ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶ್ವಿನ್ 'ಮಂಕಡಿಂಗ್' ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟರ್ಸ್ ಕಂಡಂತೆ

IPL 2019: R Ashwin sparks controversy as he Mankads Jos Buttler: Twitterati call it against spirit of the game

ಮೊಹಾಲಿ, ಮಾರ್ಚ್ 25: ಐಪಿಎಲ್ ನಲ್ಲಿ ಹೊಡಿ ಬಡಿ ಆಟದ ಜೊತೆಗೆ ಸಾಕಷ್ಟು ವಿವಾದ, ಬಿಸಿ ವಾತಾವರಣಗಳು ಕಾಣ ಸಿಗುತ್ತವೆ.

ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಅವರು ಸದ್ಯದ 'ಮಂಕಡಿಂಗ್' ಮೂಲಕ ಜೋಸ್ ಬಟ್ಲರ್ ಔಟ್ ಮಾಡಿ ಎಲ್ಲರ ಕಣ್ಣಿಗೆ ಬಿದ್ದಿದ್ದಾರೆ. ಟ್ರಾಲ್ ಗೆ ಒಳಗಾಗಿದ್ದಾರೆ, ಟೀಕೆ, ಬೆಂಬಲ ಹೀಗೆ ಎಲ್ಲವೂ ಅಶ್ವಿನ್ ಸುತ್ತಾ ಸುತ್ತುತ್ತಿದೆ. ಮಂಕಂಡಿಗ್ ಮಾಡಿದ ಅಶ್ವಿನ್ ಬಗ್ಗೆ ಕ್ರಿಕೆಟ್ ವಿಶ್ಲೇಷಕರು, ಮಾಜಿ, ಹಾಲಿ ಆಟಗಾರರು ಯಾವ ರೀತಿ ಟ್ವೀಟ್ ಮಾಡಿದ್ದಾರೆ. ಇಲ್ಲಿದೆ ಒಂದು ವರದಿ

ಐಪಿಎಲ್ LIVE: ಡೆಲ್ಲಿ ಕ್ಯಾಪಿಟಲ್ ಬ್ಯಾಟಿಂಗ್, ಪೃಥ್ವಿ, ರಿಷಬ್ ಔಟ್!ಐಪಿಎಲ್ LIVE: ಡೆಲ್ಲಿ ಕ್ಯಾಪಿಟಲ್ ಬ್ಯಾಟಿಂಗ್, ಪೃಥ್ವಿ, ರಿಷಬ್ ಔಟ್!

ನಾನ್​ಸ್ಟ್ರೈಕರ್​ನಲ್ಲಿದ್ದ ಬ್ಯಾಟ್ಸ್​ಮನ್ ಬೌಲರ್ ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಟ್ಟಾಗ, ಬೌಲರ್ ಚೆಂಡನ್ನು ಎಸೆಯದೇ ಬೇಲ್ಸ್​ಅನ್ನು ಎಗರಿಸಿ ಔಟ್​ಗೆ ಅಪೀಲ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಎಂಸಿಸಿಯ ಕ್ರಿಕೆಟ್ ನಿಯಮದಲ್ಲೂ ಮಂಕಡಿಂಗ್ ಔಟ್ ಮಾನ್ಯತೆ ಪಡೆದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೂ 10 ಬಾರಿ ಮಂಕಡಿಂಗ್ ರನೌಟ್​ಗಳು ಕಂಡು ಬಂದಿದ್ದು, ಟಿ20 ಮಾದರಿಯಲ್ಲಿ ಇದು 2ನೇ ಬಾರಿ. 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಬಟ್ಲರ್​ರನ್ನು ಸಚಿತ್ರ ಸೇನನಾಯಕೆ ಮಂಕಡಿಂಗ್ ಮಾಡಿದ್ದರು.

'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?

ಅಶ್ವಿನ್ ಮಂಕಂಡಿಂಗ್ ಮಾಡಿದ್ದು ಓಕೆ ಆದರೆ, ಅಶ್ವಿನ್ ಮಾಡಿದ ರೀತಿ ಕ್ರಿಕೆಟ್ ಸ್ಪೂರ್ತಿಯನ್ನು ಹಾಳು ಮಾಡಿದೆ ಎಂದು ಅನೇಕರು ವಾದಿಸಿದ್ದಾರೆ. 69ರನ್ ಗಳಿಸಿದ್ದ ಬಟ್ಲರ್ ಔಟಾದ ಬಳಿಕ ಪೆವಿಲಿಯನ್ ಗೆ ತೆರಳುವ ತನಕ ಸಿಟ್ಟಿನಿಂದ ಬುಸುಗುಟ್ಟುತ್ತಾ, ಬ್ಯಾಟ್ ನೆಲಕ್ಕೆ ಕುಟ್ಟುತ್ತಿದ್ದರು.

