ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕ್ರಿಸ್ ಗೇಲ್ ಮಹತ್ವದ ಜವಾಬ್ಧಾರಿ ನಿರ್ವಹಿಸಲು ಕೋಚ್ ಕುಂಬ್ಳೆ ಒತ್ತಾಯ

Ipl 2020: Anil Kumble Wants Chris Gayle As Mentar For Kings Xi Punjab

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಹುದ್ದೆಯ ಜವಾಬ್ಧಾರಿಯನ್ನು ಅನಿಲ್ ಕುಂಬ್ಳೆ ವಹಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ನಾಯಕತ್ವವಿರುವ ಕಿಂಗ್ಸ್ ತಂಡದ ಮತ್ತೊಂದು ಹೈಲೈಟ್ ಎಂದರೆ ಅದು ಕ್ರಿಸ್ ಗೇಲ್. ಐಪಿಎಲ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದು ಮಿಂಚಿರುವ ಗೇಲ್ ಕಿಂಗ್ಸ್ ತಂಡದಲ್ಲಿ ಸ್ಪೋಟಕ ಆರಂಭಿಕನ ಹೊರತಾಗಿ ಮತ್ತೊಂದು ಜವಾಬ್ಧಾರಿಯನ್ನು ವಹಿಸಿಕೊಳ್ಳಲು ಕೋಚ್ ಅನಿಲ್ ಕುಂಬ್ಳೆ ಒತ್ತಾಯಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ದಿಗ್ಗಜ ಎನಿಸಿಕೊಂಡಿರುವ ಕ್ರಿಸ್ ಗೇಲ್ ಐಪಿಎಲ್ ಮಾತ್ರವಲ್ಲದೆ ಎಲ್ಲಾ ಲೀಗ್ ಹಾಗೂ ರಾಷ್ಟ್ರೀಯ ತಂಡದಲ್ಲೂ ದಾಖಲೆಗಳನ್ನು ಬರೆದಿದ್ದಾರೆ. ಹೀಗಾಗಿ ಇಂತಾ ಅನುಭವಿ ಆಟಗಾರನ ಉಪಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೋಚ್ ಅನಿಲ್ ಕುಂಬ್ಳೆ ಬಯಸಿದ್ದಾರೆ.

ಫಿಂಚ್-ಮಾರ್ಷ್ ಸಾಹಸ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವುಫಿಂಚ್-ಮಾರ್ಷ್ ಸಾಹಸ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವು

ಹಾಗಾದರೆ ಕೋಚ್ ಅನಿಲ್ ಕುಂಬ್ಳೆ ಕ್ರಿಸ್ ಗೇಲ್ ಅವರನ್ನು ಯಾವ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರೆ. ಕ್ರಿಸ್ ಗೇಲ್‌ಗೆ ಹೆಚ್ಚುವರಿಯಾಗಿ ದೊರೆಯಬಹುದಾಗಿರುವ ಆ ಪಾತ್ರ ಯಾವುದು? ಮುಂದೆ ಓದಿ..

ಯುವ ಆಟಗಾರರೇ ಹೆಚ್ಚಾಗಿರುವ ತಂಡ ಕಿಂಗ್ಸ್

ಯುವ ಆಟಗಾರರೇ ಹೆಚ್ಚಾಗಿರುವ ತಂಡ ಕಿಂಗ್ಸ್

ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿ ಕೂಡ ಯುವ ಆಟಗಾರರೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಇಂತಾ ಸನ್ನಿವೇಶದಲ್ಲಿ ತಂಡಕ್ಕೆ ಹಿರಿಯ ಆಟಗಾರರ ಅನುಭವಗಳು ಬಹಳ ಮುಖ್ಯವೆನಿಸುತ್ತದೆ. ಹೊಸ ಆಟಗಾರರಿಗೆ ವಿಶ್ವಮಟ್ಟದ ಆಟಗಾರರನ್ನು ಎದುರಿಸಲು ಸಹಾಯ ಮಾಡಲು ಅನುಭವಿಗಳಿಂದ ಸಾಧ್ಯವಿದೆ. ಇದನ್ನು ಅನಿಲ್ ಕುಂಬ್ಳೆ ಕ್ರಿಸ್ ಗೇಲ್ ಅವರಿಂದ ನಿರೀಕ್ಷಿಸುತ್ತಿದ್ದಾರೆ.

