಿದೆ. ಮಯಾಂಕ್ ಕೂಡಾ ಅರ್ಧಶತಕ ಬಾರಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

151ರನ್ ಚೇಸ್ ಮಾಡಿದ ಪಂಜಾಬ್ 1 ಎಸೆತ ಬಾಕಿ ಇರುವಂತೆ ಜಯ ದಾಖಲಿಸಿದೆ. ಸ್ಯಾಮ್ ಕರನ್ 3 ಎಸೆತಗಳಲ್ಲಿ 5ರನ್ ಗಳಿಸಿದರು. ಮೊಹಮ್ಮದ್ ನಬಿ ಕೊನೆ ಓವರ್ ನಲ್ಲಿ 2,4,1,2,2 ಗಳಿಸಿದ ಪಂಜಾಬ್ ಜಯದ ನಗೆ ಬೀರಿತು.

ಪಂಜಾಬ್ ರನ್ ಚೇಸಿಂಗ್ ಮೊದಲ 5 ಓವರ್

ಪಂಜಾಬ್ ರನ್ ಚೇಸಿಂಗ್ ಮೊದಲ 5 ಓವರ್

* 14 ಎಸೆತಗಳಲ್ಲಿ 16ರನ್ (1 ಬೌಂಡರಿ, 1 ಸಿಕ್ಸರ್ ) ಗಳಿಸಿ ರಶೀದ್ ಖಾನ್ ಬೌಲಿಂಗ್ ನಲ್ಲಿ ದೀಪಕ್ ಹೂಡಾಗೆ ಕ್ಯಾಚಿತ್ತು ಔಟಾದ ಕ್ರಿಸ್ ಗೇಲ್
* 5 ಓವರ್ ಗಳ ನಂತರ ಪಂಜಾಬ್ 30/1 (6.00ರನ್ ಸರಾಸರಿ)
* 4ನೇ ಓವರ್ ನಲ್ಲಿ 4 ರನ್ ಮಾತ್ರ, 24/1
* 3ನೇ ಓವರ್ ನಲ್ಲಿ 9ರನ್ ಗಳಿಕೆ, ಗೇಲ್ ಸಿಕ್ಸರ್, 18/0
* 2ನೇ ಓವರ್ ನಂತರ 9/0 ಸ್ಕೋರ್

ಇಂದಿನ ಪಂದ್ಯವಾಡುತ್ತಿರುವ ಆಡುವ ಹನ್ನೊಂದು

ಸನ್ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋ, ವಿಜಯ್ ಶಂಕರ್, ಮನೀಶ್ ಪಾಂಡೆ, ದೀಪಕ್ ಹೂಡಾ, ಯೂಸುಫ್ ಪಠಾಣ್, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್,ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ.

ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮಂದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ನಾಯಕ), ಮೊಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್, ಅಂಕಿತ್ ರಜಪೂತ್

ಟಾಸ್ ಗೆದ್ದ ಅಶ್ವಿನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

SRH ಇನ್ನಿಂಗ್ಸ್ : ಮೊದಲ 5 ಓವರ್

* 1.4 ಓವರ್ ಆಗಿದ್ದಾಗ ಮುಜೀಬ್ ಉರ್ ರಹ್ಮಾನ್ ಓವರ್ ನಲ್ಲಿ ರವಿಚಂದ್ರನ್ ಆಶ್ವಿನ್ ಗೆ ಕ್ಯಾಚಿತ್ತು ಜಾನಿ ಬೈರ್ಸ್ಟೋ(1) ಔಟ್.
* 2 ಓವರ್ ಗಳ ನಂತರ ಪಂಜಾಬ್ ಸ್ಕೋರ್ 11/1(5.50 ರನ್ ಸರಾಸರಿ)
* 3ನೇ ಕ್ರಮಾಂಕದಲ್ಲಿ ಬಂದ ವಿಜಯ್ ಶಂಕರ್, ಮುಜೀಬ್ ಎಸೆತದಲ್ಲಿ 4 ರನ್
* 3 ಓವರ್ ಗಳ ನಂತರ 17/1 (5.67 ರನ್ ಸರಾಸರಿ)
* 4 ಓವರ್ ಗಳ ನಂತರ 18/1 (4.50 ರನ್ ಸರಾಸರಿಗೆ ಕುಸಿತ) ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್.
* 5 ಓವರ್ ಗಳ ನಂತರ 25/1, ಅಂಕಿತ ಓವರ್ ನಲ್ಲಿ 7 ರನ್ ಗಳಿಕೆ (5.00 ಗೆ ರನ್ ಸರಾಸರಿ ಏರಿಕೆ)

