ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರ ಇಂಡಿಯನ್ ಪ್ರೀಮಿಯರ್‌ ಲೀಗ್ ಅದ್ದೂರಿ ಆರಂಭೋತ್ಸವ ಇಲ್ಲ!

IPL 2019: Opening ceremony to be scrapped in favour of donation for Pulwama martyrs

ಬೆಂಗಳೂರು, ಫೆಬ್ರವರಿ 23: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆವೃತ್ತಿ ಅದ್ದೂರಿ ಆರಂಭೋತ್ಸವ ಇಲ್ಲದೆ ಚಾಲನೆಗೊಳ್ಳಲಿದೆ. ಆರಂಭೋತ್ಸವಕ್ಕೆ ಬೀಳುವ ಖರ್ಚಿನ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೀಡಲು ಬಿಸಿಸಿಐ ನಿರ್ಧರಿಸಿರುವುದು ಇದಕ್ಕೆ ಕಾರಣ.

ISSF World Cup: 10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ವಿಶ್ವದಾಖಲೆISSF World Cup: 10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ವಿಶ್ವದಾಖಲೆ

ಪ್ರತಿಬಾರಿ ಐಪಿಎಲ್ ಆರಂಭವಾಗುವಾಗಲೂ ಆರಂಭೋತ್ಸವವನ್ನು ಬಲು ಅದ್ದೂರಿಯಾಗಿ ನಡೆಸಲಾಗುತ್ತಿತ್ತು. ಉದ್ಘಾಟನಾ ಸಮಾರಂಭದ ದಿನ ಕ್ರಿಕೆಟ್, ಸಿನಿಮಾ, ಸಂಗೀತ ತಾರೆಯರಿಂದ ವರ್ಣರಂಜಿತ ಸಭಾಂಗಣದಲ್ಲಿ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾಮಾನ್ಯವಾಗಿತ್ತು. ಆದರೆ 12ನೇ ಆವೃತ್ತಿಯ ಐಪಿಎಲ್ ಟೂರ್ನಿ ಅದ್ದೂರಿ ಆರಂಭೋತ್ಸವ ಇಲ್ಲದೆ ಶುರುವಾಗಲಿದೆ.

'ಈ ಬಾರಿಯ ಐಪಿಎಲ್‌ಗೆ ಉದ್ಘಾಟನೆ ಕಾರ್ಯಕ್ರಮವಿಲ್ಲ. ಆರಂಭೋತ್ಸವಕ್ಕೆ ಬೀಳುವ ಖರ್ಚಿನ ಹಣವನ್ನು ಪುಲ್ವಾಮ ದಾಳಿಯಲ್ಲಿ ಮೃತರಾದ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ. ಕಳೆದ ಐಪಿಎಲ್ ಸೀಸನ್ ಆರಂಭೋತ್ಸವಕ್ಕೆ ಸುಮಾರು 15 ಕೋ.ರೂ.ಗಳು ಖರ್ಚಾಗಿತ್ತು.

ಆಡದೆ ಕೂತು ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸುತ್ತೀರಾ?: ಸಚಿನ್ ಪ್ರಶ್ನೆ!ಆಡದೆ ಕೂತು ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸುತ್ತೀರಾ?: ಸಚಿನ್ ಪ್ರಶ್ನೆ!

12ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 23ರಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯ ಚೆನ್ನೈಯಲ್ಲಿ ನಡೆಯಲಿದ್ದು, ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸವಾಲು ಸ್ವೀಕರಿಸಲಿವೆ.

Story first published: Saturday, February 23, 2019, 17:27 [IST]
Other articles published on Feb 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X