ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಭೀತಿಯೊಡ್ಡುವಂತಿದೆ ಧೋನಿ ಅಂಕಿ-ಅಂಶಗಳು!

IPL 2019: These MS Dhoni stats pose big threat for Virat Kohli’s RCB

ಬೆಂಗಳೂರು, ಮಾರ್ಚ್ 20: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!

ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಮತ್ತು ಧೋನಿ ಇಬ್ಬರೂ ಆಕರ್ಷಣೀಯ ಆಟಗಾರರೆ. ಆದರೆ ಈ ಹಣದ-ಶ್ರೀಮಂತ ಟೂರ್ನಿಯಲ್ಲಿ ಇಬ್ಬರೂ ನಾಯಕರು ವಿಭಿನ್ನ ರೀತಿಯ ಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ. ಧೋನಿ ನಾಯಕತ್ವದ ಸಿಎಸ್‌ಕೆ ಐಪಿಎಲ್ ಟ್ರೋಫಿಯನ್ನು ಕೆಲವಾರು ಬಾರಿ ಗೆದ್ದಿದ್ದರೆ, ಕೊಹ್ಲಿ ನಾಯಕತ್ವದ ಆರ್‌ಸಿಬಿ ಇನ್ನಷ್ಟೇ ಗೆಲ್ಲಬೇಕಿದೆ. ಈ ಬಾರಿ ಆರ್‌ಸಿಬಿ ಗೆಲ್ಲುವ ಸಾಧ್ಯತೆಯೂ ಇದೆ.

ಐಪಿಎಲ್ ಅಭ್ಯಾಸ ಪಂದ್ಯ : ಸನ್ ರೈಸರ್ಸ್ ಪರ ವಾರ್ನರ್ ಭರ್ಜರಿ ಬ್ಯಾಟಿಂಗ್ಐಪಿಎಲ್ ಅಭ್ಯಾಸ ಪಂದ್ಯ : ಸನ್ ರೈಸರ್ಸ್ ಪರ ವಾರ್ನರ್ ಭರ್ಜರಿ ಬ್ಯಾಟಿಂಗ್

ಆದರೂ 12ನೇ ಆವೃತ್ತಿಯ ಈ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುವ ಸಿಎಸ್‌ಕೆ (ಧೋನಿ)-ಆರ್‌ಸಿಬಿ (ಕೊಹ್ಲಿ) ಅಂಕಿ-ಅಂಶಗಳತ್ತ ಇಣುಕಿ ನೋಡಿದಾಗ, ಧೋನಿಯ ಸಿಎಸ್‌ಕೆ ಒಂದಿಷ್ಟು ವಿಚಾರಗಳಿಗೆ ಎತ್ತರಕ್ಕೆ ನಿಲ್ಲುತ್ತಿದೆ. ಧೋನಿ ನಾಯಕತ್ವದ ಸಿಎಸ್‌ಕೆ ಯಾಕೆ ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಉದ್ಘಾಟನಾ ಪಂದ್ಯದಲ್ಲಿ ಸವಾಲಾಗಲಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಅಂಶಗಳಿವೆ.

94 ಗೆಲುವುಗಳು

94 ಗೆಲುವುಗಳು

ಎಂಎಸ್ ಧೋನಿ ಒಟ್ಟು 175 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ದ್ವಿತೀಯ ಸ್ಥಾನದಲ್ಲಿ ನಿಲ್ಲುವ ಅತ್ಯಧಿಕ ಸಂಖ್ಯೆಯ ಪಂದ್ಯಗಳು. ಈ ಯಾದಿಯಲ್ಲಿ ಧೋನಿ ತಂಡದವರೇ ಆದ ಸುರೇಶ್ ರೈನಾ ಮೊದಲ ಸ್ಥಾನದಲ್ಲಿದ್ದಾರೆ. ಆಡಿರುವ 175ರಲ್ಲಿ 159 ಪಂದ್ಯಗಳಲ್ಲಿ ಧೋನಿ ನಾಯಕರಾಗಿ ತಂಡ ಮುನ್ನಡೆಸಿದ್ದರು. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಒಟ್ಟು 94 ಪಂದ್ಯಗಳನ್ನು ಗೆದ್ದಿವೆ. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಒಬ್ಬ ನಾಯಕನಡಿಯಲ್ಲಿ ಗೆದ್ದ ಅತೀ ಹೆಚ್ಚಿನ ಸಂಖ್ಯೆಯ ಪಂದ್ಯಗಳು!

