ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕ್ರಿಸ್ ವೋಕ್ಸ್ ಸ್ಥಾನಕ್ಕೆ ಹೊಸ ಅಸ್ತ್ರವನ್ನು ಹೆಸರಿಸಿದ ಡೆಲ್ಲಿ ಕ್ಯಾಪಿಟಲ್ಸ್

Ipl 2020 : Anrich Nortje Replaced Chris Woakes in Delhi Capitals for the Upcoming Season

ಐಪಿಎಲ್ 13ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಐಪಿಎಲ್‌ನ ಅಂಡರ್‌ಡಾಗ್ಸ್ ತಂಡ ಎನಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಆಟಗಾರನನ್ನು ಸೇರ್ಪಡೆಗೊಳಿಸಿದೆ. ಇಂಗ್ಲೆಂಡ್ ಆಟಗಾರ ಕ್ರಿಸ್ ವೋಕ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರುವ ಕಾರಣ ವೇಗದ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕ್ರಿಸ್ ವೊಕ್ಸ್ ಸ್ಥಾನಕ್ಕೆ ಆಯ್ಕೆಯಾಗಿರುವ ಹೊಸ ಸದಸ್ಯ ಬೇರೆ ಯಾರು ಅಲ್ಲ. ದಕ್ಷಿಣ ಆಫಿಕಾದ ಮಾರಕ ವೇಗಿ ಅನ್ರಿಕ್ ನಾರ್ಟ್ಜೆ. ಈ ಮೂಲಕ ತನ್ನ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ. ಅನ್ರಿಕ್ ನಾರ್ಟ್ಜೆ ಆಗಮನ ಡೆಲ್ಲಿ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.

ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದೇನು?ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ವೃದ್ಧಿಮಾನ್ ಸಾಹ ಹೇಳಿದ್ದೇನು?

ಯುವ ಆಟಗಾರರ ತಂಡ

ಯುವ ಆಟಗಾರರ ತಂಡ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಹನ್ನೆರಡು ಆವೃತ್ತಿಗಳಲ್ಲಿ ಒಂದು ಬಾರಿಯೂ ಚಾಂಪಿಯನ್ಸ್ ಎನಿಸಿಕೊಳ್ಳದ ತಂಡಗಳಲ್ಲಿ ಒಂದೆನಿಸಿದೆ. ಹೀಗಾಗಿ ಈ ಬಾರಿ ಚಾಂಪಿಯನ್ ಪಟ್ಟದತ್ತ ಕಣ್ಣಿಟ್ಟಿದೆ. ಸಾಕಷ್ಟು ಯುವ ಆಟಗಾರರನ್ನೇ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಶ್ರೇಯಸ್ ಅಯ್ಯರ್ ಹೆಗಲೆರಿದೆ.

ಐಪಿಎಲ್‌ನಿಂದ ವೋಕ್ಸ್ ಹಿಂದೆ

ಐಪಿಎಲ್‌ನಿಂದ ವೋಕ್ಸ್ ಹಿಂದೆ

ಇಂಗ್ಲೆಂಡ್‌ನ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 1.5 ಕೋಟಿಗೆ ಬಿಕರಿಯಾಗಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿ ಆಡುವ ದೃಷ್ಠಿಯಿಂದ ಕ್ರಿಸ್ ವೋಕ್ಸ್ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿಯುವ ತೀರ್ಮಾನವನ್ನು ಮಾಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿದ ಅನ್ರಿಕ್ ನಾರ್ಟ್ಜೆ

ಪ್ರತಿಕ್ರಿಯಿಸಿದ ಅನ್ರಿಕ್ ನಾರ್ಟ್ಜೆ

ಅನ್ರಿಕ್ ನಾರ್ಟ್ಜೆ ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ತಂಡಕ್ಕೆ ಹರಾಜಾಗಿದ್ದರು. ಆದರೆ ಭುಜದ ಗಾಯಕ್ಕೊಳಗಾದ ಕಾರಣ ಐಪಿಎಲ್‌ಗೆ ಪದಾರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅನ್ರಿಕ್ ನಾರ್ಟ್ಜೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

Story first published: Tuesday, August 18, 2020, 15:59 [IST]
Other articles published on Aug 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X