ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!

IPL 2020 Anthem Copied? Rapper Krsna Has Lashed Out BCCI

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಿನ್ನಡೆಯ ಸಂಗತಿಗಳು ಇನ್ನೂ ಕೊನೆಗೊಂಡಿಲ್ಲ. ಉದ್ದೇಶಿತ ಟೂರ್ನಿಗೆ ಆರಂಭದಿಂದಲೂ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಾಗಿತ್ತು. ಈಗಲೂ ಸಮಸ್ಯೆಗಳು ನಿಂತಿಲ್ಲ. 2020ರ ಐಪಿಎಲ್‌ ಗೀತೆ ಬೇರೊಂದು ಗೀತೆಯಿಂದ ನಕಲಿ ಮಾಡಲಾಗಿದೆ ಎಂಬ ಆರೋಪ ಈಗ ಕೇಳಿ ಬಂದಿದೆ. ತನ್ನ ಗೀತೆಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಕಾಪಿ ಮಾಡಿದೆ ಎಂದು ರ್‍ಯಾಪರ್ ಕೃಷ್ಣ ಅಸಮಾಧಾನ ಹೊರ ಹಾಕಿದ್ದಾರೆ.

ಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿಐಪಿಎಲ್‌ನಿಂದ ಹಿಂದೆ ಸರಿದ 7 ಪ್ಲೇಯರ್ಸ್ & ಬದಲಿ ಆಟಗಾರರ ಪೂರ್ಣ ಪಟ್ಟಿ

13ನೇ ಆವೃತ್ತಿ ಐಪಿಎಲ್‌ ಅಸಲಿಗೆ ಮಾರ್ಚ್ 29ಕ್ಕೆ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣ ಮುಂದೂಡಲ್ಪಟ್ಟಿತು. ಅದಾಗಿ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಆ ಬಳಿಕ ಚೀನಾ-ಭಾರತ ಗಡಿ ಸಂಘರ್ಷದ ಕಾರಣ ಚೀನಾ ಮೊಬೈಲ್ ಉತ್ಪನ್ನ ಕಂಪನಿ ವಿವೋ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು.

ಭಾರತೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಖಾತರಿಪಡಿಸಿದ ಯುವರಾಜ್ ಸಿಂಗ್!ಭಾರತೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಖಾತರಿಪಡಿಸಿದ ಯುವರಾಜ್ ಸಿಂಗ್!

ಐಪಿಎಲ್ ಪ್ರಾಯೋಜಕತ್ವ ಸಮಸ್ಯೆ ಸರಿ ಮಾಡಿಕೊಳ್ಳುವಷ್ಟರಲ್ಲಿ ಐಪಿಎಲ್‌ ತಂಡಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದವು. ಮತ್ತೀಗ ಗೀತೆಯ ವಿವಾದ ಶುರುವಾಗಿದೆ.

ಸೆಪ್ಟೆಂಬರ್ 6ರಂದು ಗೀತೆ ಬಿಡುಗಡೆ

ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್‌ಗಾಗಿ ಸೆಪ್ಟೆಂಬರ್ 6ರಂದು ಐಪಿಎಲ್ ಗೀತೆ ಬಿಡುಗಡೆ ಮಾಡಲಾಗಿತ್ತು. ಈ ಗೀತೆಯ ಬಗ್ಗೆ ಹಿಂದಿ ರ್‍ಯಾಪರ್ ಕೃಷ್ಣ (KR$NA) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಗೀತೆಯನ್ನು ಬಿಸಿಸಿಐ ಕಾಪಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಏನೀ ಗೀತೆ ವಿವಾದ?

