ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ipl 2020: 5 Special Batting Records Of Ipl History

ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನಿಧಾನಕ್ಕೆ ಕ್ರಿಕೆಟ್ ಜ್ವರ ಕಾವೇರಲು ಆರಂಭಿಸಿದೆ. ಕಳೆದ ಕೆಲ ತಿಂಗಳಿನಿಂದ ಕ್ರಿಕೆಟ್ ಇಲ್ಲದೆ ಬೇಸತ್ತಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನು ಕೆಲವೇ ದಿನಗಳು ಕಾದರೆ ಸಾಕು. ಕ್ರಿಕೆಟ್ ಹಬ್ಬವೇ ಆರಂಭವಾಗಿ ಬಿಡುತ್ತದೆ.

ಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತುಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತು

ಐಪಿಎಲ್ ಆರಂಭವಾದರೆ ನಿತ್ಯವೂ ಒಂದಲ್ಲಾ ಒಂದು ವಿಶೇಷ ದಾಖಲೆಗಳು, ಅಂಕಿಅಂಶಗಳು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಲೇ ಇರುತ್ತದೆ. ಹೊಡಿ ಬಡಿ ಆಟದ ವೇಳೆ ಆಟಗಾರರ ರನ್, ಸಿಕ್ಸ್, ವಿಕೆಟ್, ಬೌಂಡರಿ ಎಲ್ಲವೂ ದಾಖಲೆಯ ಪುಟದಲ್ಲಿ ಅಚ್ಚಾಗುತ್ತಾ ಹೋಗುತ್ತದೆ. ಐಪಿಎಲ್ ಇತಿಹಾಸದಲ್ಲಿ ಇಂತಾ ಸಾಕಷ್ಟು ದಾಖಲೆಗಳು ಗಮನಸೆಳೆಯುತ್ತಿವೆ ಅಂತಾ ಕೆಲ ಪ್ರಮುಖ ಐದು ಬ್ಯಾಟಿಂಗ್ ದಾಖಲೆಗಳು ನಿಮಗಾಗಿ ಈ ವರದಿಯಲ್ಲಿದೆ. ಐಪಿಎಲ್ ಆರಂಭಕ್ಕೂ ಮುನ್ನ ಈ ಮಾಹಿತಿಗಳನ್ನೊಮ್ಮೆ ಸಂಪೂರ್ಣವಾಗಿ ಓದಿಬಿಡಿ

ಐಪಿಎಲ್ ಇತಿಹಾಸದ ವೇಗದ ಶತಕ

ಐಪಿಎಲ್ ಇತಿಹಾಸದ ವೇಗದ ಶತಕ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಆರ್‌ಸಿಬಿ ತಂಡದ ಪರವಾಗಿ ಗೇಲ್ 2013 ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಈ ದಾಖಲೆಯನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಗೇಲ್ ಕೇವಲ 30 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಗೇಲ್ ಭರ್ಜರಿ 175 ರನ್ ಸಿಡಿಸಿದ್ದರು.

ಐಪಿಎಲ್‌ನಲ್ಲಿ ಅತ್ಯಧಿಕ ರನ್

ಐಪಿಎಲ್‌ನಲ್ಲಿ ಅತ್ಯಧಿಕ ರನ್

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲೇ ಇದೆ. ವಿರಾಟ್ ಕೊಹ್ಲಿ ಕಳೆದ 12 ಆವೃತ್ತಿಯಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದು ಒಟ್ಟಾರೆಯಾಗಿ 5412 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಸುರೇಶ್ ರೈನಾ 5368 ರನ್ ಗಳಿಸಿದ್ದಾರೆ. ನಂತರ ರೋಹಿತ್ ಶರ್ಮಾ 4898 ರನ್‌ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಅಧಿಕ ಸಿಕ್ಸರ್ ಸಿಡಿಸಿದ ಆಟಗಾರ

ಅಧಿಕ ಸಿಕ್ಸರ್ ಸಿಡಿಸಿದ ಆಟಗಾರ

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಖ್ಯಾತಿ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 326 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಆರ್‌ಸಿಬಿ ತಂಡದ ಪರವಾಗಿ ಸಿಡಿಸಿದ್ದಾರೆ ಗೇಲ್. ಸದ್ಯ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರವಾಗಿ ಗೇಲ್ ಕಣಕ್ಕಿಳಿಯುತ್ತಿದ್ದಾರೆ. ಈ ಪಟ್ಟಿಯಲ್ಲಿ 212 ಸಿಕ್ಸರ್ ಸಿಡಿಸಿರುವ ಎಬಿಡಿ 2ನೇ ಸ್ಥಾನವನ್ನು ಹೊಂದಿದ್ದು ಧೋನಿ 209 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ತಲಾ 194 ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅತ್ಯಂತ ವೇಗದ ಅರ್ಧ ಶತಕ

ಅತ್ಯಂತ ವೇಗದ ಅರ್ಧ ಶತಕ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧ ಶತಕ ಗಳಿಸಿದ ದಾಖಲೆ ಕನ್ನಡಿಗ ಕೆಎಲ್ ರಾಹುಲ್ ಹೆಸರಿನಲ್ಲಿದೆ. 2018ರ ಐಪಿಎಲ್ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಡೆಲ್ಲಿ ಡೇರ್ ಡೆವಿಲ್ ವಿರುದ್ಧ ಈ ಸಾಧನೆಯನ್ನು ಮಾಡಿ ಮಿಂಚಿದ್ದಾರೆ. 50 ರನ್ ಗಳಿಸಲು ಕೆಎಲ್ ರಾಹುಲ್ ಕೇವಲ 14 ಎಸೆತಗಳನ್ನಷ್ಟೇ ಎದುರಿಸಿದ್ದರು. ಕಿಂಗ್ಸ್ XI ಪಂಜಾಬ್ ತಂಡದ ಪರ ರಾಹುಲ್ ಈ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಆಟಗಾರ

ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಆಟಗಾರ

ಐಪಿಎಲ್‌ನಲ್ಲಿ ಅತಿ ಹೆಚ್ಚು ಸ್ಟ್ರೇಕ್ ರೇಟ್ ಹೊಂದಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದವರು ವೆಸ್ಟ್ ಇಂಡೀಸ್ ಕ್ರಿಕೆಟಿಗ ಆಂಡ್ರೆ ರಸೆಲ್. 64 ಪಂದ್ಯಗಳನ್ನಾಡಿರುವ ರಸೆಲ್ ಭರ್ಜರಿ 186.41ರಷ್ಟು ಸ್ಟ್ರೇಕ್ ರೇಟ್ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಸುನೀಲ್ ನರೈನ್ ಇದ್ದು ಅವರ ಸ್ಟ್ರೈಕ್ ರೇಟ್ 165.92ರಷ್ಟಿದೆ.

Story first published: Saturday, August 8, 2020, 13:52 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X