ಐಪಿಎಲ್ 2020: ಇವರಲ್ಲಿ ಯಾರ ಪಾಲಾಗಲಿದೆ ಈ ಬಾರಿಯ ಟೈಟಲ್ ಪ್ರಾಯೋಜಕತ್ವ

ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಬಿಸಿಸಿಐ ಹೊಸದೊಂದು ಸವಾಲಿಗೆ ಸಿಲುಕಿದೆ. ಈ ಬಾರಿಯ ಟೈಟಲ್ ಫ್ರಾಂಚೈಸಿಯಿಂದ ವಿವೋ ಕಿತ್ತೊಗೆಯಬೇಕೆಂಬ ಒತ್ತಡಕ್ಕೆ ಮಣಿದು ವಿವೋ ಐಪಿಎಲ್ 2020ಯಿಂದ ಹೊರಬಂದಿದೆ. ಹೀಗಾಗಿ ಹೊಸ ಶೀರ್ಷಿಕೆ ಪ್ರಾಯೋಜಕರಿಗಾಗಿ ಹುಡುಕಾಟ ನಡೆಯುತ್ತಿದೆ.

ಮಾರುಕಟ್ಟೆಯ ತಜ್ಞರ ಪ್ರಕಾರ ಈ ಬಾರಿಯ ಪ್ರಾಯೋಜಕತ್ವದಲ್ಲಿ ಈ-ಕಾಮರ್ಸ್ ಅಥವಾ ಈ ಲರ್ನಿಂಗ್ ಕಂಪನಿಗಳು ತೆಕ್ಕೆಗೆ ಹಾಕಿಕೊಳ್ಳಲು ಪೈಪೋಟಿಗೆ ಇಳಿದಿವೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ಚಿತ್ರಣ ಲಭ್ಯವಾಗಬೇಕಾಗಿದೆ. ಹೀಗಾಗಿ ಇದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಅಮೆಜಾನ್, ಅನಕಾಡೆಮಿ ಮತ್ತು ಮೈ ಸರ್ಕಲ್ 11 ನಂತಹವುಗಳು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆಯುವ ಮುಂಚೂಣಿ ಕಂಪನಿಗಳಾಗಿ ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ. ವಿವೋ ಪ್ರಾಯೋಜಕತ್ವ ಅಮಾನತಾಗಿರುವದರಿಂದ ನಷ್ಟಕ್ಕೊಳಗಾಗಿರುವ 440 ಕೋಟಿ ರೂಪಾಯಿಗೆ ಉತ್ತಮ ವ್ಯವಹಾರ ದೊರೆಯುವ ಭರವಸೆಯಲ್ಲಿದೆ.

ನ್ಯೂಸ್18 ವರದಿಯ ಪ್ರಕಾರ ವಿವೋ ಕಂಪನಿಯ ಪ್ರಾಯೋಜಕತ್ವದ ಒಪ್ಪಂದದಲ್ಲಿ ಹೊಂದಿದ್ದ 1/3ರಷ್ಟು ವ್ಯವಹಾರ ನಡೆದರೂ ಬಿಸಿಸಿಐ ಸಂತೋಷಗೊಳ್ಳಲಿದೆ ಎನ್ನಲಾಗಿದೆ. ಬೈಜುಸ್ ಮತ್ತು ಅನಾಕಾಡೆಮಿಯ ಹೆಸರುಗಳು ಸಂಭಾವ್ಯ ಬಿಡ್ಡರ್‌ಗಳಾಗಿ ಹೊರಹೊಮ್ಮಿವೆ ಎಂದು ವರದಿಯಾಗಿದೆ. ಆದರೆ ಡ್ರೀಮ್ 11 ಮತ್ತು ಮೈ ಸರ್ಕಲ್ 11 ನಂತಹ ಫ್ಯಾಂಟಸಿ ಕ್ರೀಡಾ ವೇದಿಕೆಗಳು ಸಹ ಕಣದಲ್ಲಿವೆ.

ಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತು

ದೀಪಾವಳಿ ಸಮಯವಾಗಿರುವ ಕಾರಣ ಈ ಅಮೆಜಾನ್ ಈ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಲು ಉತ್ಸುಕವಾಗಿದೆಯೆಂದು ಹೇಳಲಾಗುತ್ತಿದೆ. ದೀಪಾವಳಿಗೆ ಎರಡು ತಿಂಗಳು ಮುನ್ನ ಆರಂಭವಾಗುವ ಈ ಬಹುಕೋಟಿ ಟೂರ್ನಿಯಿಂದ ಮಾರುಕಟ್ಟೆಯಲ್ಲಿ ಅಮೆಜಾನ್ ಸಂಜಲನ ಮೂಡಿಸಲು ಸಾಧ್ಯವಾಗಹುದೆಂಬ ಲೆಕ್ಕಾಚಾರಗಳಿವೆ. ಆದರೆ ಅಂತಿಮ ಹಂತದಲ್ಲಿ ಭಾರತ ಬೃಹತ್ ಕಂಪಿನಿಯಾಗಿರುವ ಜಿಯೋ ಈ ಸ್ಪರ್ಧಾ ಕಣಕ್ಕಿಳಿದು ಡಾರ್ಕ್ ಹಾರ್ಸ್ ಆಗಿ ಹೊರಹೊಮ್ಮುವ ಸಾಧ್ಯತೆಗಳ ಬಗ್ಗೆಯೂ ವಿಶ್ಲೇಷಣೆಗಳು ಈ ಹಂತದಲ್ಲಿ ನಡೆಯುತ್ತಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, August 7, 2020, 14:08 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X