ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: 'ಮಹಿಳೆಯರ ಟಿ20 ಚಾಲೆಂಜ್' ಸಮಯದಲ್ಲಿ ಬದಲಾವಣೆ

IPL 2019: Timings Womens T20 Challenge changed

ನವದೆಹಲಿ, ಏಪ್ರಿಲ್ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಂತದ್ದೇ ರೀತಿಯಲ್ಲಿ ಮಹಿಳೆಯರ ಟಿ20 ಕ್ರಿಕೆಟ್‌ಗೂ ಬೆಂಬಲಿಸುವ ಪರಿಕಲ್ಪನೆಯಲ್ಲಿ ನಡೆಸಲು ಉದ್ದೇಶಿಸಿರುವ ಮಹಿಳಾ ಟಿ20 ಚಾಲೆಂಜ್ ಪಂದ್ಯಗಳ ಸಮಯದಲ್ಲಿ ಸಣ್ಣ ಬದಲಾವಣೆಯಾಗಿದೆ. ಫೈನಲ್‌ ಸೇರಿ ಒಟ್ಟು ನಾಲ್ಕು ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿರುವ ಈ ಪಂದ್ಯಗಳು ಮೇ 6ರಿಂದ ಆರಂಭಗೊಳ್ಳಲಿವೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿರುವ ಸೂಪರ್‌ನೋವಾಸ್‌, ಸ್ಮೃತಿ ಮಂಧಾನ ಮುಂದಾಳತ್ವದಲ್ಲಿರುವ ಟ್ರಯಲ್ ಬ್ಲೇಸರ್ಸ್ ಮತ್ತು ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡಗಳ ನಡುವೆ ಟಿ20 ಕಾದಾಟಗಳು ನಡೆಯಲಿವೆ. ಅಂತಿಮ ಪಂದ್ಯ ಮೇ 11ರಂದು ನಡೆಯಲಿದೆ.

ಆರಂಭದಲ್ಲಿ ಮಹಿಳಾ ಟಿ20ಯ ನಾಲ್ಕೂ ಪಂದ್ಯಗಳನ್ನು 7.30 pmಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮೇ 8ರ ಮಹಿಳಾ ಕ್ರಿಕೆಟ್ 2ನೇ ಪಂದ್ಯದ ವೇಳೆ ಪುರುಷರ ಐಪಿಎಲ್ ಪಂದ್ಯದ ಸಮಯವೂ ಮುಖಾಮುಖಿಯಾಗುವುದರಲ್ಲಿತ್ತು. ಇದಕ್ಕಾಗಿ ಎರಡನೇ ಪಂದ್ಯದ ಸಮಯವನ್ನು 3.30 pmಗೆ ಬದಲಾಯಿಸಿಕೊಳ್ಳಲಾಗಿದೆ.

ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ

ಮಹಿಳಾ ಟಿ20 ಚಾಲೆಂಜ್‌ ವೇಳಾಪಟ್ಟಿ
1ನೇ ಪಂದ್ಯ: ಮೇ 6, 7:30 pmಗೆ, ಸೂಪರ್‌ನೋವಾಸ್ vs ಟ್ರಯಲ್ ಬ್ಲೇಸರ್ಸ್, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
2ನೇ ಪಂದ್ಯ: ಮೇ 8, 3:30 pmಗೆ, ಟ್ರಯಲ್ ಬ್ಲೇಸರ್ಸ್ vs ವೆಲಾಸಿಟಿ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
3ನೇ ಪಂದ್ಯ: ಮೇ 9, 7:30 pmಗೆ, ಸೂಪರ್‌ನೋವಾಸ್ vs ವೆಲಾಸಿಟಿ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.
4ನೇ ಪಂದ್ಯ: ಮೇ 11, 7:30 pmಗೆ, ಮೊದಲ ಸ್ಥಾನಿ ಮತ್ತು ದ್ವಿತೀಯ ಸ್ಥಾನಿ ತಂಡಗಳ ನಡುವೆ, ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ.

Story first published: Monday, April 29, 2019, 17:13 [IST]
Other articles published on Apr 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X