ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಕ್ರಿಸ್ ಗೇಲ್ ಇರುವ ಟಿ20 ಎಲೈಟ್ ಲಿಸ್ಟ್‌ಗೆ ಸೇರಿಕೊಂಡ ಎಬಿ ಡಿವಿಲಿಯರ್ಸ್

IPL 2020: AB de Villiers becomes 8th batsman to score 9000 T20 runs

ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಪಡೆ ನೀರಸ ಪ್ರದರ್ಶನ ನೀಡಿ ಸುಲಭ ಸವಾಲನ್ನು ಹೈದರಾಬಾದ್ ಮುಂದಿಟ್ಟಿದೆ. ನಾಯಕ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಆರ್‌ಸಿಬಿಯ ಯಾವುದೇ ಬ್ಯಾಟ್ಸ್‌ಮನ್ ಕೂಡ ಹೈದರಾಬಾದ್ ಬೌಲಿಂಗ್ ದಾಳಿಯ ಮುಂದೆ ಮಂಕಾದರು. ಹಾಗಿದ್ದರೂ ಎಬಿ ಡಿವಿಲಿಯರ್ಸ್ ಇಂದಿನ ಪಂದ್ಯದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಎಬಿ ಡಿವಿಲಿಯರ್ಸ್ 9000 ರನ್ ಗಳಿಸಿದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರ ಎಂಬ ದಾಖಲೆಗೆ ಎಬಿಡಿವಿಲಿಯರ್ಸ್ ಪಾತ್ರರಾಗಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ರನ್ ಗಳಿಸಿದ ವೇಳೆ ಈ ದಾಖಲೆಗೆ ಎಬಿ ಡಿವಿಲಿಯರ್ಸ್ ಪಾತ್ರರಾದರು.

ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್

ವಿಶ್ವದಲ್ಲಿ 8ನೇ ಕ್ರಿಕೆಟಿಗ

ವಿಶ್ವದಲ್ಲಿ 8ನೇ ಕ್ರಿಕೆಟಿಗ

ಒಟ್ಟಾರೆಯಾಗಿ ಈ ಸಾಧನೆಯನ್ನು ಮಾಡಿದ ವಿಶ್ವದ 8ನೇ ಕ್ರಿಕೆಟಿಗ ಎಂಬ ಸಾಧನೆಗೆ ಎಬಿಡಿ ಒಳಗಾಗಿದ್ದಾರೆ. 13572 ರನ್ ಗಳಿಸಿರುವ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಈ ಸಾಧನೆಯನ್ನು ಕಿರಾನ್ ಪೊಲಾರ್ಡ್, ಶೋಯೆಬ್ ಮಲಿಕ್, ಬ್ರೆಂಡನ್ ಮೆಕ್ಕಲಮ್, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ಹಾಗೂ ಆರೋನ್ ಫಿಂಚ್ ಮಾಡಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿ ಎಬಿಡಿ

ಉತ್ತಮ ಫಾರ್ಮ್‌ನಲ್ಲಿ ಎಬಿಡಿ

ಐಪಿಎಲ್ 2020ಯಲ್ಲಿ ಎಬಿ ಡಿವಿಲಿಯರ್ಸ್ 13 ಪಂದ್ಯಗಳನ್ನು ಆಡಿದ್ದು 171.21ರ ಸ್ಟ್ರೈಕ್ ರೇಟ್‌ನಲ್ಲಿ 338 ರನ್ ಸಿಡಿಸಿದ್ದಾರೆ. 26 ಬೌಂಡರಿ ಹಾಗೂ 20 ಸಿಕ್ಸರ್‌ಗಳು ಡಿವಿಲಿಯರ್ಸ್ ಬ್ಯಾಟ್‌ನಿಂದ ಸಿಡಿದಿದೆ. ನಾಲ್ಕು ಅರ್ಧ ಶತಕಗಳನ್ನು ಈ ಆವೃತ್ತಿಯಲ್ಲಿ ಎಬಿ ದಾಖಲಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ?

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ?

ಎಬಿ ಡಿವಿಲಿಯರ್ಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದಾರೆ. ಆದರೆ ಲೀಗ್‌ ಕ್ರಿಕೆಟ್‌ನಲ್ಲಿ ಸಕ್ರೀಯವಾಗಿದ್ದು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಿವೃತ್ತಿಯನ್ನು ವಾಪಾಸ್ ಪಡೆದು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Story first published: Sunday, November 1, 2020, 0:09 [IST]
Other articles published on Nov 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X