ಆತ ತನಗೆ ಹೋಲಿಕೆಯಿರುವ ಬ್ಯಾಟ್ಸ್‌ಮನ್: ಡಿವಿಲಿಯರ್ಸ್ ಹೇಳಿದ ಆ ಆರ್‌ಸಿಬಿ ಆಟಗಾರ ಯಾರು?

ಎಬಿ ಡಿವಿಲಿಯರ್ಸ್ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ರಿಕೆಟಿಗ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಬಹುತೇಕ ಎಲ್ಲಾ ಲೀಗ್ ಟೂರ್ನಿಗಳಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇಂತಾ ಸೂಪರ್ ಸ್ಟಾರ್ ಆಟಗಾರ ಎಬಿ ಡಿವಿಲಿಯರಸ್‌ ಕಳೆದ ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ. ತಂಡದ ಅವಿಭಾಜ್ಯ ಅಂಗವಾಗಿರುವ ಎಬಿ ಡಿವಿಲಿಯರ್ಸ್ ನಾಯಕ ವಿರಾಟ್ ಕೊಹ್ಲಿಯ ಪ್ರಮುಖ ಅಸ್ತ್ರವಾಗಿದ್ದಾರೆ. ಆರ್‌ಸಿಬಿ ಪರವಾಗಿಯೂ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ.

ಜಿಯೋ ಧನ್ ಧನಾ ಧನ್: ಉಚಿತವಾಗಿ ಐಪಿಎಲ್‌ ಲೈವ್ ನೋಡಿ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ತನ್ನ ಆಟಕ್ಕೆ ಹೋಲಿಕೆಯಿರುವ ಇನ್ನೋರ್ವ ಆಟಗಾರನನ್ನು ಹೆಸರಿಸಿದ್ದಾರೆ. ಆರ್‌ಸಿಬಿ ತಂಡದಲ್ಲೇ ಇರುವ ಆ ಆಟಗಾರ ಈ ಬಾರಿ ತಂಡದಲ್ಲಿ ಪ್ರಮುಖ ಪಾತ್ರವಹಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಆ ಆಟಗಾರ ಯಾರು ಮುಂದೆ ಓದಿ..

2011ರಿಂದ ಆರ್‌ಸಿಬಿಯಲ್ಲಿ ಎಬಿಡಿ

2011ರಿಂದ ಆರ್‌ಸಿಬಿಯಲ್ಲಿ ಎಬಿಡಿ

ಆರ್‌ಸಿಬಿ ತಂಡದಲ್ಲಿ ಎಬಿ ಡಿವಿಲಿಯರ್ಸ್ 2011ರ ಆವೃತ್ತಿಯಿಂದ ಪ್ರಮುಖ ಭಾಗವಾಗಿದ್ದಾರೆ. ಎದುರಾಳಿಯನ್ನು ನಡುಗಿಸುವಂತಾ ಸ್ಪೋಟಕ ಆಟವನ್ನು ಪ್ರದರ್ಶಿಸುವ ಎಬಿಡಿವಿಲಿಯರ್ಸ್ ಆರ್‌ಸಿಬಿ ಗೆ ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ತಂಡದಲ್ಲಿ ದಿಗ್ಗಜ ಆಟಗಾರನೆನಿಸಿಕೊಂಡಿದ್ದಾರೆ.

ತನ್ನ ಹೋಲಿಕೆಯಿರುವ ಆಟಗಾರನನ್ನು ಹೆಸರಿಸಿದ ಎಬಿಡಿ

ತನ್ನ ಹೋಲಿಕೆಯಿರುವ ಆಟಗಾರನನ್ನು ಹೆಸರಿಸಿದ ಎಬಿಡಿ

36ರ ಹರೆಯದ ಅನುಭವಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದ ಯುವ ಆಟಗಾರನ ಆಟದ ಶೈಲಿಯಲ್ಲಿ ತನಗೆ ಸಾಕಷ್ಟು ಹೋಲಿಕೆಯಿದೆ ಎಂದು ಹೇಳಿದ್ದಾರೆ. ಆತನ ಆಟ ತನ್ನ ಕ್ರಿಕೆಟ್ ಆರಂಭದ ದಿನಗಳಲ್ಲಿ ಇದ್ದ ಆಟದ ಶೈಲಿಯಲ್ಲೇ ಇದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ತನ್ನ ಹೋಲಿಕೆಯಿರುವ ಆಟಗಾರನನ್ನು ಹೆಸರಿಸಿದ ಎಬಿಡಿ

ತನ್ನ ಹೋಲಿಕೆಯಿರುವ ಆಟಗಾರನನ್ನು ಹೆಸರಿಸಿದ ಎಬಿಡಿ

36ರ ಹರೆಯದ ಅನುಭವಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದ ಯುವ ಆಟಗಾರನ ಆಟದ ಶೈಲಿಯಲ್ಲಿ ತನಗೆ ಸಾಕಷ್ಟು ಹೋಲಿಕೆಯಿದೆ ಎಂದು ಹೇಳಿದ್ದಾರೆ. ಆತನ ಆಟ ತನ್ನ ಕ್ರಿಕೆಟ್ ಆರಂಭದ ದಿನಗಳಲ್ಲಿ ಇದ್ದ ಆಟದ ಶೈಲಿಯಲ್ಲೇ ಇದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಯಾರು ಆ ಯುವ ಆಟಗಾರ

ಯಾರು ಆ ಯುವ ಆಟಗಾರ

ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ತನ್ನ ಆಟದ ಜೊತೆಗೆ ಹೋಲಿಕೆ ಮಾಡಿದ ಕ್ರಿಕೆಟಿಗ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಈ ಬಾರಿ ಆರ್‌ಸಿಬಿ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿರುವ ಜೋಶ್ ಫಿಲಿಪ್ಪೆ ಬಗ್ಗೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದಲ್ಲಿ ಡಿವಿಲಿಯರ್ಸ್ ಕಣಕ್ಕಿಳಿದಿದ್ದರು.

ಜೋಶ್ ಆಟ ನೋಡಲು ಉತ್ಸುಕ

ಜೋಶ್ ಆಟ ನೋಡಲು ಉತ್ಸುಕ

"ಆರ್‌ಸಿಬಿ ತಂಡದಲ್ಲಿ ಈ ಬಾರಿ ಅತ್ಯುತ್ತಮ ಆಟಗಾರರಿದ್ದಾರೆ, ಆದರೆ ನಾನು ಜೋಶ್ ಫಿಲಿಪ್ಪೆ ಆಟವನ್ನು ನೋಡಲು ಕಾತುರನಾಗಿದ್ದೇನೆ. ಆತನ ಆಟದಲ್ಲಿ ನನ್ನ ಕ್ರಕೆಟ್ ಆರಂಭದ ದಿನಗಳಲ್ಲಿದ್ದ ಸಾಕಷ್ಟು ಸಾಮ್ಯತೆಗಳನ್ನು ನಾನು ಕಂಡಿದ್ದೇನೆ. ಸಿಡ್ನಿ ಸಿಕ್ಸರ್ ಪರವಾಗಿ ಆಡಿದ್ದಾಗ ಆತನ ಬ್ಯಾಟಿಂಗ್ ಕಂಡಿದ್ದೇನೆ. ಗಿಲ್‌ಕ್ರಿಸ್ಟ್ ಕೂಡ ಆತನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು ಎಂದು ಕೇಳಿದ್ದೇನೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, September 16, 2020, 13:14 [IST]
Other articles published on Sep 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X