"ಮೆಂಟರ್ ಆಗಿ ನೋಡಲು ಬಯಸುತ್ತೇನೆ"

"ಕ್ರಿಸ್ ಆಟಗಾರನಾಗಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಅದರ ಜೊತೆಗೆ ಅವರ ನಾಯಕತ್ವ, ಅವರ ಅನುಭವ ಯುವಕರಿಗೆ ದೊಡ್ಡ ಅಸ್ತ್ರವಾಗಿದೆ. ಕ್ರಿಸ್ ಗೇಲ್ ಅವರನ್ನು ಬ್ಯಾಟ್ಸ್‌ಮನ್ ಆಗಿ ಮಾತ್ರ ನಾವು ನೋಡುತ್ತಿಲ್ಲ. ಯುವ ಆಟಗಾರರ ಬೆಳವಣಿಗೆಗೆ ಅವರ ನಾಯಕತ್ವ ಗುಣದ ಪಾತ್ರ ಮಹತ್ವ ವಹಿಸುತ್ತದೆ. ಅವರು ಮಾರ್ಗದರ್ಶಕನ ಪಾತ್ರದಲ್ಲಿ ಸಕ್ರಿಯರಾಗಬೇಕೆಂದು ನಾನು ಬಯಸುತ್ತೇನೆ" ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

2018ರಿಂದ ಪಂಜಾಬ್ ತಂಡದಲ್ಲಿ ಗೇಲ್

2018ರಿಂದ ಪಂಜಾಬ್ ತಂಡದಲ್ಲಿ ಗೇಲ್

ಐಪಿಎಲ್‌ನಲ್ಲಿ ಸುದೀರ್ಘ ಕಾಲ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ಕ್ರಿಸ್ ಗೇಲ್ 2018ರಲ್ಲಿ ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿ ಉಳಿದುಕೊಂಡಿದ್ದರು. ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ ಅವರನ್ನು ಮೂಲ ಬೆಲೆ 2 ಕೋಟಿಗೆ ಖರೀದಿಸಿತ್ತು. 2018ರ ಆವೃತ್ತಿಯಲ್ಲಿ 368 ರನ್ ಗಳಿಸಿದ್ದ ಗೇಲ್ ಕಳೆದ ವರ್ಷದ ಆವೃತ್ತಿಯಲ್ಲಿ 490 ರನ್ ಗಳಿಸಿ ಮಿಂಚಿದ್ದರು. ಈ ಬಾರಿಯೂ ಅದೇ ರೀತಿ ಮಿಂಚು ಹರಸುವ ಯತ್ತಾಹದಲ್ಲಿದ್ದಾರೆ ಕ್ರಿಸ್ ಗೇಲ್.

ಭಾರತೀಯ ಕೋಚ್‌ಗಳ ಬಗ್ಗೆ ಕುಂಬ್ಳೆ ಅಭಿಪ್ರಾಯ

ಭಾರತೀಯ ಕೋಚ್‌ಗಳ ಬಗ್ಗೆ ಕುಂಬ್ಳೆ ಅಭಿಪ್ರಾಯ

ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಐಪಿಎಲ್‌ನಲ್ಲಿ ಭಾರತೀಯ ಹಿರಿಯ ಕ್ರಿಕೆಟಿಗರನ್ನು ಕೋಚ್ ಹುದ್ದೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಬಯಸುತ್ತೇನೆ ಎಂದಿದ್ದಾರೆ. ಐಪಿಎಲ್‌ನಲ್ಲಿ ಭಾರತೀಯ ಕೋಚ್‌ಗಳ ಕೊರತೆಯ ಬಗ್ಗೆ ಅವರು ವಿಷಾದವನ್ನು ವ್ಯಕ್ತಪಡಿಸಿದರು. ಎಂಟು ತಂಡಗಳ ಪೈಕಿ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಏಕೈಕ ಭಾರತೀಯ ಅನಿಲ್ ಕುಂಬ್ಳೆ ಆಗಿದ್ದಾರೆ. ಉಳಿದೆಲ್ಲಾ ಪ್ರಾಂಚೈಸುಗಳು ಕೂಡ ವಿದೇಶಿ ಕೋಚ್‌ಗಳನ್ನೇ ಮುಖ್ಯ ಕೋಚ್ ಸ್ಥಾನದಲ್ಲಿರಿಸಿಕೊಂಡಿದೆ.

Story first published: Wednesday, September 9, 2020, 15:37 [IST]
Other articles published on Sep 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X