ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಇನ್ನೊಂದೇ ಶತಕ ಬಾರಿಸಿದರೆ ಗೇಲ್ ಐಪಿಎಲ್ ದಾಖಲೆ ಸರಿಸಮ!

ನಿನ್ನೆ RCB ಗೆಲ್ಲೋಕೆ ಇವರೇ ಕಾರಣ..? | Oneindia Kannada
IPL 2019: Virat Kohli scores historic ton against Kolkata Knight Riders

ಕೋಲ್ಕತ್ತಾ, ಏಪ್ರಿಲ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ತಾನ ವಿರಾಟ್ ಕೊಹ್ಲಿ ಕೋಲ್ಕತ್ತಾದಲ್ಲಿ ಶುಕ್ರವಾರ (ಏಪ್ರಿಲ್ 19) ನಡೆದ ಐಪಿಎಲ್ ಪಂದ್ಯದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಶತಕ ಚಚ್ಚಿದ ಕೊಹ್ಲಿ ಹಲವಾರು ದಾಖಲೆಗಳಿಗೆ ಕಾರಣರಾಗಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಐಪಿಎಲ್ 35ನೇ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಕೊಹ್ಲಿ 58 ಎಸೆತಗಳಿಗೆ ಭರ್ತಿ 100 ರನ್ ಬಾರಿಸಿದರು. ಇದು ಕೊಹ್ಲಿ ದಾಖಲಿಸಿದ ಐಪಿಎಲ್ ಐದನೇ ಶತಕ. ಕೊಹ್ಲಿ ಇನ್ನೊಂದೇ ಶತಕ ಬಾರಿಸಿದರೂ ಐಪಿಎಲ್‌ನಲ್ಲಿ ಅತ್ಯಧಿಕ ಶತಕದ ದಾಖಲೆ (6 ಶತಕ) ಹೊಂದಿರುವ ಗೇಲ್ ಸಾಧನೆ ಸರಿಸಮಗೊಳ್ಳಲಿದೆ.

ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ!ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ!

ಐದನೇ ಶತಕದೊಂದಿಗೆ ರನ್‌ ಮೆಷೀನ್ ಕೊಹ್ಲಿಯಿಂದಾದ ಗಮನಾರ್ಹ ಸಾಧನೆಗಳ ಕೆಲ ಮಾಹಿತಿಗಳು ಇಲ್ಲಿವೆ.

2016ರ ಬಳಿಕದ ಮೊದಲ ಶತಕ

2016ರ ಬಳಿಕದ ಮೊದಲ ಶತಕ

ವಿರಾಟ್ ಕೊಹ್ಲಿ ಇದಕ್ಕೂ ಮೊದಲು (ಅಂದರೆ 4ನೇ) ಶತಕ ಬಾರಿಸಿದ್ದು 2016ರ ಐಪಿಎಲ್‌ನಲ್ಲಿ. ಅದಾಗಿ ಕೊಹ್ಲಿ ಶತಕ ಬಾರಿಸಿದ್ದು ಈಗಲೆ. ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿದ್ದರ ಫಲವಾಗಿ 2016ರಲ್ಲಿ ಆರ್‌ಸಿಬಿ ಐಪಿಎಲ್‌ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ 8 ರನ್ ಗೆಲುವನ್ನಾಚರಿಸಿತ್ತು.

ಭರ್ಜರಿ ಆರ್ಧಶತಕದಾಟ

ಭರ್ಜರಿ ಆರ್ಧಶತಕದಾಟ

2016ರಲ್ಲಿ ಶತಕ ಬಾರಿಸಿದ ಬಳಿಕ 2017 ಮತ್ತು 2018ರಲ್ಲಿ ಕೊಹ್ಲಿ ಶತಕ ದಾಖಲಿಸಿಲ್ಲ. ಆದರೆ ಅರ್ಧಶತಕ ಸಿಡಿಸಿದ್ದರು. 2018ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 92 ರನ್ (62 ಎ), ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 70 ರನ್ (40 ಎ), ಕೆಕೆಆರ್ ವಿರುದ್ಧ ಅಜೇಯ 68 ರನ್ (44), 2019ರಲ್ಲಿ ಕೆಕೆಆರ್ ವಿರುದ್ಧ 84 ರನ್ (49) ಬಾರಿಸಿದ್ದರು.

ಬೆಂಗಳೂರಿಗೆ 2ನೇ ಜಯ

ಬೆಂಗಳೂರಿಗೆ 2ನೇ ಜಯ

ಐಪಿಎಲ್ 2019ರ ಸೀಸನ್‌ನಲ್ಲಿ ಸಾಲು ಸಾಲು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಹ್ಲಿ ಶತಕ ಬಾರಿಸಿದ ಈ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ 213 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಕೆಕೆಆರ್ 203 ರನ್ ಪೇರಿಸಿ 10 ರನ್‌ಗಳಿಂದ ಶರಣಾಗಿತ್ತು.

ಸತತ 300+ ರನ್‌

ಸತತ 300+ ರನ್‌

ಶುಕ್ರವಾರದ (ಏ.19ರ) ಪಂದ್ಯದಲ್ಲಿ 9 ಬೌಂಡರಿ, 4 ಸಿಕ್ಸ್‌ ಸೇರಿ 100 ರನ್ ಬಾರಿಸಿದ್ದ ಕೊಹ್ಲಿ ಐಪಿಎಲ್‌ನ ಸತತ 10 ಸೀಸನ್‌ಗಳಲ್ಲಿ ತಲಾ 300+ ರನ್ ಸಾಧನೆಯನ್ನೂ ಪೂರೈಸಿಕೊಂಡರು. ಅಂದರೆ 2009ಕ್ಕೂ ಹಿಂದೆ ಕೊಹ್ಲಿ 300ಕ್ಕೂ ಕಡಿಮೆ ರನ್ ಬಾರಿಸಿದ್ದರು. 2008ರ ಐಪಿಎಲ್‌ನಲ್ಲಿ ಕೊಹ್ಲಿ ಬರೀ 165 ರನ್ ಮತ್ತು 2009ರಲ್ಲಿ 246 ರನ್ ಬಾರಿಸಿದ್ದನ್ನು ದಾಖಲೆಗಳು ಸಾಕ್ಷಿ ಹೇಳುತ್ತಿವೆ.

Story first published: Saturday, April 20, 2019, 0:49 [IST]
Other articles published on Apr 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X