ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಡೆತ್ ಓವರ್‌ನತ್ತ ಚಿತ್ತ ನೆಟ್ಟ ಆರ್‌ಸಿಬಿ ಸ್ಪಿನ್ನರ್ ಆ್ಯಡಂ ಜಂಪಾ

Ipl 2020: Adam Zampa Looking To Explore Opportunity To Bowl During Death Overs

ಆರ್‌ಸಿಬಿ ಈ ಬಾರಿ ತನ್ನ ಹಿಂದಿನ ಕೆಟ್ಟ ದಾಖಲೆಯನ್ನು ಅಳಿಸಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲೇ ಬೇಕೆಂದು ಪಣತೊಟ್ಟಿದೆ. ಅದಕ್ಕಾಗಿ ಬೌಲಿಂಗ್ ವಿಭಾಗದತ್ತ ಹೆಚ್ಚಿನ ದೃಷ್ಠಿ ನೆಟ್ಟಿದೆ. ಅದರಲ್ಲೂ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಕೈಕೊಡುತ್ತಿರುವುದು ಡೆತ್ ಓವರ್‌ಗಳು. ಹೀಗಾಗಿ ಕೊನೆಯ ಹಂತದಲ್ಲಿ ಎದುರಾಳಿಯನ್ನು ಬೌಲಿಂಗ್ ಮೂಲಕ ನಿಯಂತ್ರಣ ಮಾಡಲು ರಣತಂತ್ರಗಳನ್ನು ಹೆಣೆಯುತ್ತಿದೆ ಆರ್‌ಸಿಬಿ.

ಇನ್ನು ಆರ್‌ಸಿಬಿ ತಂಡದಲ್ಲಿ ಅಂತಿಮ ಹಂತದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿರುವ ಆ್ಯಡಂ ಜಂಪಾ ತಾನೂ ಕೂಡ ಡೆತ್ ಓವರ್‌ಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು ತಂಡಕ್ಕೆ ನೆರವಾಗಲು ಬಯಸುತ್ತೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಆ್ಯಡಂ ಜಂಪಾ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಕೇನ್ ದಂಪತಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು ಕೇನ್ ಬಯಸಿದ ಕಾರಣ ಆ ಅವಕಾಶವನ್ನು ಆರ್‌ಸಿಬಿ ಸ್ಪಿನ್ ಬೌಲರ್‌ಗೆ ನೀಡಿದೆ.

ಆರ್‌ಸಿಬಿ ತಂಡದಲ್ಲಿ ಚಾಹಲ್ ಜೊತೆಗೆ ಬೌಲಿಂಗ್ ಮಾಡವ ಉತ್ತಮ ಅವಕಾಶ ನನಗೆ ದೊರೆತಿದೆ. ತಂಡದಲ್ಲಿನ ಅವಕಾಶವನ್ನು ಗಮನಿಸಿದರೆ ಅಂತಿಮ ಹಂತದಲ್ಲಿ ಹೆಲ ಓವರ್‌ಗಳನ್ನು ಮಾಡುವ ಅವಕಾಶ ನನಗೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ. ಇನ್ನೋರ್ವ ಲೆಗ್ ಸ್ಪಿನ್ನರ್ ಜೊತೆಗೆ ಬೌಲಿಂಗ್ ಮಾಡಲು ನಿಜಕ್ಕೂ ನಾನು ಆನಂದಪಡುತ್ತೇನೆ. ಚಾಹಲ್ ಜೊತೆಗೆ ಸಿಕ್ಕ ಉತ್ತಮ ಅವಕಾಶವಿದು ಎಂದು ಜಂಪಾ ಪ್ರತಿಕ್ರಿಯಿಸಿದ್ದಾರೆ.

ನಾವಿಬ್ರು ಕೂಡ ಸಮಾನ ಗುಣಲಕ್ಷಣಗಳನ್ನು ಹೊಂದಿದ್ದೇವೆ. ಆದರೆ ಇಬ್ಬರೂ ಕೂಡ ಪರಸ್ಪರರಿಂದ ಸಾಕಷ್ಟು ಕಲಿತುಕೊಳ್ಳಲು ಅವಕಾಶವಿದೆ ಎಂದು ಆ್ಯಡಂ ಜಂಪಾ ಹೇಳಿದ್ದಾರೆ. ಜಂಪಾ ಸೇರ್ಪಡೆಯಿಂದ ಆರ್‌ಸಿಬಿ ಸ್ಪಿನ್ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠಗೊಂಡಿದೆ. ಚಾಹಲ್ ಜೊತೆಗೆ ವಾಶೀಂಗ್ಟನ್ ಸುಂದರ್, ಮೊಯಿನ್ ಅಲಿ, ಪವನ್ ನೇಗಿ ಹಾಗೂ ಶಹ್ಬಾಜ್ ಅಹ್ಮದ್ ಸ್ಪಿನ್ನರ್‌ಗಳಾಗಿ ತಂಡದಲ್ಲಿದ್ದಾರೆ.

Story first published: Tuesday, September 15, 2020, 9:45 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X