ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಗೆಲುವಿನ ಸೀಕ್ರೆಟ್ಟು ಈ ಫ್ಲೈಯಿಂಗ್ ಕಿಸ್ಸು: ವಿಡಿಯೋ

IPL 2020: Anushka Sharma Gives Flying Kisses To Virat Kohli as He played well agaist Chennai

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 10) ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನೀಡಿದ್ದರು. ಕೇವಲ 52 ಎಸೆತಗಳಲ್ಲಿ ಅಜೇಯ 90 ರನ್ ಬಾರಿಸಿದ್ದರು. ಕೊಹ್ಲಿ ಬ್ಯಾಟಿಂಗ್ ಅಬ್ಬರದಿಂದಲೇ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ 37 ರನ್‌ಗಳ ಗೆಲುವು ದಾಖಲಿಸಿತ್ತು.

'ಕೆಎಲ್ ರಾಹುಲ್ ಆರೆಂಜ್‌ ಕ್ಯಾಪ್‌ಗಾಗಿ ಆಡ್ತಿದ್ದಾರೆ': ಟ್ವೀಟ್‌ಗಳಲ್ಲಿ ಸಿಟ್ಟು!'ಕೆಎಲ್ ರಾಹುಲ್ ಆರೆಂಜ್‌ ಕ್ಯಾಪ್‌ಗಾಗಿ ಆಡ್ತಿದ್ದಾರೆ': ಟ್ವೀಟ್‌ಗಳಲ್ಲಿ ಸಿಟ್ಟು!

ಚೆನ್ನೈ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳನ್ನು ಜಯಿಸಿದಂತಾಗಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿಯೀಗ 4ನೇ ಸ್ಥಾನಕ್ಕೇರಿದ್ದರೆ, 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ 6ನೇ ಸ್ಥಾನದಲ್ಲಿದೆ.

ಐಪಿಎಲ್ 2020: ಚೆನ್ನೈ ವಿರುದ್ದ ವಿಶೇಷ ದಾಖಲೆ ಬರೆದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಐಪಿಎಲ್ 2020: ಚೆನ್ನೈ ವಿರುದ್ದ ವಿಶೇಷ ದಾಖಲೆ ಬರೆದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ

ಅಂದ್ಹಾಗೆ ಹಿಂದಿನ ಹೆಚ್ಚಿನ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದ ಕೊಹ್ಲಿ, ಚೆನ್ನೈ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದರು. ಉತ್ತಮ ಫೀಲ್ಡಿಂಗ್ ನೀಡಿದರು. ಪಂದ್ಯ ಕೂಡ ಗೆದ್ದರು. ಈ ಗೆಲುವಿನ ಹಿಂದಿನ ಸೀಕ್ರೆಟ್ ಏನ್ ಗೊತ್ತಾ? ಫ್ಲೈಯಿಂಗ್ ಕಿಸ್!

ಹಿಂದಿನ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್

ಹಿಂದಿನ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್

ವಿರಾಟ್ ಕೊಹ್ಲಿ ಈ ಬಾರಿ ಆಡಿದ್ದ ಬಹುತೇಕ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 14, ಕಿಂಗ್ಸ್ XI ಪಂಜಾಬ್ ವಿರುದ್ಧ 1, ಮುಂಬೈ ಇಂಡಿಯನ್ಸ್ ವಿರುದ್ಧ 3, ರಾಜಸ್ಥಾನ್ ರಾಯಲ್ಸ್ ವಿರುದ್ಧ 72, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 43 ರನ್ ಬಾರಿಸಿದ್ದರು.

ಅನುಷ್ಕಾರಿಂದ ಫ್ಲೈಯಿಂಗ್ ಕಿಸ್

ಶನಿವಾರದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್‌ಸಿಬಿ ಪರ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ ಅಜೇಯ 90 ರನ್ ಬಾರಿಸಿದ್ದರು. ಆ ವೇಳೆ ಸ್ಟೇಡಿಯಂನ ಸ್ಟ್ಯಾಂಡ್‌ನತ್ತ ಬ್ಯಾಟ್ ಮೇಲೆತ್ತಿ ಕೊಹ್ಲಿ ಸಂಭ್ರಮಾಚರಿಸಿದರು. ಆಗ ಅಲ್ಲಿ ಆರ್‌ಸಿಬಿ ತಂಡದ ಸದಸ್ಯರ ಜೊತೆ ಕುಳಿತಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೆದ್ದು ನಿಂತು ಚಪ್ಪಾಳೆ ತಟ್ಟಿ ಫ್ಲೈಯಿಂಗ್ ಕಿಸ್ ಕೂಡ ನೀಡಿದ್ದರು. ಆ ಪ್ರೀತಿಯ ಬೂಸ್ಟ್ ಪಡೆದುಕೊಂಡ ಕೊಹ್ಲಿ ಚೆನ್ನೈ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್‌, ಫೀಲ್ಡಿಂಗ್‌ನತ್ತ ಗಮನ ಹರಿಸಿದರು. ಪಂದ್ಯ ಜಯಿಸಿದರು.

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಇತ್ತಂಡಗಳ ಸಂಕ್ಷಿಪ್ತ ಸ್ಕೋರ್‌

ಮೊದಲು ಇನ್ನಿಂಗ್ಸ್‌ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ದೇವದತ್ ಪಡಿಕ್ಕಲ್ 33, ವಿರಾಟ್ ಕೊಹ್ಲಿ 90, ವಾಷಿಂಗ್ಟನ್ ಸುಂದರ್ 10, ಶಿವಂ ದೂಬೆ 22 ರನ್ ಸೇರಿಸಿದ್ದರು. ಆರ್‌ಸಿಬಿ 20 ಓವರ್‌ಗೆ 4 ವಿಕೆಟ್ ಕಳೆದು 169 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಶೇನ್ ವಾಟ್ಸನ್ 14, ಅಂಬಾಟಿ ರಾಯುಡು 42, ಎನ್ ಜಗದೀಸನ್ 33 ರನ್ ಸೆರ್ಪಡೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 132 ರನ್ ಬಾರಿಸಿತು.

ಐಪಿಎಲ್‌ನಲ್ಲಿ ಕೊಹ್ಲಿ ಸಾಧನೆ

ಐಪಿಎಲ್‌ನಲ್ಲಿ ಕೊಹ್ಲಿ ಸಾಧನೆ

ಐಪಿಎಲ್‌ನಲ್ಲಿ ಒಟ್ಟು 183 ಪಂದ್ಯಗಳನ್ನಾಡಿರುವ ಕೊಹ್ಲಿ 38.33ರ ಸರಾಸರಿಯಂತೆ 5635 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧ ಶತಕಗಳು ಸೇರಿವೆ. ಇನ್ನು 493 ಫೋರ್ಸ್, 197 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಕೊಹ್ಲಿ ಬಾರಿಸಿದ ವೈಯಕ್ತಿಕ ಅತ್ಯಧಿಕ ರನ್ ಅಂದರೆ 113.

Story first published: Monday, October 12, 2020, 10:14 [IST]
Other articles published on Oct 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X