ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗ

IPL 2019 schedule: Reason behind delay in announcement revealed

ನವದೆಹಲಿ, ಫೆಬ್ರವರಿ 13: ಚುನಾವಣೆಯ ದಿನಾಂಕಗಳು ಪ್ರಕಟಗೊಂಡ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳಿಸಲಾಗುತ್ತದೆ. ಟೂರ್ನಿಯ ಎಲ್ಲಾ ಪಂದ್ಯಗಳೂ ಭಾರತದಲ್ಲೇ ನಡೆಯಲಿವೆ ಎನ್ನುವ ಮೂಲಕ ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ ಬಗೆಗಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಗಪ್ಟಿಲ್ ಅಬ್ಬರ, ಬಾಂಗ್ಲಾ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಏಕದಿನ ಸರಣಿ ಮುನ್ನಡೆಗಪ್ಟಿಲ್ ಅಬ್ಬರ, ಬಾಂಗ್ಲಾ ವಿರುದ್ಧ ನ್ಯೂಜಿಲ್ಯಾಂಡ್‌ಗೆ ಏಕದಿನ ಸರಣಿ ಮುನ್ನಡೆ

ಐಪಿಎಲ್ 12ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ ವಿಳಂಬಕ್ಕೆ ಕಾರಣವನ್ನು ತಿಳಿಸಿರುವ ಬಿಸಿಸಿಐ, ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಗಳ ದಿನಾಂಕ ಪ್ರಕಟಗೊಳ್ಳುವುದನ್ನು ಕಾಯುತ್ತಿದ್ದೇವೆ. ವಿವಿಧ ಹಂತಗಳಲ್ಲಿ ನಡೆಯುವ ಚುನಾವಣೆಯ ದಿನಾಂಕಗಳಿಗೆ ಅನುಗುಣವಾಗಿ ಪಂದ್ಯಗಳನ್ನು ನಿಗದಿಪಡಿಸುವುದು ಇಲ್ಲಿ ಮುಖ್ಯವಾಗಿದೆ ಎಂದು ಮಾಹಿತಿ ನೀಡಿದೆ.

ಮಾರ್ಚ್ 23ರಿಂದ ಐಪಿಎಲ್ 12ನೇ ಆವೃತ್ತಿ ಆರಂಭಗೊಳ್ಳುವುದರಲ್ಲಿದೆ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರಿಂದ ಫೈನಲ್ ಪಂದ್ಯ ಚೆನ್ನೈಯಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಮೈಸೂರಿನಲ್ಲಿ ಇಂದಿನಿಂದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಮೈಸೂರಿನಲ್ಲಿ ಇಂದಿನಿಂದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ

ಚುನಾವಣಾ ದಿನಾಂಕಗಳು ಮತ್ತು ಐಪಿಎಲ್ ವೇಳಾಪಟ್ಟಿ ಮುಖಾಮುಖಿಯಾಗುವುದರಿಂದ ಈ ಬಾರಿಯ ಐಪಿಎಲ್ ವೇಳಾಪಟ್ಟಿ ಹಲವು ಬಗೆಯ ಊಹಾಪೋಹಗಳಿಗೆ ತುತ್ತಾಗಿತ್ತು. ಈ ಅದ್ದೂರಿ ಟೂರ್ನಿ ಯುಎಇಯಲ್ಲಿ ನಡೆಯುತ್ತದೆ ಎಂದು ಆರಂಭದಲ್ಲಿ ಹೇಳಾಗುತ್ತಿತ್ತು.

ಸ್ಟಾರ್ ಸ್ಪೋರ್ಟ್ಸ್‌ ಜಾಹೀರಾತಿಗೆ ಹೇಡನ್ ಕೆಂಗಣ್ಣು, ವೀರೂಗೂ ಛಾಟಿಸ್ಟಾರ್ ಸ್ಪೋರ್ಟ್ಸ್‌ ಜಾಹೀರಾತಿಗೆ ಹೇಡನ್ ಕೆಂಗಣ್ಣು, ವೀರೂಗೂ ಛಾಟಿ

ಟೂರ್ನಿಯ ಕೆಲ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂಬ ವಿಚಾರಗಳೂ ಕೇಳಿ ಬಂದಿದ್ದವು. ಆದರೆ ಈಗ ಲಭಿಸಿರುವ ಮಾಹಿತಿ ಪ್ರಕಾರ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಐಪಿಎಲ್ 12 ಆವೃತ್ತಿಯ ಬಗ್ಗೆ ಖಾತರಿ ಮಾಹಿತಿ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

Story first published: Wednesday, February 13, 2019, 17:04 [IST]
Other articles published on Feb 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X