ಐಪಿಎಲ್ ಗೀತೆ ಬಿಡುಗಡೆಯಾಗುವುದಕ್ಕೂ ಮುನ್ನ ರ್‍ಯಾಪರ್ ಕೃಷ್ಣ ಅವರು ದೇಖೋ ಕೌನ್ ಆಯಾ ವಾಪಸ್ (ನೋಡು ಯಾರ್ ಬಂದಿದ್ದಾರೆ ವಾಪಸ್) ಎನ್ನುವ ರ್‍ಯಾಪ್ ಸಾಂಗ್ ಬಿಡುಗಡೆ ಮಾಡಿದ್ದರು. ಇದಕ್ಕೆ ಯುಟ್ಯೂಬ್‌ನಲ್ಲಿ 7.9 ಲಕ್ಷ ವ್ಯೂಸ್ ಬಂದಿತ್ತು. ವಿಶೇಷವೆಂದರೆ ಐಪಿಎಲ್‌ ಗೀತೆ ಕೂಡ ರ್‍ಯಾಪ್ ಕೃಷ್ಣ ಗೀತೆಯನ್ನೇ ಹೋಲುವಂತಿತ್ತು.

ಕೃಷ್ಣ ಗೀತೆಯನ್ನೇ ಹೋಲೋ ಗೀತೆ

ಕೃಷ್ಣ ಗೀತೆಯನ್ನೇ ಹೋಲೋ ಗೀತೆ

ಸೆಪ್ಟೆಂಬರ್ 6ರಂದು ಐಪಿಎಲ್‌ ಹೊರ ತಂದಿರುವ ಗೀತೆಯೂ ಕೃಷ್ಣ ರ್‍ಯಾಪ್ ಸಾಂಗನ್ನೇ ಹೋಲುತ್ತಿತ್ತು. ಐಪಿಎಲ್ ಗೀತೆಗೆ ಆಯೇಂಗೆ ಹಮ್ ವಾಪಸ್ (ನಾವು ಮತ್ತೆ ಬರುತ್ತೇವೆ ವಾಪಸ್) ಎಂಬ ಶೀರ್ಶಿಕೆ ನೀಡಲಾಗಿತ್ತು. ಐಪಿಎಲ್ ಗೀತೆಯಲ್ಲಿ ಕೊರೊನಾ ಮತ್ತು ಐಪಿಎಲ್ ವಿಚಾರ ತರಲಾಗಿತ್ತು. ಗೀತೆಯ ಸಂಗೀತ ಕೂಡ ಒಂಥರಾ 'ದೇಖೋ ಕೌನ್ ಆಯಾ ವಾಪಸ್' ಸಂಗೀತವನ್ನೇ ಹೋಲುತ್ತದೆ. ಇದೇ ಕಾರಣಕ್ಕೆ ಕೃಷ್ಣ ಕಾಪಿ ಆರೋಪ ಹೊರಿಸಿದ್ದಾರೆ.

ಟ್ವಿಟರ್ ಮೂಲಕ ಅಸಮಾಧಾನ

ಐಪಿಎಲ್ ಗೀತೆಯನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ರ್‍ಯಾಪರ್ ಕೃಷ್ಣ, 'ಹಲೋ ಗೆಳೆಯರೆ, ನನ್ನ ದೇಖೋ ಕೌನ್ ಆಯಾ ವಾಪಸ್ ಗೀತೆಯನ್ನು ಐಪಿಎಲ್ ಕೃತಿಚೌರ್ಯಗೊಳಿಸಿ ಆಯೇಂಗೆ ಹಮ್ ವಾಪಸ್ ಗೀತೆಯನ್ನು ಸೃಷ್ಟಿಸಿದೆ. ಇದಕ್ಕೆ ನನ್ನ ಒಪ್ಪಿಗೆ ಪಡೆದಿಲ್ಲ ಅಥವಾ ನನಗೆ ಗೌರವ ನೀಡಿಲ್ಲ. ಈ ಟ್ವೀಟನ್ನು ರೀ ಟ್ವೀಟ್ ಮಾಡುವ ಮೂಲಕ ನನ್ನ ಸಹ ಕಲಾವಿದರು ಮತ್ತು ಗೆಳೆಯರು ಇತರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ' ಎಂದು ಬರೆದುಕೊಂಡಿದ್ದಾರೆ. ಬಿಸಿಸಿಐ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

Story first published: Thursday, September 10, 2020, 15:25 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X