ಸ್ಮಿತ್ ಮುಂದು

ಸ್ಮಿತ್ ಮುಂದು

ಆದರೂ ಗೆದ್ದ ಪಂದ್ಯಗಳ ರೇಟಿಂಗ್ ಗಮನಿಸಿದರೆ ಇದರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮುಂದಿದ್ದಾರೆ. ಒಟ್ಟು 69 ಪಂದ್ಯಗಳನ್ನಾಡಿರುವ ಸ್ಮಿತ್ 66.6. ವಿನ್ ರೇಟ್‌ ಹೊಂದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಧೋನಿ 59.49 ವಿನ್‌ ರೇಟ್ ಗಳಿಸಿದ್ದಾರೆ. ಸೂಪರ್‌ ಕಿಂಗ್ಸ್ ಮೂರು ಬಾರಿ ಐಪಿಎಲ್ ಚಾಂಪಿಯನ್‌ ಆಗಿ ಗುರುತಿಸಿಕೊಂಡಿದ್ದೂ ವಿನ್‌ ರೇಟ್ ಸಾಧನೆಗೆ ಕಾರಣ.

ಮುಂಚೂಣಿ ನಾಯಕ

ಮುಂಚೂಣಿ ನಾಯಕ

ಒಂದೇ ಫ್ರಾಂಚೈಸಿಯಲ್ಲಿದ್ದು ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ನಾಯಕರಲ್ಲಿ ಧೋನಿ ಕೂಡ ಒಬ್ಬರು. ಈ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಧೋನಿಯ ಸಿಎಸ್‌ಕೆ ಕ್ರಮವಾಗಿ 2010, 2011& 2018ರಲ್ಲಿ ಪ್ರಶಸ್ತಿ ಜಯಿಸಿತ್ತು. ಇನ್ನು ಗೌತಮ್ ಗಂಭೀರ್ ಅವರಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ 2012 & 2014, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಕ್ರಮವಾಗಿ 2013, 2015 & 2017ರಲ್ಲಿ ಚಾಂಪಿಯನ್ ಎನಿಸಿತ್ತು.

ದ್ವಿತೀಯ ಅತ್ಯಧಿಕ ರನ್

ದ್ವಿತೀಯ ಅತ್ಯಧಿಕ ರನ್

ಸಿಎಸ್‌ಕೆ ಪರ ಅತ್ಯಧಿಕ ರನ್ ಗಳಿಸಿದವರಲ್ಲಿ ಧೋನಿ ದ್ವಿತೀಯ ಸ್ಥಾನಿಗ. ಸುರೇಶ್ ರೈನಾ ಮೊದಲ ಸ್ಥಾನದಲ್ಲಿದ್ದಾರೆ. ಎಲ್ಲಾ ಫ್ರಾಂಚೈಸಿಗಳನ್ನು ಪರಿಗಣಿಸಿದರೆ ಅತ್ಯಧಿಕ ರನ್‌ಗಾಗಿ ಧೋನಿ 7ನೇ ಸ್ಥಾನ ಪಡೆಯುತ್ತಾರೆ. ಅತೀ ಹೆಚ್ಚು ಸಿಕ್ಸ್‌ ಸರದಾರರಲ್ಲಿ ಎಬಿ ಡಿ ವಿಲಿಯರ್ಸ್ (292 ಸಿಕ್ಸ್‌), ಕ್ರಿಸ್‌ ಗೇಲ್ (187) ಬಳಿಕ ಧೋನಿ (186) ಮೂರನೇ ಸ್ಥಾನದಲ್ಲಿದ್ದಾರೆ.

Story first published: Wednesday, March 20, 2019, 17:50 [IST]
Other articles published on Mar 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X