ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಗರ್ಕರ್ ಹೆಸರಿಸಿದ ಐಪಿಎಲ್ ಶ್ರೇಷ್ಠ ತಂಡದಲ್ಲಿ ಆರೆಂಜ್ ಕ್ಯಾಪ್ ಪಡೆದ ರಾಹುಲ್‌ಗೆ ಸ್ಥಾನವಿಲ್ಲ!

IPL 2020: Ajit Agarkar names his best XI of the season without KL Rahul

ಐಪಿಎಲ್ 2020 ಆವೃತ್ತಿ ಮುಕ್ತಾಯ ಕಂಡರೂ ಈ ಟೂರ್ನಿಯ ಗುಂಗಿನಿಂದ ಇನ್ನೂ ಅಭಿಮಾನಿಗಳು ಹೊರಬಂದಿಲ್ಲ. ಹರವಾರು ರೋಚಕ ಪಂದ್ಯಗಳು ಈ ಬಾಋಇಯ ಐಪಿಎಲ್‌ನಲ್ಲಿ ಅಭಿಮಾನಿಗಳನ್ನು ಮನರಂಜಿಸಿದೆ. ಈ ಮಧ್ಯೆ ಮಾಜಿ ಕ್ರಿಕೆಟಿಗರು ತಮ್ಮ ಪ್ರಕಾರ ಶ್ರೇಷ್ಠ ಐಪಿಎಲ್ ಆಟಗಾರರ ತಂಡಗಳನ್ನು ಪ್ರಕಟಿಸುತ್ತಿದ್ದಾರೆ. ಮುಂಬೈ ಮೂಲಕ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಕೂಡ ಐಪಿಎಲ್‌ನ ಶ್ರೇಷ್ಠ ತಂಡ ಎಂದು ತಮ್ಮದೊಂದು ತಂಡವನ್ನು ಪ್ರಕಟಿಸಿದ್ದಾರೆ.

ಆದರೆ ಅಜಿತ್ ಅಗರ್ಕರ್ ಪ್ರಕಟಿಸಿದ ಈ ತಂಡದಲ್ಲಿ ಪ್ರಮುಖ ಆಟಗಾರನನ್ನೇ ಕೂಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೆಎಲ್ ರಾಹುಲ್. ಆದರೆ ಪಂಜಾಬ್ ತಂಡದ ನಾಯಕನನ್ನೇ ಅಗರ್ಕರ್ ತಮ್ಮ ತಂಡದಲ್ಲಿ ಸೇರಿಸಿಕೊಂಡಿಲ್ಲ.

ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್

ಕೆಎಲ್ ರಾಹುಲ್ ಬದಲಿಗೆ ಅಗರ್ಕರ್ ಆರಂಭಿಕನಾಗಿ ಡೇವಿಡ್ ವಾರ್ನರ್ ಅವರನ್ನು ಸೇರಿಸಿಕೊಂಡಿದ್ದಾರೆ. ಇನ್ನೋರ್ವ ಆರಂಭಿಕನಾಗಿ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಿದ್ದಾರೆ ಅಜಿತ್ ಅಗರ್ಕರ್. ಮೂರನೇ ಕ್ರಮಾಂಕದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ 2ನೇ ಅತಿ ಹೆಚ್ಚು ರನ್ ಗಳಿಸಿದ ಯುವ ಕ್ರಿಕೆಟಿಗ ಆಟಗಾರ ಇಶಾನ್ ಕಿಶನ್‌ ಅವರನ್ನು ಸೇರಿಸಿಕೊಂಡಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಿದ್ದಾರೆ. ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಮಾರ್ಕಸ್ ಸ್ಟೋಯ್ನಿಸ್, ಬೌಲಿಂಗ್ ವಿಭಾಗದಲ್ಲಿ ವೇಗಿಗಳಾಗಿ ಕಗಿಸೋ ರಬಡಾ, ಜಸ್ಪ್ರೀತ್ ಬೂಮ್ರಾ ಇದ್ದರೆ ಸ್ಪಿನ್ನರ್‌ಗಳಾಗಿ ಯುಜುವೇಂದ್ರ ಚಾಹಲ್ ಹಾಗೂ ವರುಣ್ ಚಕ್ರವರ್ತಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ತಮಾಷೆಯ ಪೋಸ್ಟ್‌ನಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡ ಶ್ರೇಯಸ್ತಮಾಷೆಯ ಪೋಸ್ಟ್‌ನಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡ ಶ್ರೇಯಸ್

ಅಜಿತ್ ಅಗರ್ಕರ್ ಐಪಿಎಲ್ 11: ಡೇವಿಡ್ ವಾರ್ನರ್, ಶಿಖರ್ ಧವನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್, ಕಗಿಸೊ ರಬಡಾ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ.

Story first published: Sunday, November 15, 2020, 10:53 [IST]
Other articles published on Nov 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X