ಸ್ಪಿನ್ನರ್ ಗಳಿಗೆ ಬೆಚ್ಚುವ ಜಾನಿ ಬೈರ್ಸ್ಟೋ

ಮುಜೀಬ್ ಉರ್ ರಹ್ಮಾನ್, ರಾಹುಲ್ ಚಾಹರ್, ಪಿಯೂಷ್ ಚಾವ್ಲಾ, ಶ್ರೇಯಸ್ ಗೋಪಾಲ್, ಯಜುವೇಂದ್ರ ಚಾಹಲ್, ತೇವಾಟಿಯಾ ಎಲ್ಲಾ ಸ್ಪಿನ್ನರ್ ಗಳಿಗೆ ವಿಕೆಟ್ ಒಪ್ಪಿಸಿರುವ ಜಾನಿ ಬೈರ್ಸ್ಟೋ

SRH ಇನ್ನಿಂಗ್ಸ್ : ಮೊದಲ 10 ಓವರ್

SRH ಇನ್ನಿಂಗ್ಸ್ : ಮೊದಲ 10 ಓವರ್

* ಪವರ್ ಪ್ಲೇ ಅಂತ್ಯ 6ನೇ ಓವರ್ ನಲ್ಲಿ 2 ರನ್ ಮಾತ್ರ, ಹೈದರಾಬಾದ್ 27/1 (4.50 ರನ್ ಸರಾಸರಿ)
* ಅಶ್ವಿನ್ ಎಸೆದ ಪಂದ್ಯದಾ 7 ನೇ ಓವರ್ ನಲ್ಲಿ 4 ರನ್ ಗಳಿಕೆ, ಸ್ಕೋರ್ 31/1(4.43 ರನ್ ಸರಾಸರಿ)
* 8 ಓವರ್ ಗಳ ನಂತರ 37/1 ಸ್ಕೋರ್, ಮುಜೀಬ್ ಓವರ್ ನಲ್ಲಿ 6ರನ್ ಗಳಿಕೆ
* 9 ಓವರ್ ನಲ್ಲೂ 6 ರನ್ ಗಳಿಕೆ, ವಿಜಯ್ ಶಂಕರ್ 17(21ಎಸೆತ), ಡೇವಿಡ್ ವಾರ್ನರ್ 17(27)
* 10 ಓವರ್ ಗಳಲ್ಲಿ 50/1

SRH ಇನ್ನಿಂಗ್ಸ್ : 15 ಓವರ್ ತನಕ

* 10ನೇ ಓವರ್ ನಲ್ಲಿ 7ರನ್ ಗಳಿಕೆ, 50/1(5.00ರನ್ ಸರಾಸರಿ)
* ಅಶ್ವಿನ್ ಎಸೆತದಲ್ಲಿ ಲೋಕೇಶ್ ರಾಹುಲ್ ಗೆ ಕ್ಯಾಚಿತ್ತ ವಿಜಯ್ ಶಂಕರ್ 26(27)
* 11ನೇ ಓವರ್ ನಲ್ಲಿ ವಾರ್ನರ್, ಶಂಕರ್ ತಲಾ 4 ರನ್ ಒಟ್ಟು 11 ರನ್ , ಹೈದರಾಬಾದ್ ಸ್ಕೋರ್ 61/2 (5.55ರನ್ ಸರಾಸರಿ)
* ರನ್ ನಿಯಂತ್ರಿಸಿದ ಸ್ಯಾಮ್ ಕರನ್ 8ರನ್ 12ನೇ ಓವರ್ ಸ್ಕೋರ್ 69/2
* 13ನೇ ಓವರ್ ನಲ್ಲಿ ವಾರ್ನರ್ 4 ರನ್ ನೊಂದಿಗೆ 10ರನ್ ಗಳಿಕೆ, ನಬಿ 11(6), ವಾರ್ನರ್ 33(39), ಸ್ಕೋರ್ 79/2.
* 14ನೇ ಓವರ್ ನಲ್ಲಿ ನಬಿ ರನ್ ಔಟ್ (ಅಶ್ವಿನ್) 12 ರನ್ (7), ಓವರ್ ನಲ್ಲಿ 9ರನ್ ಗಳಿಕೆ,ಸ್ಕೋರ್ 88/3 (6.29ರನ್ ಸರಾಸರಿ)
* 15ನೇ ಓವರ್ ನಲ್ಲಿ ಕೇವಲ 4 ರನ್ನಿತ್ತ ಸ್ಯಾಮ್ ಕರನ್, ಸ್ಕೋರ್ 92/3 (6.13ರನ್ ಸರಾಸರಿ)

ವಾರ್ನರ್ ಅರ್ಧಶತಕ, ಹೈದರಾಬಾದ್ 150/5

ಡೇವಿಡ್ ವಾರ್ನರ್ 70ರನ್ ನೆರವಿನಿಂದ 20 ಓವರ್ ಗಳಲ್ಲಿ ಹೈದರಾಬಾದ್ 150/5 ಸ್ಕೋರ್ ಮಾಡಿದ್ದು, ಪಂಜಾಬ್ ತಂಡಕ್ಕೆ ಗೆಲ್ಲಲು 151 ರನ್ ಗುರಿ ನೀಡಲಾಗಿದೆ.

Story first published: Tuesday, April 9, 2019, 1:28 [IST]
Other articles published on Apr 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X