ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ತನಗೂ ವಿಶೇಷ ಸಂಬಂಧವಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರಿಕೊಂಡಿರುವ ಆಸ್ಟ್ರೇಲಿಯಾದ ಲಿಮಿಟೆಡ್ ಓವರ್‌ಗಳ ಕ್ರಿಕೆಟ್‌ನ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿಕೊಂಡಿರುವುದು ಒಂದು ಅದ್ಭುತ ಅನುಭವ. ಇಂಥ ಶ್ರೇಷ್ಠ ಫ್ರಾಂಚೈಸಿಗೆ ಸೇರಿಕೊಂಡಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಫಿಂಚ್ ಹೇಳಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

2020ರ ಐಪಿಎಲ್ ಆವೃತ್ತಿಗಾಗಿ ನಡೆದ ಆಟಗಾರರ ಹರಾಜಿನ ವೇಳೆ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಅವರನ್ನು ಆರ್‌ಸಿಬಿ 4.4 ಕೋ.ರೂ.ಗೆ ಖರೀದಿಸಿತ್ತು. ಆವತ್ತಿನಿಂದ ಇವತ್ತಿನವರೆಗೆ ಆರ್‌ಸಿಬಿಯಲ್ಲಿನ ತನ್ನ ಅನುಭವಗಳ ಬಗ್ಗೆ ಫಿಂಚ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ

ಎಲ್ಲದಕ್ಕಿಂತ ಮಿಗಿಲಾಗಿ ಬೆಂಗಳೂರೆಂದರೆ ತನಗೇಕೆ ವಿಶೇಷ ಪ್ರೀತಿ ಅನ್ನೋದಕ್ಕೆ ಫಿಂಚ್ ಸ್ವಾರಸ್ಯಕರ ಕಾರಣ ಕೊಟ್ಟಿದ್ದಾರೆ.

ಆರ್‌ಸಿಬಿ ಜೊತೆಗಿನ ಸಂವಹನ ಅದ್ಭುತ

ಆರ್‌ಸಿಬಿ ಜೊತೆಗಿನ ಸಂವಹನ ಅದ್ಭುತ

ವರ್ಚುಯಲ್ (ಅಂತರ್ಜಾಲ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆ್ಯರನ್ ಫಿಂಚ್, 'ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳಿಗೂ ಅದರದ್ದೇ ಆದ ಛಾಪಿದೆ. ಹರಾಜು ನಡೆದಾಗಿನಿಂದಲೂ ಆರ್‌ಸಿಬಿ ನನ್ನ ಜೊತೆ ಅದ್ಭುತವಾಗಿ ಸಂವಹನ ನಡೆಸುತ್ತಿದೆ. ಎಲ್ಲಾ ವಿಚಾರಗಳನ್ನು ಅಪ್‌ಡೇಟ್ ಮಾಡುತ್ತಿದೆ,' ಎಂದಿದ್ದಾರೆ.

ಗ್ರೂಪಿನ ಸಂಸ್ಕೃತಿ ಅತ್ಯುತ್ತಮ

ಗ್ರೂಪಿನ ಸಂಸ್ಕೃತಿ ಅತ್ಯುತ್ತಮ

'ರಾಯಲ್ ಚಾಲೆಂಜರ್ಸ್ ಬೆಂಗಳೂರು ಗ್ರೂಪಿನ ಸಂಸ್ಕೃತಿಯೂ ಅತ್ಯುತ್ತಮವಾಗಿದೆ. ಇಂಥ ಅದ್ಭುತ ಫ್ರಾಂಚೈಸಿಯ ಭಾಗವಾಗಿರೋದಕ್ಕೆ ನನಗಂತೂ ತುಂಬಾ ಖುಷಿಯಾಗಿದೆ. ಈ ಅವಕಾಶಕ್ಕಾಗಿ ನಾನು ಆಭಾರಿಯಾಗಿದ್ದೇನೆ,' ಎಂದು ಫಿಂಚ್ ಹೇಳಿಕೊಂಡಿದ್ದಾರೆ.

ಸಿಮನ್-ಮೈಕ್ ತಂಡದ ಶಕ್ತಿ

ಸಿಮನ್-ಮೈಕ್ ತಂಡದ ಶಕ್ತಿ

ಮಾತು ಮುಂದುವರೆಸಿದ ಫಿಂಚ್, 'ಸಿಮನ್ ಕಟಿಚ್ ಮತ್ತು ಮೈಕ್ ಹೆಸನ್ (ಇಬ್ಬರೂ ತಂಡದ ಕೋಚ್‌ಗಳು) ಇಬ್ಬರೂ ಶಾಂತ ಸ್ವರೂಪಿಗಳು. ಎಲ್ಲಾ ಸನ್ನಿವೇಶಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸುವುದು ಅವರ ದೊಡ್ಡ ಶಕ್ತಿ. ಪ್ರಮುಖ ನಿರ್ಧಾರ ತಾಳುವಾಗ ಅಲ್ಲಿ ಭಾವನೆಗಳು ಅಡ್ಡಿಯಾಗಲು ಅವರು ಬಿಡುವುದಿಲ್ಲ. ಪ್ರತಿಯೊಬ್ಬರೂ ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಾರೆ,' ಎಂದು ವಿವರಿಸಿದರು.

ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿಗೆ ಕಾರಣ

ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿಗೆ ಕಾರಣ

ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಮೂಡಲು ಕಾರಣವೇನೆಂದು ಫಿಂಚ್ ಹೇಳಿಕೊಂಡಿದ್ದಾರೆ. 'ಬೆಂಗಳೂರಿನಲ್ಲಿ ಸಮಯ ಕಳೆಯುವುದನ್ನು ನಾನು ಇಷ್ಟಪಡುತ್ತೇನೆ, ಯಾಕೆಂದರೆ ಇದು ನನ್ನ ನೆಚ್ಚಿನ ನಗರ. ನನ್ನ ಹೆಂಡತಿಗೆ ನಾನು ಪ್ರಪೋಸ್ ಮಾಡಿದ್ದು ಇಲ್ಲೇ. ಹೀಗಾಗಿ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಆಡಲಾಗುತ್ತಿಲ್ಲ ಎಂದು ನಿರಾಸೆಯಾಗಿದೆ,' ಎಂದು ಫಿಂಚ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, September 24, 2020, 13:15 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X