ಇಯಾನ್ ಮಾರ್ಗನ್-

ಇಂಗ್ಲೆಂಡ್ ಹಾಗೂ ಮಿಡ್ಲ್ ಸೆಕ್ಸ್ ಆಟಗಾರ ಇಯಾನ್ ಮಾರ್ಗನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಯುವ ಆಟಗಾರರಿಗೆ ಕೆಟ್ಟ ಉದಾಹರಣೆಯಾಗಲಿದೆ, ನಾನು ನನ್ನನ್ನು ನಂಬಲಾಗುತ್ತಿಲ್ಲ. ಕಾಲ ಕಳೆದಂತೆ ಅಶ್ವಿನ್ ಅವರು ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಲಿದ್ದಾರೆ ಎಂದಿದ್ದಾರೆ.

ಬಟ್ಲರ್ 'ರನೌಟ್'ಅನ್ನು ಸಮರ್ಥಿಸಿಕೊಂಡ ರವಿಚಂದ್ರನ್ ಅಶ್ವಿನ್

ಸ್ಕಾಟ್ ಸ್ಟೈರಿಸ್

ಮಂಕಡಿಂಗ್ ಬಗ್ಗೆ ಐಸಿಸಿ, ಎಂಸಿಸಿ ನಿಯಮಗಳ ಪುಟವನ್ನು ತೆರೆದು ವಿವರಣೆ ನೀಡಿದ ನ್ಯೂಜಿಲೆಂಡ್ ನ ಸ್ಕಾಟ್, ಬಟ್ಲರ್ ಕ್ರೀಸ್ ನಲ್ಲಿ ಇದ್ದಿದ್ದರೆ ಆಗ ನಾಟೌಟ್ ಎಂದಿದ್ದಾರೆ.

ಕಾಮೆಂಟೆಟರ್ ಹರ್ಷ ಭೋಗ್ಲೆ

ಐಸಿಸಿ ಪ್ಯಾನೆಲ್ ನಿಂದ ಬಂದ ಅಂಪೈರ್ ಗಳೇ ಇದ್ದನ್ನು ಔಟ್ ಎಂದಿದ್ದಾರೆ. ಬೌಲರ್ ತನಗೆ ಸರಿ ಅನಿಸಿದ್ದನ್ನು ಮಾಡಿದ್ದಾರೆ. ಅಂಪೈರ್ ತಮಗೆ ಅನಿಸಿದಂತೆ ಔಟ್ ಎಂದಿದ್ದಾರೆ, ನಿಯಮ ಯಾರಿಗೆ ಬೇಕಿದೆ ಎಂದಿದ್ದಾರೆ.

ಸ್ಪಿನ್ ದಿಗ್ಗಜ ಶೇನ್ ವಾರ್ನ್

ಅಶ್ವಿನ್ ನಡೆಯಿಂದ ಬೇಸರವಾಗಿದೆ. ನಾಯಕನಾಗಿ ಇಂಥ ನಡವಳಿಕೆ ನಿರೀಕ್ಷಿಸಿರಲಿಲ್ಲ. ಐಪಿಎಲ್ ಕ್ರೀಡಾ ಸ್ಪೂರ್ತಿ ಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತದೆ. ಅಶ್ವಿನ್ ಗೆ ಬೌಲಿಂಗ್ ಮಾಡುವ ಮನಸ್ಸಿರಲಿಲ್ಲ. ಅದನ್ನು ಡೆಡ್ ಬಾಲ್ ಎನ್ನಬೇಕಿತ್ತು

ಮೈಕಲ್ ವಾಗನ್

ಇಂಗ್ಲೆಂಡಿನ ಮಾಜಿ ಆಟಗಾರ ಮೈಕಲ್ ವಾಗನ್ ಅವರು ಟ್ವೀಟ್ ಮಾಡಿ, ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡುವ ಮೂಲಕ ಅವರಿಗೆ ವಾರ್ನಿಂಗ್ ನೀಡಬೇಕಿತ್ತು. ವಾರ್ನಿಂಗ್ ನೀಡದೆ ಔಟ್ ಮಾಡಿದ್ದು ಸರಿಯಲ್ಲ, ಈ ರೀತಿ ಐಪಿಎಲ್ ನಲ್ಲಿ ಅನೇಕ ಬಾರಿ ಆಗಿವೆ.

ಅಶ್ವಿನ್ ನಡೆಗೆ ಮೊಹಮ್ಮದ್ ಕೈಫ್ ಅಚ್ಚರಿ

ಕ್ರಿಕೆಟ್ ನಲ್ಲಿ ಮಂಕಡಿಂಗ್ ಹೊಸದೇನಲ್ಲ, ಅಶ್ವಿನ್ ಅವರು ಬಟ್ಲರ್ ಅವರನ್ನು ಔಟ್ ಮಾಡುವ ಮುನ್ನ ವಾರ್ನಿಂಗ್ ನೀಡಬೇಕಿತ್ತು. ಆದರೆ, ಅಚ್ಚರಿಯ ರೀತಿಯಲ್ಲಿ ನಡೆದುಕೊಂಡರು. ಈ ಹಿಂದೆ ಕೂಡಾ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಈ ರೀತಿ ಅಶ್ವಿನ್ ಮಾಡಿದ್ದಾಗ ಸೆಹ್ವಾಗ್ ಅವರು ಅಪೀಲ್ ಹಿಂಪಡೆದಿದ್ದರು.

Story first published: Tuesday, March 26, 2019, 21:32 [IST]
Other articles published on Mar 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X