ಚೆನ್ನೈ, ಮಾರ್ಚ್ 25: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2019ನೇ ಆವೃತ್ತಿಯ ಉದ್ಘಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ಬೆಂಗಳೂರು ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಸುಲಭ ಜಯ ದಾಖಲಿಸಿದ್ದು ಗೊತ್ತಿರಬಹುದು. ಪಂದ್ಯದ ಬಳಿಕ ಚೆನ್ನೈ ತಂಡದ ನಾಯಕ ಧೋನಿ ಅವರು ತಮ್ಮ ಪುತ್ರಿ ಜೀವಾ ಜೊತೆ ಆತ್ಮೀಯ ಸಂಭಾಷಣೆಯಲ್ಲಿ ತೊಡಗಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಮುದ್ದು ಮಗಳಿಗಾಗಿ 'ಗಲ್ಲಿ ಬಾಯ್' ಸಾಂಗ್ ಹಾಡಿದ ರೋಹಿತ್: ವಿಡಿಯೋ
ಮಗಳೊಂದಿಗೆ ಧೋನಿ ಮಾತನಾಡುತ್ತಾ ಸಮಯ ಕಳೆದಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ಮಾಡಿಕೊಂದ್ದರು. ಈ ಸಮಯಕ್ಕೆ ಈ ವಿಡಿಯೋ 4.2 ಮಿಲಿಯನ್ ಬಾರಿ ವೀಕ್ಷಿಸಲಪಟ್ಟಿದೆ. ಇದೇ ವಿಡಿಯೋವಿರುವ ಪೋಸ್ಟನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದು, 4312 ಬಾರಿ ರೀಟ್ವೀಟ್, 23331 ಬಾರಿ ಲೈಕ್ ಆಗಿದೆ.
ಈ ವಿಡಿಯೋದಲ್ಲಿ ಜೀವಾ ಹಾಗೂ ಧೋನಿ 6 ಭಾಷೆಯಲ್ಲಿ ಮಾತನಾಡಿದ್ದಾರೆ. ತಮಿಳು, ಬೆಂಗಾಳಿ, ಗುಜರಾತಿ, ಭೋಜ್ಪುರಿ, ಪಂಜಾಬಿ ಹಾಗೂ ಉರ್ದು ಭಾಷೆಯಲ್ಲಿ 'ಹೇಗಿದ್ದೀಯ' ಎಂಬ ಪ್ರಶ್ನೆಗೆ ಜೀವಾ ಆಯಾ ಭಾಷೆಯಲ್ಲೇ 'ಚೆನ್ನಾಗಿದ್ದೀನಿ' ಎಂದು ಉತ್ತರಿಸಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಆಗಿದ್ದು ಎಲ್ಲೆಡೆ ಶೇರ್ ಆಗುತ್ತಿದೆ
Always a sixer with Appa! Language lessons between matches! #WhistlePodu #Yellove 🦁💛
— Chennai Super Kings (@ChennaiIPL) March 24, 2019
VC: @msdhoni pic.twitter.com/fUXqE0dUyi
ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿದರೂ ಚೆನ್ನೈ ಪಿಚ್ನಿಧಾನಗತಿಯಾಗಿದ್ದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಮಂಗಳವಾರದಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರು ಚೆನ್ನೈ ತನ್ನ ಎರಡನೇ ಪಂದ್ಯವಾಡಲಿದೆ.